ಕಾರ್ಬೋಹೈಡ್ರೇಟ್‌ಗಳು(Carbohydrate)
ಮಕ್ಕಳ ಅರೋಗ್ಯ ಉತ್ತಮವಾಗಿರಲು ಪೋಷಕಾಂಶಯುಕ್ತ ಆಹಾರಗಳನ್ನು ಮಕ್ಕಳಿಗೆ ನೀಡಬೇಕು. ಕಾರ್ಬೋಹೈಡ್ರೇಟ್ ಭರಿತ ಬ್ರೆಡ್, ಧಾನ್ಯಗಳು, ಅಕ್ಕಿ ಮತ್ತು ತರಕಾರಿಗಳನ್ನು ನೀವು ಮಕ್ಕಳ ಆಹಾರದಲ್ಲಿ ಸೇರಿಸಬಹುದು. ಇವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಿದೆ.
ದೇಹದ ಭಾಗಗಳಿಗೆ ಪ್ರೋಟೀನ್(Protein) ಅತ್ಯಗತ್ಯ.
ಪ್ರೋಟೀನ್ ಹೊಸ ಜೀವಕೋಶಗಳನ್ನು ರಚಿಸಲು ಮತ್ತು ಅವುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ಸ್ನಾಯುಗಳು, ಮೂಳೆಗಳು ಮತ್ತು ದೇಹದ ಇತರ ಅಂಗಗಳಿಗೆ ಬಹಳ ಮುಖ್ಯವಾಗಿದೆ. ಇವು ಮಕ್ಕಳು ಸ್ಟ್ರಾಂಗ್ ಆಗಿ ಬೆಳೆಯಲು ಸಹಾಯ ಮಾಡುತ್ತವೆ.
ಕೊಬ್ಬುಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ
ಕಾರ್ಬೋಹೈಡ್ರೇಟ್ ಗಳಂತೆ, ಕೊಬ್ಬುಗಳು ಸಹ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಅದೇ ಸಮಯದಲ್ಲಿ, ಇದು ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಎನರ್ಜಿ ನೀಡಲು ಸಹಾಯಕವಾಗಿದೆ. ಅದಕ್ಕಾಗಿ ಮಕ್ಕಳಿಗೆ ಡ್ರೈ ಫ್ರುಟ್ಸ್ , ಅವಕಾಡೊ ಮೊದಲಾದ ಆಹಾರಗಳನ್ನು ನೀಡಿ.
ಕ್ಯಾಲ್ಸಿಯಂ(Calcium) ಕೂಡ ಮುಖ್ಯ
ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಡೈರಿ ಉತ್ಪನ್ನಗಳು ಕ್ಯಾಲ್ಸಿಯಂನ ಪ್ರಮುಖ ಮೂಲಗಳಾಗಿವೆ. ಆದುದರಿಂದ ಹಾಲು, ಪನೀರ್, ಮೊಸರು, ಮೊದಲಾದ ಡೈರಿ ಉತ್ಪನ್ನಗಳನ್ನು ಮಕ್ಕಳಿಗೆ ನೀಡಿ, ಮಕ್ಕಳ ಕ್ಯಾಲ್ಸಿಯಂ ಹೆಚ್ಚುವಂತೆ ಮಾಡುತ್ತದೆ.
ಫೋಲೇಟ್ ಪ್ರಮುಖ ಪೋಷಕಾಂಶ
ಫೋಲೇಟ್ ಮಕ್ಕಳ ಮೆದುಳಿನ ಬೆಳವಣಿಗೆಗೆ ಅತ್ಯಂತ ಪ್ರಮುಖ ಪೋಷಕಾಂಶವಾಗಿದೆ. ದೇಹದಲ್ಲಿ ಫೋಲೇಟ್ ನ ಕೊರತೆಯು ರಕ್ತಹೀನತೆಗೆ(Anemia) ಕಾರಣವಾಗಬಹುದು. ಆದುದರಿಂದ ಫೋಲೇಟ್ ಹೆಚ್ಚಿರುವ ಆಹಾರಗಳನ್ನು ಮಕ್ಕಳಿಗೆ ನೀಡಬೇಕು. ಬ್ರೊಕೋಲಿ, ಹಸಿರು ತರಕಾರಿ, ಮೊಳಕೆ ಕಾಲುಗಳನ್ನು ಸೇವಿಸಿ.
ಕಬ್ಬಿಣವು(Iron) ಅವಶ್ಯಕವಾಗಿದೆ
ಕಬ್ಬಿಣವು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಮಾಂಸಗಳು, ಬೀನ್ಸ್ ಮತ್ತು ಬೀಜಗಳು ಕಬ್ಬಿಣದ ಅತಿದೊಡ್ಡ ಮೂಲಗಳಾಗಿವೆ. ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಕಣಗಳು ಹೆಚ್ಚಾಗುತ್ತದೆ. ಉತ್ತಮ ಆರೋಗ್ಯ ಮಕ್ಕಳದ್ದಾಗುತ್ತದೆ.
ರೋಗ ನಿರೋಧಕ(Immunity) ಶಕ್ತಿಯನ್ನು ಹೆಚ್ಚಿಸುವುದು
ವಿಟಮಿನ್ ಸಿ ಗಾಯಗಳನ್ನು ಗುಣಪಡಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿಟ್ರಸ್ ಹಣ್ಣುಗಳು ಸಾಕಷ್ಟು ವಿಟಮಿನ್ ಸಿ ಅನ್ನು ಹೊಂದಿರುತ್ತವೆ. ನಿಂಬೆ ಹಣ್ಣು, ಕಿತ್ತಳೆ, ಮೋಸಂಬಿ ಮೊದಲಾದ ಹಣ್ಣುಗಳನ್ನು ಮಕ್ಕಳಿಗೆ ನೀಡುವುದು ಉತ್ತಮ.
ವಿಟಮಿನ್ ಎ(Vitamin A) ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ.
ವಿಟಮಿನ್ ಎ ಕಣ್ಣುಗಳು ಮತ್ತು ಚರ್ಮಕ್ಕೆ ಅತ್ಯಗತ್ಯ. ಈ ಪೋಷಕಾಂಶವು ಕ್ಯಾರೆಟ್ ಮತ್ತು ಎಲೆಕೋಸುಗಳಲ್ಲಿ ಕಂಡುಬರುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಕ್ಕಳಿಗೆ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾಡುವುದಿಲ್ಲ. ದೃಷ್ಟಿ ಉತ್ತಮವಾಗಿರುತ್ತದೆ.