ದ್ರಾಕ್ಷಿ ಎಂಬ ಸಣ್ಣ ಹಣ್ಣಿನ ದೊಡ್ಡ ಪ್ರಯೋಜನಗಳನ್ನು ತಿಳಿಯಿರಿ

First Published Mar 26, 2022, 7:36 PM IST

ಹಣ್ಣುಗಳ ನಿಯಮಿತ ಸೇವನೆಯು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಹಜವಾಗಿ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ ಆದರೆ ಹಣ್ಣುಗಳ ರಾಣಿ ಎಂದು ಕರೆಯಲ್ಪಡುವ ಒಂದು ಹಣ್ಣೂ ಇದೆ. ನಾವು ಮಾತನಾಡುತ್ತಿರುವ ಹಣ್ಣು ದ್ರಾಕ್ಷಿ. ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ದ್ರಾಕ್ಷಿ  ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
 

ಸಣ್ಣ ದ್ರಾಕ್ಷಿಯ(Grapes) ಪ್ರತಿಯೊಂದು ಧಾನ್ಯವು 1600ಕ್ಕೂ ಹೆಚ್ಚು ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದ್ರಾಕ್ಷಿಯ ಪೋಷಕಾಂಶಗಳ ಬಗ್ಗೆ ಮಾತನಾಡಿದರೆ, ಒಂದು ಕಪ್ ದ್ರಾಕ್ಷಿಯಿಂದ 104 ಕಿಲೋ ಕ್ಯಾಲೋರಿ, 122 ಗ್ರಾಂ ನೀರು, 27.3 ಗ್ರಾಂ ಕಾರ್ಬೋಹೈಡ್ರೇಟ್ ಗಳು, 2 ಗ್ರಾಂ ಪ್ರೋಟೀನ್ ಮತ್ತು 0 ಕೊಲೆಸ್ಟ್ರಾಲ್ ಸಿಗುತ್ತದೆ. ಇದು ಫೈಟೋನ್ಯೂಟ್ರಿಯಂಟ್ ಗಳ ಅದ್ಭುತ ಆಗರವಾಗಿದೆ.

ಆಯುರ್ವೇದ(Ayurveda) ವೈದ್ಯರ ಪ್ರಕಾರ, ಆಯುರ್ವೇದದಲ್ಲಿ ಪ್ರಸಿದ್ಧವಾದ ಒಂದು ವಿಷಯವೆಂದರೆ 'ದ್ರಾಕ್ಷಾ ಫಲೋತ್ತಮಮ್', ಅಂದರೆ  ದ್ರಾಕ್ಷಿ ಎಲ್ಲಾ ಹಣ್ಣುಗಳಲ್ಲಿ ಅತ್ಯುತ್ತಮವಾಗಿದೆ. ವೈದ್ಯರ ಪ್ರಕಾರ, ಮಾರುಕಟ್ಟೆಯಲ್ಲಿ ಅನೇಕ ರೀತಿಯ ದ್ರಾಕ್ಷಿಗಳು ಲಭ್ಯವಿವೆ ಮತ್ತು ಎಲ್ಲವೂ ಆರೋಗ್ಯದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. 

ರುಚಿಗೆ ಅನುಗುಣವಾಗಿ ದ್ರಾಕ್ಷಿಗಳು ಸಿಹಿ ಮತ್ತು ಹುಳಿ-ಸಿಹಿ(Sour-sweet) ಎರಡೂ ಆಗಿರುತ್ತವೆ. ಸಿಹಿ ರುಚಿಯನ್ನು ಹೊಂದಿರುವ ದ್ರಾಕ್ಷಿ ವಾತ ಮತ್ತು ಪಿತ್ತ ದೋಷವನ್ನು ಸಮತೋಲನಗೊಳಿಸುತ್ತದೆ. ಹುಳಿ ದ್ರಾಕ್ಷಿಗಳು ಕಫ ಮತ್ತು ಪಿತ್ತಕೋಶದ ದೋಷಗಳನ್ನು ಹೆಚ್ಚಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. 

