ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ಪ್ರೆಷರ್ ಕುಕ್ಕರ್ ಇಲ್ಲದ ಮನೆಯೇ ಇಲ್ಲ ಎನ್ನಬಹುದೇನೋ. ಫಟಾಫಟ್ ಅಡುಗೆಗೆ ಇದು ಹೇಳಿ ಮಾಡಿಸಿದ್ದು. ಕೆಲ ದಶಕಗಳ ಹಿಂದೆ ಕುಕ್ಕರ್ ಇಲ್ಲದ ಮನೆ ಎಂದರೆ ಬಡವರ ಮನೆ ಎಂದೇ ಬಿಂಬಿತವಾಗಿತ್ತು. ಆದರೆ ಕಾಲಚಕ್ರ ಉರುಳಿದಂತೆ, ಆ ಬಡವರ ಮನೆಯಲ್ಲಿ ಈಗ ಆಧುನಿಕ ವಸ್ತುಗಳು ಬರುತ್ತಿದ್ದರೆ, ಶ್ರೀಮಂತರು ಎನ್ನಿಸಿಕೊಂಡವರು, ಆರೋಗ್ಯದ ದೃಷ್ಟಿಯಿಂದ ಆ ಹಳೆಯ ಮಾದರಿಗಳನ್ನೇ ಬಳಸುವುದು ಮಾಮೂಲಾಗಿಬಿಟ್ಟಿದೆ.
28
ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ಕ್ಯಾನ್ಸರ್ನಂಥ ಮಹಾಮಾರಿ ಸೇರಿದಂತೆ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಮಸ್ಯೆಗಳಿಗೆ ಕೇಂದ್ರಬಿಂದು ಆಗುತ್ತಿರುವುದೇ ನಮ್ಮ ಅಡುಗೆ ಮನೆ ಎನ್ನುವ ಅರಿವು ಆಗುತ್ತಿದ್ದಂತೆಯೇ ಕಬ್ಬಿಣ, ಮಣ್ಣಿನ ಪಾತ್ರೆಗಳು ಶ್ರೀಮಂತರ ಮನೆಯ ಅಡುಗೆಮನೆ ಸೇರುತ್ತಿವೆ. ನಮ್ಮ ಹಿಂದಿನವರು ಮಾಡುತ್ತಿರುವ ಕ್ರಮವೇ ನಿಜವಾದ ಆರೋಗ್ಯದ ಗುಟ್ಟು ಎನ್ನುವುದು ಅರಿವಾಗಲು ನಮಗೆ ಹಲವಾರು ದಶಕಗಳೇ ಬೇಕಾದವು..
38
ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ಅದೇ ರೀತಿ ಪ್ರೆಷರ್ ಕುಕ್ಕರ್. ಪಾತ್ರೆಯಲ್ಲಿ ಅನ್ನನೋ, ತರಕಾರಿಗಳನ್ನೋ, ಬೇಳೆಯನ್ನೋ ಇಟ್ಟು ಅದು ಯಾವಾಗ ರೆಡಿ ಆಗುತ್ತದೆ ಎನ್ನುವುದನ್ನು ಪದೇ ಪದೇ ನೋಡಬೇಕಾಗಿರುವುದು ಒಂದೆಡೆಯಾದರೆ, ಮಧ್ಯೆ ಮಧ್ಯೆ ಹೋಗಿ ಸೌಟಿನಿಂದ ಕೈಯಾಡಿಸಬೇಕಾದ ಸ್ಥಿತಿ ಮತ್ತೊಂದೆಡೆ, ಇದಕ್ಕಾಗಿ ಮಣ್ಣಿನ ಒಲೆಗಳು ಇಲ್ಲದ್ದರಿಂದ ಗ್ಯಾಸ್ ಖರ್ಚು ಬೇರೆ. ಇವೆಲ್ಲಕ್ಕೂ ತೆರೆ ಎಳೆಯಲು ಬಂದಿರುವುದೇ ಪ್ರೆಷರ್ ಕುಕ್ಕರ್. ಆದರೆ ಇದರಲ್ಲಿ ಬೇಯಿಸುವ ಅನ್ನ ಹಾಗೂ ತರಕಾರಿಗಳು ಆರೋಗ್ಯಕ್ಕೆ ಎಷ್ಟು ಮಾರಕ ಎನ್ನುವ ಬಗ್ಗೆ ಇದಾಗಲೇ ಅಧ್ಯಯನ ತಿಳಿಸಿದೆ.
