ಈ 5 ಮೀನು ಹೃದಯದ ಕಾಯಿಲೆ, ಶೀತ ಸೇರಿದಂತೆ ಹತ್ತು ಹಲವು ಕಾಯಿಲೆಗೆ ರಾಮಬಾಣ

Published : Nov 17, 2025, 11:19 AM IST

Winter health benefits of fish: ಚಳಿಗಾಲದಲ್ಲಿ ಈ 5 ಅತ್ಯುತ್ತಮ ಮೀನುಗಳನ್ನು ಸೇವಿಸಿ. ಇವು ಜೀವಸತ್ವಗಳು ಮತ್ತು ಪ್ರೋಟೀನ್‌ಗಳ ಉಗ್ರಾಣವಾಗಿದ್ದು, ನಿಮ್ಮ ಹೃದಯವು ಸಂತೋಷದಿಂದ ಕುಣಿದಾಡುತ್ತದೆ. 

PREV
17
ಮೀನು ತಿನ್ನುವುದೇ ಖುಷಿ

ಚಳಿಗಾಲದಲ್ಲಿ ಮೀನು ತಿನ್ನುವುದೇ ಒಂಥರಾ ಖುಷಿ. ವಿಶೇಷವಾಗಿ ಈ ಐದು ಮೀನುಗಳನ್ನು ಪ್ರತಿದಿನ ತಿಂದರೆ ಅವು ನಮ್ಮ ದೇಹಕ್ಕೆ ಸಾಕಷ್ಟು ಜೀವಸತ್ವಗಳು ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತವೆ. ಅಷ್ಟೇ ಅಲ್ಲ, ನೀವು ಅವುಗಳಿಂದ ಸೂಪ್ ತಯಾರಿಸಿ ಸಹ ಕುಡಿಯಬಹುದು.

27
ಹಲವು ಬಗೆಯ ಮೀನುಗಳು ಲಭ್ಯ

ಚಳಿಗಾಲದಲ್ಲಿ ಮೀನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಆದರೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಮೀನುಗಳು ಲಭ್ಯವಿದ್ದು, ಯಾವುದನ್ನು ತಿಂದರೆ ಒಳ್ಳೆಯದು ಎಂದು ನಿಮಗೆ ಕನ್‌ಫ್ಯೂಸ್ ಇದ್ದರೆ ಇಲ್ಲಿದೆ ನೋಡಿ ಮಾಹಿತಿ..

37
ಸಾಲ್ಮನ್ ಮೀನು

ನಿಮಗೆ ಶೀತವಿದ್ದರೆ ಈ ಋತುವಿನಲ್ಲಿ ಸಾಲ್ಮನ್ ಮೀನು ಸೇವಿಸಿ. ಈ ಮೀನು ಒಮೆಗಾ -3 ಮತ್ತು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

47
ಟ್ಯೂನ ಮೀನು

ಮಾರುಕಟ್ಟೆಯಲ್ಲಿ ಹಲವು ಬಗೆಯ ಮೀನುಗಳು ಲಭ್ಯವಿದ್ದರೂ, ಈ ಟ್ಯೂನ ಮೀನು ವಿಶೇಷವಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

57
ಬಂಗುಡೆ ಮೀನು

ನೀವು ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದು ಬಯಸಿದರೆ ಮ್ಯಾಕೆರೆಲ್(ಬಂಗುಡೆ) ಮೀನು ತಿನ್ನಲು ಪ್ರಾರಂಭಿಸಿ. ಈ ಮೀನು ಚಳಿಗಾಲದಲ್ಲಿ ನಿಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ. ಈ ಮೀನು ಒಮೆಗಾ-3 ನ ಸಮೃದ್ಧ ಮೂಲವಾಗಿದ್ದು, ಹೃದಯದ ಆರೋಗ್ಯಕ್ಕಂತೂ ತುಂಬಾ ಒಳ್ಳೆಯದು.

67
ಕಾಡ್ ಮೀನು

ಒಂದು ವೇಳೆ ರುಚಿಕರವಾದ ಮೀನುಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಈ ಕಾಡ್ ಮೀನನ್ನು ಮನೆಯಲ್ಲಿಯೇ ತಯಾರಿಸಿ. ಈ ಮೀನನ್ನು ಸ್ಟ್ಯೂ ಮತ್ತು ಸೂಪ್ ನಂತಹ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ ಇದನ್ನು ತುಂಬಾ ರುಚಿಕರ ಮತ್ತು ಪೌಷ್ಟಿಕ ಮೀನು ಎಂದು ಪರಿಗಣಿಸಲಾಗುತ್ತದೆ.

77
ರೋಹು ಮೀನು

ಇನ್ನು ರೋಹು ಮೀನು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಜನರು ಇದನ್ನು ತುಂಬಾ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಈ ಮೀನನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಈ ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಡಿ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳನ್ನು ಆರೋಗ್ಯವಾಗಿಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories