Health Tips: ಜೀರ್ಣಕ್ರಿಯೆ ಮಾತ್ರವಲ್ಲ, ಪ್ರತಿದಿನ ಮಜ್ಜಿಗೆ ಕುಡಿಯೋದ್ರಿಂದ ಸಿಗುತ್ತೆ ಇಷ್ಟೊಂದು ಪ್ರಯೋಜನ

Published : Nov 17, 2025, 12:54 PM IST

Health Tips: ಊಟ ಆದ ಮೇಲೆ ಜೀರ್ಣಕ್ರಿಯೆ ಚೆನ್ನಾಗಿರಬೇಕು ಎಂದು ಸಾಮಾನ್ಯವಾಗಿ ಎಲ್ಲರೂ ಮಜ್ಜಿಗೆ ಕುಡಿಯುತ್ತಾರೆ. ಆದರೆ ನಿಮಗೆ ಗೊತ್ತಾ ಪ್ರತಿದಿನ ಮಜ್ಜಿಗೆ ಕುಡಿಯೋದರಿಂದ ಎಷ್ಟೊಂದು ಪ್ರಯೋಜನಗಳಿವೆ ಅನ್ನೋದು. ಇಲ್ಲಿದೆ ಆ ಕುರಿತು ಸಂಪೂರ್ಣ ಮಾಹಿತಿ.

PREV
17
ಮಜ್ಜಿಗೆಯ ಪ್ರಯೋಜನ

ಸಾಮಾನ್ಯವಾಗಿ ನಾವು ಊಟ ಆದ ಬಳಿಕ ಮಜ್ಜಿಗೆ ಸೇವಿಸುತ್ತೇವೆ, ಅಥವಾ ಹೆಚ್ಚು ಬಿಸಿಲು ಇದ್ದಾಗ ಸೆಕೆ, ಅಥವಾ ಡಿಹೈಡ್ರೇಶನ್ ನಿವಾರಿಸಲು ನಾವು ಮಜ್ಜಿಗೆ ಕುಡಿಯುತ್ತೇವೆ. ಆದರೆ ನಿಮಗೆ ಗೊತ್ತಾ, ಪ್ರತಿದಿನ ಒಂದು ಲೋಟ ಮಜ್ಜಿಗೆ ಸೇವಿಸೋದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.

27
ಹೈಡ್ರೇಟ್ ಮಾಡುತ್ತೆ

ಬೇಸಿಗೆಯಲ್ಲಿ ಡೀಹೈಡ್ರೇಶನ್ (dehydration) ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಎದುರಿಸಲು, ಮಜ್ಜಿಗೆಯನ್ನು ಸೇವಿಸುವುದು ಉತ್ತಮ.. ಬೇಸಿಗೆಯಲ್ಲಿ ಮಜ್ಜಿಗೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ.

37
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ನಿಮಗೆ ಜೀರ್ಣಕ್ರಿಯೆಯ ಸಮಸ್ಯೆಗಳಿದ್ದರೆ, ನಿಮ್ಮ ಆಹಾರದಲ್ಲಿ ಮಜ್ಜಿಗೆಯನ್ನು ಸೇರಿಸಿಕೊಳ್ಳುವುದನ್ನು ಮರೆಯಬೇಡಿ. ಬೇಸಿಗೆಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆಗಳು ಸಾಮಾನ್ಯ. ಮಜ್ಜಿಗೆ ಸೇವನೆಯು ಆಸಿಡಿಟಿ, ಅಜೀರ್ಣ ಮತ್ತು ಹೊಟ್ಟೆ ನೋವಿನಂತಹ ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಮೊಸರಿನಲ್ಲಿ ಪ್ರೋಬಯಾಟಿಕ್‌ಗಳಿವೆ, ಇದು ಹೊಟ್ಟೆಗೆ ಪ್ರಯೋಜನಕಾರಿಯಾಗಿದೆ.

47
ಮೂಳೆಗಳಿಗೆ ಪ್ರಯೋಜನಕಾರಿ

ನಿಮಗೆ ಮೂಳೆ ಸಮಸ್ಯೆಗಳಿದ್ದರೆ, ಮಜ್ಜಿಗೆ ಸೇವಿಸುವುದು ತುಂಬಾನೆ ಉತ್ತಮ.. ಮಜ್ಜಿಗೆಯಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.

57
ತೂಕ ನಿಯಂತ್ರಣ ಮಾಡುತ್ತೆ

ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು, ಜನರು ಹೆಚ್ಚಾಗಿ ತಮ್ಮ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತಾರೆ. ನೀವು ನಿಮ್ಮ ತೂಕವನ್ನು ನಿಯಂತ್ರಿಸಲು ಬಯಸಿದರೆ, ಮಜ್ಜಿಗೆ ಸೇವಿಸುವುದು ಬೆಸ್ಟ್. .

67
ಆರೋಗ್ಯಕರ ಚರ್ಮ

ಮಜ್ಜಿಗೆ ಸೇವಿಸುವುದರಿಂದ ಸ್ಕಿನ್ ಆರೋಗ್ಯಕರವಾಗಿರುತ್ತೆ. ನಿಯಮಿತವಾಗಿ ಮಜ್ಜಿಗೆ ಸೇವಿಸುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಹೊಳೆಯುತ್ತದೆ. ಮಜ್ಜಿಗೆ ಸೇವನೆಯು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

77
ಬಲವಾದ ರೋಗನಿರೋಧಕ ಶಕ್ತಿ

ಬೇಸಿಗೆಯಲ್ಲಿ ರೋಗದ ಅಪಾಯ ಹೆಚ್ಚಾಗುತ್ತದೆ. ಮಜ್ಜಿಗೆ ಕುಡಿಯುವುದರಿಂದ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

Read more Photos on
click me!

Recommended Stories