48
ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ಅದು ಹೋಗಲಿ ಬಿಡಿ, ಬೇರೆ ದಾರಿ ಇಲ್ಲ ಎನ್ನುವುದಾದರೆ, ಕೊನೆಯ ಪಕ್ಷ ಪ್ರಾಣಕ್ಕೆ ಕಂಟಕ ತರುವಂಥದ್ದು ಏನು ಎನ್ನುವ ಬಗ್ಗೆ ತಿಳಿದುಕೊಳ್ಳಬೇಕಿದೆ. ಪ್ರೆಷರ್ ಕುಕ್ಕರ್ ಬಳಸುವುದಾದರೆ ಅಲ್ಯುಮಿನಿಯಮ್ ಬಳಸಲೇಬಾರದು ಎನ್ನುತ್ತಾರೆ ವೈದ್ಯರು.
58
ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ಅದರಲ್ಲಿಯೂ ಬಹಳ ವರ್ಷ ಒಂದೇ ಪ್ರೆಷರ್ ಕುಕ್ಕರ್ ಬಳಸುತ್ತಿದ್ದರೆ ಅದು ಜೀವಕ್ಕೂ ಕುತ್ತು ತರುತ್ತದೆ. ಇತ್ತೀಚಿಗೆ ದೆಹಲಿಯ ವ್ಯಕ್ತಿಯೊಬ್ಬರು ತುಂಬಾ ಹಳೆದ ಪ್ರೆಷರ್ ಕುಕ್ಕರ್ನಲ್ಲಿ ಮಾಡಿದ ಅಡುಗೆಯಿಂದಾಗಿ ಫುಡ್ ಪಾಯಿಸನ್ ಆಗಿ ಮೃತಪಟ್ಟಿರುವ ಘಟನೆಯೂ ನಡೆದಿದೆ.
68
ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ಬಹಳ ಕಾಲ ಒಂದೇ ಪ್ರೆಷರ್ ಕುಕ್ಕರ್ ಬಳಸಿದರೆ, ಅದು ಸ್ಕ್ಯಾಚ್ ಆಗುತ್ತದೆ. ಅದರಲ್ಲಿಯೂ ಹೆಚ್ಚಿನವರು ನೇರವಾಗಿ ಕುಕ್ಕರ್ನಲ್ಲಿಯೇ ಬೇಳೆ, ತರಕಾರಿ ಹಾಕುತ್ತಾರೆ. ಅದರಲ್ಲಿಯೂ ಟೊಮೆಟೊ, ಹುಣಸೆ ಹಣ್ಣಿನಂಥ ಸಿಟ್ರಿಕ್ ಆ್ಯಸಿಡ್ ಇರುವ ಪದಾರ್ಥಗಳನ್ನು ನೇರವಾಗಿ ಹಾಕಿದರೆ ಅದು ಕುಕ್ಕರ್ನಲ್ಲಿ ಇರುವ ಅಲ್ಯುಮಿನಿಯಮ್ ಜೊತೆ ಬೆರೆತು ದೇಹಕ್ಕೆ ವಿಷವನ್ನು ನೀಡುತ್ತದೆ.
78
ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ದಿನವೂ ವಿಷವನ್ನು ತಿನ್ನುತ್ತಿದ್ದರೆ, ಪ್ರಾಣ ಹೋಗದಿದ್ದರೂ ಮಾರಣಾಂತಿಕ ಕಾಯಿಲೆಗಳು ಬರುವುದು ಕೂಡ ನಿಜ ಎನ್ನುವುದು ಇದಾಗಲೇ ಸಾಬೀತಾಗಿದೆ.
88
ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಸಂಚಕಾರ ತರುವ ಪ್ರೆಷರ್ ಕುಕ್ಕರ್
ಪ್ರೆಷರ್ ಕುಕ್ಕರ್ ಸರಿಯಾಗಿ ಬಳಸದೇ ಹೋದರೆ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬ ಬಗ್ಗೆ ಕಾವ್ಯಾ ಎನ್ನುವವರು ಇದರಲ್ಲಿ ವಿವರಿಸಿದ್ದಾರೆ ನೋಡಿ…