Breathalyzer Test: ರಸ್ತೆಯಲ್ಲಿ ಸಂಚಾರ ಪೊಲೀಸರು ತಪಾಸಣೆಗಾಗಿ ನಿಂತಿರುವುದನ್ನು ನೀವು ನೋಡಿರಬಹುದು. ಈ ಸಮಯದಲ್ಲಿ ಅಪಘಾತಗಳನ್ನು ತಡೆಗಟ್ಟಲು ಪೊಲೀಸರು ಬ್ರೀಥಲೈಜರ್ ಟೆಸ್ಟ್ ಮಾಡುತ್ತಾರೆ. ಇದು ಚಾಲಕ ಕುಡಿದಿದ್ದಾನೋ ಇಲ್ಲವೋ ಎಂಬುದನ್ನು ತೋರಿಸುತ್ತದೆ. ಅಷ್ಟೇ ಅಲ್ಲ, ತಪಾಸಣೆಯ ಸಮಯದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸಲಾಗುತ್ತದೆ.
26
ಕೆಎಸ್‌ಆರ್‌ಟಿಸಿ ಚಾಲಕರ ವಿಚಾರದಲ್ಲೂ...
ಆದರೆ ಯಾರಾದರೂ ಮದ್ಯ ಸೇವಿಸದೇ ಇದ್ದರೂ ಅವರ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದರೆ ಏನಾಗುತ್ತದೆ?. ಇದೀಗ ಕೆಎಸ್‌ಆರ್‌ಟಿಸಿ ಚಾಲಕರ ವಿಚಾರದಲ್ಲೂ ಇದೇ ರೀತಿ ಆಗಿದೆ. ಅವರನ್ನು ಪೊಲೀಸರು ಟೆಸ್ಟ್ ಮಾಡಲು ನಿಲ್ಲಿಸಿದಾಗ ಕೆಲವರ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಮಜಾ ಅಂದ್ರೆ ಅವರು ಮದ್ಯ ಸೇವಿಸಿಯೇ ಇಲ್ಲ. ಆ ನಂತರ ಗೊತ್ತಾಗಿದ್ದೇನೆಂದ್ರೆ ಹಲಸಿನ ಹಣ್ಣು ತಿಂದ ಕಾರಣ ಈ ಫಲಿತಾಂಶ ಬಂದಿದೆ.
36
ಕುಡಿಯದಿದ್ದರೂ ಯಾಕ್ಹೀಗೆ?
ವರದಿಯ ಪ್ರಕಾರ, ಪತ್ತನಂತಿಟ್ಟ ಜಿಲ್ಲೆಯ ಪಂದಳಂ ಡಿಪೋದ ಕೆಎಸ್‌ಆರ್‌ಟಿಸಿ ಚಾಲಕರನ್ನು ಸಂಚಾರ ಪೊಲೀಸರು ತಪಾಸಣೆಗಾಗಿ ತಡೆದರು. ಈ ಸಮಯದಲ್ಲಿ, ಚಾಲಕರು ಸಂಪೂರ್ಣ ಪ್ರಾಮಾಣಿಕತೆಯಿಂದ ಸರದಿಯಲ್ಲಿ ನಿಂತರು. ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಅವರು ಮದ್ಯ ಸೇವಿಸಿರಲಿಲ್ಲ, ಆದರೆ ಅವರು ಬ್ರೀಥಲೈಜರ್ ಟೆಸ್ಟ್‌ನಲ್ಲಿ ಫೆಲ್ಯೂರ್ ಆದ್ರು. ಮಷಿನ್ 10 ರ ರೀಡಿಂಗ್ ತೋರಿಸಿತು, ಅದು ನಿಗದಿತ ಮಿತಿಯನ್ನು ಮೀರಿತ್ತು. ಚಾಲಕರು ತಾವು ಕುಡಿದಿಲ್ಲ ಎಂದು ಹೇಳಿದರು. ನಂತರ ಅವರನ್ನು ಮತ್ತೊಮ್ಮೆ ಪರೀಕ್ಷಿಸಲು ಪೊಲೀಸರಿಗೆ ಕೇಳಲಾಯಿತು.
46
ಹಲಸಿನ ಹಣ್ಣು ಸೇವನೆ
"ಚಾಲಕರು ಪೊಲೀಸರಿಗೆ ತಾವು ಮದ್ಯ ಸೇವಿಸಿಲ್ಲ, ಆದರೆ ಸ್ವಲ್ಪ ಸಮಯದ ಹಿಂದೆ ಹಲಸಿನ ಹಣ್ಣು ತಿಂದಿದ್ದೇವೆ" ಎಂದು ಹೇಳಿದರು. ಈ ಕಾರಣದಿಂದಾಗಿ, ಟೆಸ್ಟ್ ಅಲ್ಲಿ ರೀಡಿಂಗ್ ಸರಿಯಾಗಿಲ್ಲ.
56
ಪರೀಕ್ಷೆ ಮಾಡಿದ ತಕ್ಷಣ
ಇದರಲ್ಲಿ, ಅವರ ಮೊದಲ ಟೆಸ್ಟ್ ಸರಿಯಾಗಿ ಬಂದಿತು, ಆದರೆ ಹಲಸಿನ ಹಣ್ಣು ತಿಂದ ನಂತರ ಪರೀಕ್ಷೆ ಮಾಡಿದ ತಕ್ಷಣ ಟೆಸ್ಟ್ ಫೆಲ್ಯೂರ್ ಆಯ್ತು. ಇದರಲ್ಲಿ, ವ್ಯಕ್ತಿಯು ಮಾದಕ ವ್ಯಸನಿಯಾಗಿದ್ದಾನೆ ಎಂದು ಘೋಷಿಸಲಾಯಿತು. ವರದಿಗಳ ಪ್ರಕಾರ, ಹಲಸಿನ ಹಣ್ಣು ತಿಂದ ನಂತರ, ಎಥೆನಾಲ್ ಕುರುಹುಗಳು ಬಾಯಿಯಲ್ಲಿ ಉಳಿಯುವುದರಿಂದ ಈ ರೀತಿ ಸಂಭವಿಸುತ್ತದೆ. ಇದರ ನಂತರ ಪರೀಕ್ಷೆ ಮಾಡಿದಾಗ ಅದು ಪಾಸಿಟಿವ್ ತೋರಿಸುತ್ತದೆ.
66
ಕೆಲವು ಆಹಾರಗಳು
ಅಂದಹಾಗೆ ಕೆಲವು ಮಾಗಿದ ಅಥವಾ ಹುದುಗಿಸಿದ ಆಹಾರಗಳು ನೀವು ಒಂದು ಹನಿ ಡ್ರಿಂಕ್ಸ್ ಮುಟ್ಟದಿದ್ದರೂ ಸಹ ಬ್ರೀಥಲೈಜರ್ ಟೆಸ್ಟ್‌ನಲ್ಲಿ ನೀವು ಕುಡಿದ್ದೀರಿ ಎಂದೇ ತೋರಿಸುತ್ತದೆ.