Coconut Water vs Lemon Juice: ಎಳನೀರು ಮತ್ತು ನಿಂಬೆ ಹಣ್ಣಿನ ಪಾನಕ ಎರಡೂ ಆರೋಗ್ಯಕರ ಪಾನೀಯಗಳು ಎಂಬ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಈ ಎರಡು ಪಾನೀಯಗಳಲ್ಲಿ ಯಾವುದು ಬೆಸ್ಡ್ ಅಂತ ನಿಮಗೆ ಗೊತ್ತಿದೆಯಾ?
ದೇಹಕ್ಕೆ ನೀರು ಕುಡಿಯೋದು ತುಂಬಾ ಮುಖ್ಯ. ಇಲ್ಲಾಂದ್ರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಸಮಸ್ಯೆ ಆಗುತ್ತೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಕ್ಕರೆ ದೇಹದ ಕಾರ್ಯಗಳು ಸರಿಯಾಗಿ ನಡೆಯುತ್ತವೆ. ದೇಹದ ಉಷ್ಣತೆ ಕೂಡ ಸಮತೋಲನದಲ್ಲಿ ಇರುತ್ತೆ.
ನೀರು ಕುಡಿಯೋದರ ಜೊತೆಗೆ ಎಳನೀರು ಅಥವಾ ನಿಂಬೆ ರಸ ಕುಡಿಯೋದು ಕೂಡ ಒಳ್ಳೆಯದು. ಆದ್ರೆ ಈ ಎರಡರಲ್ಲಿ ಯಾವುದು ಹೆಚ್ಚು ಒಳ್ಳೆಯದು ಅಂತ ಗೊಂದಲ ಇರುತ್ತೆ. ಅದಕ್ಕೆ ಉತ್ತರ ಈ ಪೋಸ್ಟ್‌ನಲ್ಲಿದೆ.
24
ನಿಂಬೆ ರಸ
ನಿಂಬೆ ರಸದಲ್ಲಿ ವಿಟಮಿನ್ ಸಿ ಸಿಕ್ಕಾಪಟ್ಟೆ ಇದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತೆ. ಕಡಿಮೆ ಕ್ಯಾಲೋರಿ ಮತ್ತು ಖನಿಜಾಂಶಗಳು ಇರೋದ್ರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿದ್ರೆ ದೇಹದಲ್ಲಿರೋ ವಿಷಕಾರಿ ಅಂಶಗಳು ಹೊರಗೆ ಹೋಗುತ್ತವೆ.
34
ಎಳನೀರು
ಎಳನೀರು ಒಂದು ನೈಸರ್ಗಿಕ ಪಾನೀಯ. ಇದರಲ್ಲಿ ಎಲೆಕ್ಟ್ರೋಲೈಟ್ಸ್ ಸಿಕ್ಕಾಪಟ್ಟೆ ಇದೆ. ದೇಹಕ್ಕೆ ಶಕ್ತಿ ಕೊಡುತ್ತದೆ. ಪೊಟ್ಯಾಶಿಯಂ, ಮ್ಯಾಂಗನೀಸ್, ವಿಟಮಿನ್ ಬಿ, ಸೋಡಿಯಂ ಇದೆ. ವಾಂತಿ, ಭೇದಿ ಆದಾಗ ಎಳನೀರು ಕುಡಿದ್ರೆ ಒಳ್ಳೆಯದು ಅಂತ ಹಿರಿಯರು ಹೇಳ್ತಾರೆ. ಸುಲಭವಾಗಿ ಜೀರ್ಣ ಆಗುತ್ತೆ. ಹಾಗಾಗಿ ಎಲ್ಲರೂ ಕುಡಿಯಬಹುದು.
- ಎರಡೂ ಪಾನೀಯಗಳಲ್ಲಿ ಪೌಷ್ಟಿಕಾಂಶದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ ಅಂತ ತಜ್ಞರು ಹೇಳ್ತಾರೆ. ಎಳನೀರಲ್ಲಿ ಖನಿಜಾಂಶಗಳು ಜಾಸ್ತಿ ಇರೋದ್ರಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡೋರಿಗೆ ಮತ್ತು ಬಿಸಿಲಿನಿಂದ ಆಯಾಸ ಆದವರಿಗೆ ಒಳ್ಳೆಯದು.
- ನಿಂಬೆ ರಸ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಮತ್ತು ನೀರು ಕೊಡುತ್ತೆ. ದೇಹಕ್ಕೆ ಚೈತನ್ಯ ತುಂಬುತ್ತೆ.
- ನಿಮ್ಮ ಆರೋಗ್ಯಕ್ಕೆ ತಕ್ಕಂತೆ ಎರಡರಲ್ಲಿ ಯಾವುದಾದ್ರೂ ಒಂದನ್ನ ಕುಡಿಯಬಹುದು. ವ್ಯಾಯಾಮ ಮಾಡಿದ ಮೇಲೆ ಎಳನೀರು ಕುಡಿಯೋದು ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋಕೆ ನಿಂಬೆ ರಸ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.