ಕಣ್ಣಲ್ಲಿ ಪದೇ ಪದೇ ನೀರು ಬರೋದಕ್ಕೆ ಕಾರಣ ಏನು ಗೊತ್ತಾ ?

Suvarna News   | Asianet News
Published : Mar 26, 2022, 07:14 PM IST

ನಿಮಗೂ ಫೋನ್ (Phone) ನೋಡುವಾಗ ಹೀಗೆಲ್ಲಾ ಆಗುತ್ತಾ ? ಫೋನ್‌ನ್ನು ದೀರ್ಘಕಾಲದವರೆಗೆ ನೋಡಿದಾಗ, ಕಣ್ಣು (Eyes)ಗಳಲ್ಲಿ ನೀರು ಬರುತ್ತಾ ? ಅಂತಹ ಪರಿಸ್ಥಿತಿಯಲ್ಲಿ, ಅನೇಕ ಬಾರಿ ಕಣ್ಣು ಕೆಂಪಾಗುತ್ತದೆ ಮತ್ತು ಕಣ್ಣಿನಲ್ಲಿ ನೋವು (Pain) ಸಹ ಕಾಣಿಸಿಕೊಳ್ಳುತ್ತದೆ. ಕಣ್ಣುಗಳಲ್ಲಿನ ಧೂಳು, ರಾಸಾಯನಿಕ ಅಥವಾ ಕಣ್ಣಿಗೆ ಸಂಬಂಧಿಸಿದ ಕಾಯಿಲೆ (Disease)ಯಿಂದ ಇದು ಉಂಟಾಗಬಹುದು. ಇದಲ್ಲದೆಯೂ ಕಣ್ಣಲ್ಲಿ ನೀರು ಕಾಣಿಸಿಕೊಳ್ಳೋಕೆ ಕಾರಣವೇನು ತಿಳಿದುಕೊಳ್ಳಿ.

PREV
16
ಕಣ್ಣಲ್ಲಿ ಪದೇ ಪದೇ ನೀರು ಬರೋದಕ್ಕೆ ಕಾರಣ ಏನು ಗೊತ್ತಾ ?

ಕಣ್ಣುಗಳು(Eyes) ಒಣಗುವುದು - ಕಣ್ಣುಗಳಲ್ಲಿನ ಶುಷ್ಕತೆಯಿಂದಾಗಿ ಅನೇಕ ಬಾರಿ ಕಣ್ಣಲ್ಲಿ ನೀರು ಬರಲು ಆರಂಭವಾಗುತ್ತದೆ. ದೇಹದಲ್ಲಿ ನೀರು, ಎಣ್ಣೆ ಮತ್ತು ಲೋಳೆಯ ಸಮತೋಲನವು ಉತ್ತಮವಾಗಿಲ್ಲದಿದ್ದಾಗ ಇದು ಸಂಭವಿಸುತ್ತದೆ. ಇದರಿಂದ ಕಣ್ಣುಗಳು ಒಣಗಲು ಆರಂಭವಾಗುತ್ತದೆ. ಕಣ್ಣೀರು ಹೊರಬರಲು ಶುರುವಾಗುತ್ತದೆ.

26

ಗುಲಾಬಿ ಕಣ್ಣುಗಳು - ಕಣ್ಣಿನಿಂದ ನೀರು ಬರುವುದು, ಬ್ಯಾಕ್ಟೀರಿಯಾ(Bacteria) ಅಥವಾ ವೈರಸ್ ಸೋಂಕಿನಿಂದ ಉಂಟಾಗಬಹುದು. ಈ ಸಮಸ್ಯೆ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಈ ಕಾರಣದಿಂದಾಗಿ ಮಕ್ಕಳ ಕಣ್ಣು ಕೆಂಪು ಬಣ್ಣದಲ್ಲಿರುವ ಸಾಧ್ಯತೆ ಇರುತ್ತದೆ. ಸೋಂಕಿನಿಂದಾಗಿ, ಕಣ್ಣುಗಳಲ್ಲಿ ತುರಿಕೆ ಮತ್ತು ಕಿರಿಕಿರಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 

