Healthy Gut: ಆರೋಗ್ಯಪೂರ್ಣ ಕರುಳಿನಿಂದ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ

ಆರೋಗ್ಯಪೂರ್ಣ ಕರುಳಿನಿಂದ ಆರೋಗ್ಯಪೂರ್ಣ ಜೀವನ ನಮ್ಮದಾಗುತ್ತದೆ. ಕರುಳನ್ನು ಚೆನ್ನಾಗಿಟ್ಟುಕೊಳ್ಳುವಲ್ಲಿ ಆಹಾರ ಹಾಗೂ ಜೀವನಶೈಲಿಯ ಪಾತ್ರ ಮಹತ್ವದ್ದಾಗಿದೆ. ಕರುಳಿನ ಆರೋಗ್ಯ ಸುಸ್ಥಿತಿಯಲ್ಲಿದ್ದರೆ ರೋಗ ನಿರೋಧಕ ಶಕ್ತಿಯೂ ಪ್ರಬಲವಾಗಿರುತ್ತದೆ. 
 

ways to improve your gut health and increase immunity

ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ (Nutrition) ಆಹಾರ ಸೇವಿಸಬೇಕು. ಆ ಆಹಾರ (Food) ಸರಿಯಾಗಿ ಜೀರ್ಣವಾಗಿ (Digestion) ಆಹಾರದಲ್ಲಿರುವ ಶಕ್ತಿ ದೇಹದ ವಿವಿಧ ಅಂಗಾಂಗಗಳಿಗೆ ತಲುಪಬೇಕು. ಈ ಪ್ರಕ್ರಿಯೆಯಿಂದ ದೇಹದ ರೋಗ ನಿರೋಧಕ ಶಕ್ತಿ ಪ್ರಬಲವಾಗುತ್ತದೆ. ಅಂದರೆ, ರೋಗ ನಿರೋಧಕ ಶಕ್ತಿಗೂ (Immunity Power) ನಮ್ಮ ಜೀರ್ಣಾಂಗ (Digestive System) ವ್ಯವಸ್ಥೆಗೂ ನೇರವಾದ ಸಂಬಂಧವಿದೆ. 

ತಜ್ಞರ ಪ್ರಕಾರ, ಕರುಳಿನ (Gut) ಆರೋಗ್ಯ ಚೆನ್ನಾಗಿದ್ದರೆ ರೋಗ ನಿರೋಧಕ ವ್ಯವಸ್ಥೆ ಸದೃಢಗೊಳ್ಳುತ್ತದೆ. ಆರೋಗ್ಯಪೂರ್ಣ ಕರುಳಿನಿಂದ ಆರೋಗ್ಯಪೂರ್ಣ ಜೀವನ ಸಾಧ್ಯವಾಗುತ್ತದೆ. ಒಟ್ಟಾರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರುಳು ಮೂಲವಾಗಿದೆ. ಹೀಗಾಗಿ, ಕರುಳಿನ ಆರೋಗ್ಯಕ್ಕೆ ಪೂರಕವಾಗಿರುವ ಆಹಾರವನ್ನೇ ನಾವು ಸೇವಿಸಬೇಕು. 

ಕರುಳಿಗೂ ರೋಗ ನಿರೋಧಕ ಶಕ್ತಿಗೂ ಬಲವಾದ ಬಾಂಧವ್ಯವಿದೆ. ಹೀಗಾಗಿ, ರೋಗ ನಿರೋಧಕ ಶಕ್ತಿಯನ್ನು ಸದೃಢಗೊಳಿಸಿಕೊಳ್ಳಲು ಇಚ್ಛಿಸುವವರು ಕರುಳಿನ ಕಡೆಗೂ ಗಮನ ನೀಡಬೇಕಾಗುತ್ತದೆ. ನಿಮಗೆ ಗೊತ್ತಿರಲಿ, ಸೂಕ್ಷ್ಮಾಣುಜೀವಿಗಳ (Microbiome) ಲೋಕವೇ ನಮ್ಮ ಕರುಳಿನಲ್ಲಿದೆ. ಬ್ಯಾಕ್ಟೀರಿಯಾ, ಫಂಗಸ್, ವೈರಸ್ ಗಳು ಸೇರಿದಂತೆ ಕೋಟ್ಯಂತರ ಸೂಕ್ಷ್ಮಾಣುಜೀವಿಗಳು  ಕರುಳಿನಲ್ಲಿ ನೆಲೆಸಿರುತ್ತವೆ. ಇವು ಚೆನ್ನಾಗಿದ್ದರೆ ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಇದರಿಂದ ಕ್ರಮೇಣ ಇಮ್ಯೂನಿಟಿಯೂ ಹೆಚ್ಚುತ್ತದೆ. ಹೀಗಾಗಿ, ಕರುಳಿಗೆ ಪೂರಕವಾಗುವ ಆಹಾರ ಪದಾರ್ಥಗಳನ್ನು ಬಳಕೆ ಮಾಡುವ ಜತೆಗೆ, ನಿತ್ಯವೂ ಕೆಲವು ಆರೋಗ್ಯಕರ ವಿಧಾನಗಳನ್ನು ಅನುಸರಿಸಬೇಕು.

•    ದಾಲ್ಚಿನ್ನಿ (Cinnamon)
ದಾಲ್ಚಿನ್ನಿ ಜೀರ್ಣಕಾರಿಯಾಗಿದ್ದು, ಹೊಟ್ಟೆ ಕೆಟ್ಟಿದ್ದರೆ ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. 

