ಜ್ವರವಿದ್ದಾಗ ಸುಲಭವಾಗಿ ಜೀರ್ಣವಾಗುವ ಆಹಾರ ನೀಡುವುದು ಉತ್ತಮ. ತರಕಾರಿ ಸೂಪ್, ಉದ್ದಿನ ಬೇಳೆ ಸಾರು, ಕಿಚಿಡಿ, ದೋಸೆ, ಇಡ್ಲಿ, ಬಾಳೆಹಣ್ಣು ಮುಂತಾದ ಆಹಾರಗಳನ್ನು ಕೊಡಬಹುದು. ಜ್ವರವಿದ್ದಾಗ ಪ್ರೋಟೀನ್ ಕೂಡ ಬೇಕಾಗುತ್ತದೆ. ಆದರೆ ಅದು ಸುಲಭವಾಗಿ ಜೀರ್ಣವಾಗುವ ರೂಪದಲ್ಲಿರಬೇಕು. ಹೆಸರುಬೇಳೆ, ಉದ್ದಿನ ಬೇಳೆ, ಸಜ್ಜೆಗಳಿಂದ ಮಾಡಿದ ಆಹಾರಗಳು ಉತ್ತಮ ಆಯ್ಕೆ. ಪ್ರೋಟೀನ್ ದೇಹಕ್ಕೆ ಶಕ್ತಿ ನೀಡುವುದಲ್ಲದೆ, ಸೋಂಕನ್ನು ಎದುರಿಸಲು ಸಹಾಯ ಮಾಡುತ್ತದೆ.