ಮನೆಯ ಅಂದ ಮಾತ್ರವಲ್ಲ, ಮುಖದ ಚಂದ ಹೆಚ್ಚಿಸುತ್ತೆ ಕ್ಯಾಕ್ಟಸ್... ಹೇಗೆ ಗೊತ್ತಾ?

First Published Oct 20, 2021, 6:38 PM IST

ಕ್ಯಾಕ್ಟಸ್ (Cactus) ಅಥವಾ ಕಳ್ಳಿ ಗಿಡವನ್ನು ಸಾಮಾನ್ಯವಾಗಿ ಮನೆಯಲ್ಲಿ ಅಂದವನ್ನು ಹೆಚ್ಚಿಸಲು ಇಡಲಾಗುತ್ತದೆ. ಚರ್ಮದ ಮೇಲೆ ಕ್ಯಾಕ್ಟಸ್ ಅನ್ನು ಹಚ್ಚುವುದರಿಂದ ಅನೇಕ ಪ್ರಯೋಜನಗಳು ತರುತ್ತವೆ, ನಿಮಗೆ ಇನ್ನೂ ಅವುಗಳ ಬಗ್ಗೆ ತಿಳಿದಿಲ್ಲವೆಂದರೆ , ಹೇಗೆ ಬಳಸಬೇಕೆಂದು ತಿಳಿಯಿರಿ!!

ಈ ಜಗತ್ತಿನಲ್ಲಿ ಬಳಸಲಾಗದ ಸಸ್ಯವಿದ್ದರೆ ಕ್ಯಾಕ್ಟಸ್. ಆದರೆ ಕ್ಯಾಕ್ಟಸ್ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ಇಲ್ಲಿಯವರೆಗೆ ತಿಳಿಯದೇ ಇರಬಹುದು. ಚರ್ಮವನ್ನು ಸುಂದರಗೊಳಿಸಲು (skin care) ಕ್ಯಾಕ್ಟಸ್ ಜೆಲ್ ಅನ್ನು ಬಳಸಲಾಗುತ್ತದೆ. ಕ್ಯಾಕ್ಟಸ್ ಅನ್ನು ಹಾಥಾರ್ನ್ ಎಂದೂ ಕರೆಯಲಾಗುತ್ತದೆ 

ಕ್ಯಾಕ್ಟಸ್ ಜೆಲ್ (cactus gel)ಪ್ರಯೋಜನಗಳು: 
ಮೊದಲು ಕ್ಯಾಕ್ಟಸ್ ಒಳಗೆ ಜೆಲ್ ಅನ್ನು ತೆಗೆಯಿರಿ.
ನಂತರ ಒಂದು ಬೌಲ್ ಗೆ ಕ್ಯಾಕ್ಟಸ್ ಜೆಲ್ ಸೇರಿಸಿ.
ಈ ಜೆಲ್ ನೊಂದಿಗೆ 1/2 ಟೀ ಚಮಚ ಜೇನುತುಪ್ಪ, 1/2 ಟೀ ಚಮಚ ಏಲಕ್ಕಿ ಪುಡಿ ಮತ್ತು ಒಂದು ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿ.
ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

ತಯಾರಾದ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿ ಒಣಗಲು ಬಿಡಿ.
ಪೇಸ್ಟ್ ಒಣಗಿದಾಗ, ಸಾಮಾನ್ಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.(Face Wash)
ಕ್ಯಾಕ್ಟಸ್ ಜೆಲ್ ಅನ್ನು ನೇರವಾಗಿ ಚರ್ಮದ (Skin) ಮೇಲೆ ಅನ್ವಯಿಸಬಹುದು.
 

ಚರ್ಮದ ಮೇಲೆ ಕ್ಯಾಕ್ಟಸ್ ಜೆಲ್ ಹಚ್ಚುವ ಅಜ್ಞಾತ ಪ್ರಯೋಜನಗಳು  (Unkown benefits of cactus gel)
ಚರ್ಮದ ಟ್ಯಾನಿಂಗ್ ಅನ್ನು ತೆಗೆದುಹಾಕಲು ಕ್ಯಾಕ್ಟಸ್ ಜೆಲ್ ಅನ್ನು ಬಳಸಲಾಗುತ್ತದೆ. ಕ್ಯಾಕ್ಟಸ್ ಜೆಲ್ ನಲ್ಲಿರುವ ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕೊಬ್ಬಿನಾಮ್ಲಗಳು ಚರ್ಮದ ಬಣ್ಣವನ್ನು ತಿಳಿಯಾಗಿಸಲು ಸಹಾಯ ಮಾಡುತ್ತದೆ.

ಕ್ಯಾಕ್ಟಸ್ ಜೆಲ್ ಎಣ್ಣೆಯುಕ್ತ ಚರ್ಮವನ್ನು (Oily skin)ಹೊಂದಿರುವ ಜನರಿಗೆ ಸಹ ಸಹಾಯಕವಾಗಿದೆ. ಇದು ಚರ್ಮದಿಂದ ಸೆಬಮ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.
ಕ್ಯಾಕ್ಟಸ್ ಜೆಲ್ ಚರ್ಮದ ಬಣ್ಣವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

ಕ್ಯಾಕ್ಟಸ್ ಜೆಲ್ ಚರ್ಮದ ಒರಟುತನವನ್ನು (dry skin) ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಏಕೆಂದರೆ ಇದು ಚರ್ಮದ ಹೈಡ್ರೇಟಿಂಗ್ ಅನ್ನು ನಿರ್ವಹಿಸುತ್ತದೆ. ಇದರಿಂದ ಚರ್ಮ ಮೃದುವಾಗುತ್ತದೆ. ಆದುದರಿಂದ ಇದನ್ನು ಬ್ಯೂಟಿ ಪ್ರಾಡಕ್ಟ್ (beauty product)  ಮಾಡಬಹುದು. 

ಕ್ಯಾಕ್ಟಸ್ ಎಣ್ಣೆಯು (cactus oil) ಕೂದಲಿಗೆ ಅನೇಕ ಪ್ರಯೋಜನ ನೀಡುತ್ತೆ, ಏಕೆಂದರೆ ಅದರ ಹೆಚ್ಚಿನ ಪೋಷಕಾಂಶದ ಅಂಶವಿದೆ. ಮೃದುವಾದ, ಬಲವಾದ, ಆರೋಗ್ಯಕರ ಕೂದಲನ್ನು (healthy hair) ನೀಡುತ್ತೆ . ವೇಗವಾಗಿ ಕೂದಲು ಬೆಳವಣಿಗೆ ಮತ್ತು ಕಡಿಮೆ ಕೂದಲು ಉದುರುವಿಕೆಗು ಕಾರಣವಾಗಿದೆ. 

ಕ್ಯಾಕ್ಟಸ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳಿವೆ (anti oxident), ಅದು  ಚರ್ಮಕ್ಕೆ ಅತ್ಯಗತ್ಯ. ಈ ಆಂಟಿ ಆಕ್ಸಿಡೆಂಟ್ಸ್  ಚರ್ಮವನ್ನು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ಕ್ಯಾಕ್ಟಸ್‌ನಲ್ಲಿ ವಿಟಮಿನ್ ಕೆ ಸಹ ಇದೆ, ಇದು  ಚರ್ಮವನ್ನು ಪೋಷಿಸುತ್ತದೆ. ಇದು ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳಂತಹ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ. 

click me!