•    ಶುಂಠಿ (Ginger)
ಶುಂಠಿಯೂ ಜೀರ್ಣಕಾರಿಯಾಗಿದ್ದು, ಹೊಟ್ಟೆಯ ಆರೋಗ್ಯಕ್ಕೆ ಬಹಳ ಪೂರಕವಾಗಿದೆ. ಹೀಗಾಗಿಯೇ, ಗ್ಯಾಸ್ಟ್ರಿಕ್ ಹಾಗೂ ಅಜೀರ್ಣದ ಸಮಸ್ಯೆಗೆ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ. ಉರಿಯೂತ ಕಡಿಮೆ ಮಾಡಿ, ಗ್ಯಾಸ್ಟ್ರೊಇಂಟೆಸ್ಟೈನಲ್ ಟ್ರ್ಯಾಕ್ಟ್ ಅನ್ನು ಸ್ವಚ್ಛಗೊಳಿಸುತ್ತದೆ. ಆಂಟಿಆಕ್ಸಿಡಂಟ್ ಮಟ್ಟ ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಉತ್ತಮವಾಗಲು ಪೂರಕವಾಗುತ್ತದೆ.  

Ankle Strength: ಈ ಎಕ್ಸರ್ಸೈಸ್ ಮಾಡದೆ ವ್ಯಾಯಾಮ ಮುಗಿಸಬೇಡಿ..

•    ರಾತ್ರಿ ತಡವಾಗಿ ಊಟ ಮಾಡುವುದು ಹಾನಿಕರ (Late Night Dinner)
ರಾತ್ರಿ ತಡವಾಗಿ ಊಟ ಮಾಡುವ ಪದ್ಧತಿ ಒಳ್ಳೆಯದಲ್ಲ. ಇದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ, ಅನುಸರಿಸಲು ಕಷ್ಟಪಡುತ್ತೇವೆ. ನೇರವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಬೇಗ ಊಟ ಮಾಡುವ ಅಭ್ಯಾಸ ಇರಿಸಿಕೊಂಡರೆ ಕರುಳಿನ ಆರೋಗ್ಯಕ್ಕೆ ಉತ್ತಮ. ಜತೆಗೆ, ಊಟ ಮಾಡಿದ ತಕ್ಷಣ ಮಲಗುವುದಂತೂ ಇನ್ನಷ್ಟು ಹಾನಿಕರ. ಊಟವಾದ ಬಳಿಕ ಕನಿಷ್ಠ ಎರಡು ಗಂಟೆ ಬಿಟ್ಟು ಮಲಗಬೇಕು. 

Arranged Marriage: ನಿಮ್ಮ ಭಾವಿ ಪತ್ನಿಯ ಬಳಿ ಏನು ಕೇಳಬೇಕು? ಏನು ಕೇಳಬಾರದು?

•    ನಿಯಮಿತ ವ್ಯಾಯಾಮ ಅಗತ್ಯ (Regular Exercise)
ದೇಹವನ್ನು ಸದೃಢ ಹಾಗೂ ಕ್ರಿಯಾಶೀಲವಾಗಿಟ್ಟುಕೊಳ್ಳಲು ನಿಯಮಿತವಾದ ವ್ಯಾಯಾಮ ಅಗತ್ಯ. ಪ್ರತಿದಿನ ವ್ಯಾಯಾಮ ಮಾಡುವುದಕ್ಕಾಗಿ ಕೆಲ ಸಮಯ ಮೀಸಲಿಡಬೇಕು. ವ್ಯಾಯಾಮ ಮಾಡಲು ನಿಮಗೆ ನೀವೇ ಉತ್ತೇಜನ ಕೊಟ್ಟುಕೊಳ್ಳಬೇಕು. ವ್ಯಾಯಾಮ ಮಾಡುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಫಿಟ್ ಆಗಿರಲು ಸಾಧ್ಯವಾಗುತ್ತದೆ. ಅಲ್ಲದೆ, ವ್ಯಾಯಾಮವು ಕೆಟ್ಟ ಆಹಾರದ ಬಯಕೆಯಾಗದಂತೆ ಮನಸ್ಸಿಗೆ ತರಬೇತಿ ನೀಡುತ್ತದೆ ಎಂದರೆ ಅಚ್ಚರಿಯಾಗಬಹುದು.

•    ಒತ್ತಡದಿಂದ ಮುಕ್ತರಾಗಿ (Ditch the Stress)
ಒತ್ತಡ ಮಾನಸಿಕವಾಗಷ್ಟೇ ಅಲ್ಲ, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕರುಳು ಅಸಹಜವಾಗಿ ವರ್ತಿಸುವಲ್ಲಿ ಒತ್ತಡದ ಪಾತ್ರ ಪ್ರಮುಖವಾಗಿದೆ. ಇರಿಟೇಬಲ್ ಬೊವೆಲ್ ಸಿಂಡ್ರೋಮ್ (ಐಬಿಎಸ್- Irritable Bowel Syndrome) ಗೆ ಭಾವನಾತ್ಮಕ ಸಮಸ್ಯೆಗಳೂ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಆಗ ಕರುಳು ತಿನ್ನುವ ಆಹಾರದ ಬಗ್ಗೆ ಸೂಕ್ಷ್ಮವಾಗುತ್ತ ಸಾಗುತ್ತದೆ. 
 

Latest Videos
Follow Us:
Download App:
  • android
  • ios