ದ್ರಾಕ್ಷಿ ತಿನ್ನುವ ಪ್ರಯೋಜನಗಳು
ದ್ರಾಕ್ಷಿ ತಿನ್ನುವುದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳಿನ ಚಾಲನೆ ಸುಲಭವಾಗುತ್ತದೆ. ಇದರಿಂದ ಸುಲಭವಾಗಿ ಆಹಾರ ಜೀರ್ಣಗೊಳ್ಳುತ್ತದೆ (Digesion). ದೇಹದ ಮೇಲೆ ತಣ್ಣನೆಯ ಪರಿಣಾಮವನ್ನು ಬೀರುತ್ತದೆ. ಉಷ್ಣ ದೇಶವನ್ನು ಹೊಂದಿರುವ ಜನರು ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಪರಿಣಾಮ ಬೀರುತ್ತದೆ. 

ಕಣ್ಣುಗಳಿಗೆ (Eyes) ತುಂಬಾ ಒಳ್ಳೆಯದು . ಹೌದು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಅಂಶವಿದೆ. ಆದುದರಿಂದ ಇದನ್ನು ಸೇವಿಸೋದರಿಂದ ಕಣ್ಣುಗಳ ದೃಷಿ ಉತ್ತಮವಾಗುತ್ತದೆ. ದ್ರಾಕ್ಷಿ ಪೌಷ್ಟಿಕಾಂಶದ ಆಗರವಾಗಿದೆ. ಇದನ್ನು ಸೇವನೆ ಮಾಡುವುದರಿಂದ ಉತ್ತಮ ಅರೋಗ್ಯ ಕಾಪಾಡುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 

ಮೂತ್ರದ (Urine)ಹರಿವನ್ನು ಉತ್ತೇಜಿಸಲು ದ್ರಾಕ್ಷಿ ಸಹಾಯ ಮಾಡುತ್ತದೆ. ದ್ರಾಕ್ಷಿಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ಇದರ ಸೇವನೆಯಿಂದ ಮೂತ್ರದ ಹರಿವು ಹೆಚ್ಚುತ್ತದೆ. ದ್ರಾಕ್ಷಿ ಉತ್ತಮ ಕಾಮೋತ್ತೇಜಕವೂ ಹೌದು. ಇದನ್ನು ಸೇವಿಸುವುದರಿಂದ ಟೆಸ್ಟಸ್ಟರಾನ್ ಅಂಶವು ಹೆಚ್ಚುತ್ತದೆ. ಬಾಯಿಯ ರುಚಿಯನ್ನು ಉತ್ತೇಜಿಸಲು ಸಹ ದ್ರಾಕ್ಷಿ ಸಹಾಯಕವಾಗಿದೆ. 
ಇದು ಕಬ್ಬಿಣದಿಂದ ಸಮೃದ್ಧವಾಗಿದೆ, ಆದುದರಿಂದ ಇದನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ನಿವಾರಣೆಯಾಗುತ್ತದೆ. 

ಆಯುರ್ವೇದದ ಹೆಚ್ಚಿನ ತಯಾರಿಕೆಗಳಲ್ಲಿ ಒಣ ದ್ರಾಕ್ಷಿಯನ್ನು ಹೆಚ್ಚು ಬಳಸಲಾಗುತ್ತದೆ. ಅತಿಯಾದ ಬಾಯಾರಿಕೆ, ಜ್ವರ, ಉಸಿರಾಟದ(Breathing) ತೊಂದರೆಗಳು, ವಾಂತಿ, ಸಂಧಿವಾತ, ಯಕೃತ್ತಿನ ಕಾಯಿಲೆ, ವಿಪರೀತ ಕಿರಿಕಿರಿ, ಶುಷ್ಕತೆ, ದೌರ್ಬಲ್ಯದ ಚಿಕಿತ್ಸೆಯಲ್ಲಿ ಒಣದ್ರಾಕ್ಷಿಗಳು ಉಪಯುಕ್ತವಾಗಿವೆ.

ಒಣದ್ರಾಕ್ಷಿಯು(Dry Grapes) ಮನಸ್ಸನ್ನು ಶಾಂತಗೊಳಿಸುತ್ತದೆ. ಅತಿಯಾದ ಅಲ್ಕೋಹಾಲ್ ಸೇವನೆಯಿಂದ ಉಂಟಾಗುವ ಹ್ಯಾಂಗೋವರ್ ಒಣದ್ರಾಕ್ಷಿಗಳನ್ನು ತಿನ್ನುವುದರಿಂದ ಕಡಿಮೆಯಾಗುತ್ತದೆ. ಪ್ರತಿದಿನ 10-12 ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದು ಆಮ್ಲೀಯತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

click me!