36

ಅಲರ್ಜಿಗಳು(Allergy) - ಅನೇಕ ಬಾರಿ ಅಲರ್ಜಿ ಇದ್ದಾಗಲೂ, ಕಣ್ಣುಗಳಿಂದ ನೀರು ಬರಲು ಆರಂಭವಾಗುತ್ತದೆ. ಕಣ್ಣುಗಳ ತುರಿಕೆಯು ಪ್ರಾರಂಭವಾಗುತ್ತದೆ. ಕಣ್ಣಿಗೆ ಯಾವುದೇ ರೀತಿಯ ಹಾನಿಯಾದಾಗ ಅಥವಾ ಕುರು ಮೊದಲಾದ ಸಮಸ್ಯೆ ಉಂಟಾದಾಗ ಕಣ್ಣಿನಲ್ಲಿ ನೀರು ಬರಲು ಆರಂಭವಾಗುತ್ತದೆ. 

46

ರೆಪ್ಪೆಗಳ ಸಮಸ್ಯೆ: ಕೆಲವರ ರೆಪ್ಪೆಗಳು ಓರೆಯಾಗಿ ಕಣ್ಣಿನೊಳಗೆ ನುಸುಳಲು ಪ್ರಾರಂಭಿಸುತ್ತವೆ. ಯಾರಾದರೊಬ್ಬರ ರೆಪ್ಪೆಗಳು ಒಳಮುಖವಾಗಿರುತ್ತವೆಯೋ, ಇದನ್ನು ಆಕ್ಟ್ರೋಪಿಯನ್ ಎಂದು ಕರೆಯಲಾಗುತ್ತದೆ. ಇದರಲ್ಲಿ, ರೆಪ್ಪೆಗಳು ಕಣ್ಣುಗಳನ್ನು ಸಂಪೂರ್ಣವಾಗಿ ಒರೆಸುವುದಿಲ್ಲ ಮತ್ತು ಕಣ್ಣುಗಳಲ್ಲಿ ಕಣ್ಣೀರು(Tears) ರೂಪುಗೊಳ್ಳುತ್ತದೆ. 

56

ಕಾರ್ನಿಯಾದಲ್ಲಿ(Cornea) ಗೀರುಗಳು - ಅನೇಕ ಬಾರಿ ಕಣ್ಣುಗುಡ್ಡೆ ಪ್ರವೇಶಿಸುವ ಧೂಳು, ಮಣ್ಣು ಅಥವಾ ಕೊಳೆಯಿಂದಾಗಿ ಕಣ್ಣುಗುಡ್ಡೆ ಗೀಚಲ್ಪಡುತ್ತದೆ. ಕಣ್ಣುಗಳನ್ನು ನೋಯುವಂತೆ ಮಾಡುತ್ತದೆ. ಇದು ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ ಮತ್ತು ಕೆಲವೊಮ್ಮೆ ಬೆಳಕಿನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಣ್ಣುಗಳಲ್ಲಿ ನಿರಂತರವಾಗಿ ನೀರು ಬರುತ್ತದೆ. 

66

ರೆಪ್ಪೆಗಳ(Eye lash) ಊತ - ಕೆಲವರ ರೆಪ್ಪೆಗಳಲ್ಲಿ ಊತದ ಸಮಸ್ಯೆಯನ್ನು ಹೊಂದುತ್ತಾರೆ. ಇದನ್ನು ಬ್ಲೆಫಾರಿಟಿಸ್ ಎಂದು ಕರೆಯಲಾಗುತ್ತದೆ. ಇದು ಕಣ್ಣುಗಳಿಂದ ನೀರು ಬರುವಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ. ತುರಿಕೆ ಉಂಟಾಗಲು ಪ್ರಾರಂಭಿಸುತ್ತದೆ. ಇದು ಅಲರ್ಜಿಗಳು ಮತ್ತು ಸೋಂಕುಗಳಿಂದ ಉಂಟಾಗುತ್ತದೆ.

Read more Photos on
click me!

Recommended Stories