ವೇಗವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ತಡೆಗಟ್ಟಲು 5 ಗೋಲ್ಡನ್ ರೂಲ್ಸ್ ಹೇಳಿದ ಡಾಕ್ಟರ್

Published : Aug 22, 2025, 11:37 AM IST

ಕ್ಯಾನ್ಸರ್ ಒಂದು ಗಂಭೀರ ಕಾಯಿಲೆಯಾಗಿದ್ದು, ಅದನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಸರಿಯಾದ ಆಹಾರ ಪದ್ಧತಿ ಅಗತ್ಯ. ಕೆಲವು ಸಣ್ಣ ವಿಷಯದ ಬಗ್ಗೆ ಕಾಳಜಿ ವಹಿಸಿದರೂ ಮೂರು ಕ್ಯಾನ್ಸರ್‌ಗಳಲ್ಲಿ ಒಂದನ್ನು ತಡೆಗಟ್ಟಬಹುದು ಎಂದು ಡಾ. ಸಾದ್ವಿಕ್ ರಘುರಾಮ್ ಹೇಳಿದ್ದಾರೆ.

PREV
17
ಗಂಭೀರ ಕಾಯಿಲೆ

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಪಂಚದಾದ್ಯಂತ ಗಂಭೀರ ಕಾಯಿಲೆಯಾಗಿ ಮಾರ್ಪಟ್ಟಿದೆ. ಈ ರೋಗವು ಯಾರನ್ನಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು. ಪ್ರಸ್ತುತ ಅನೇಕ ಜನರು ಇದರಿಂದ ಬಳಲುತ್ತಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾನ್ಸರ್‌ನಲ್ಲಿ ಅನೇಕ ವಿಧಗಳಿದ್ದು, ಅದು ಹಲವು ಕಾರಣಗಳಿಂದ ಸಂಭವಿಸಬಹುದು. ಆದ್ದರಿಂದ ಅದರ ಅಪಾಯಕಾರಿ ಅಂಶಗಳನ್ನು ಗುರುತಿಸುವುದು ಮತ್ತು ತಡೆಗಟ್ಟುವುದು ಮುಖ್ಯವಾಗಿದೆ.

27
ಆ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ...

ಕ್ಯಾನ್ಸರ್ ತಡೆಗಟ್ಟಲು ಕೆಲವು ಸಣ್ಣ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಮತ್ತು ಕೆಲವು ಆಹಾರ ಹೊರಗಿಡುವ ಮೂಲಕ ನೀವು ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು. ಈ ಬಗ್ಗೆ ಡಾ. ಸಾದ್ವಿಕ್ ರಘುರಾಮ್ ಸ್ವತಃ ವಿಡಿಯೋ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆ ಮಾಡುವ ಮೂಲಕ, ಕ್ಯಾನ್ಸರ್ ಅನ್ನು ಶೇಕಡ 20 ರಿಂದ 30 ರಷ್ಟು ತಡೆಗಟ್ಟಬಹುದು ಎಂದು ಹೇಳಿದ್ದು, ಆ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ…

37
ಕ್ಯಾನ್ಸರ್ ಅಪಾಯ ಹೆಚ್ಚಿಸುವ ಆಹಾರಗಳು

ಬಿಳಿ ಬ್ರೆಡ್
ಪ್ಯಾಕ್ ಮಾಡಿದ ಹಣ್ಣಿನ ರಸ
ತಂಪು ಪಾನೀಯಗಳು
ಮೈದಾ
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು
ಹುರಿದ ಆಹಾರಗಳು
ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್
ಮದ್ಯ ಮತ್ತು ತಂಬಾಕು
ಸಂಸ್ಕರಿಸಿದ ಆಹಾರಗಳಿಂದ ದೂರವಿರಿ

ಸಂಸ್ಕರಿಸಿದ ಮಾಂಸ ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ನೀವು ಕಡಿಮೆ ಸೇವಿಸಿದಷ್ಟೂ, ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ. ಇವುಗಳ ಬದಲಿಗೆ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.

47
ಸನ್‌ಸ್ಕ್ರೀನ್ ಬಳಸಿ

ಸನ್‌ಸ್ಕ್ರೀನ್ ಹಚ್ಚುವುದು ಯಾವಾಗಲೂ ಮುಖ್ಯ. ಹೊರಗೆ ಬಿಸಿಲು ಇಲ್ಲದಿದ್ದರೂ ಸಹ, ಅದನ್ನು ಹಚ್ಚಿಕೊಳ್ಳಿ. ನೀವು ಮನೆಯಲ್ಲಿಯೇ ಇರಲಿ ಅಥವಾ ಎಲ್ಲೋ ಹೊರಗೆ ಹೋಗಲಿ, ಸನ್‌ಸ್ಕ್ರೀನ್ ಹಚ್ಚಲು ಎಂದಿಗೂ ಮರೆಯಬೇಡಿ.

57
ಪ್ರತಿದಿನ ಚಟುವಟಿಕೆಯಿಂದಿರಿ

ಪ್ರತಿದಿನ ಸಕ್ರಿಯವಾಗಿರಲು ಪ್ರಯತ್ನಿಸಿ. ನಿಮಗೆ ಹೆಚ್ಚು ಸಮಯವಿಲ್ಲದಿದ್ದರೆ, ಕನಿಷ್ಠ 30 ನಿಮಿಷಗಳ ಕಾಲ ಸಕ್ರಿಯವಾಗಿರಲು ಗುರಿಯಿಟ್ಟುಕೊಳ್ಳಿ. ನೀವು ನಡೆಯುವುದು , ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಅಥವಾ ನಿಮ್ಮ ನಾಯಿಯನ್ನ ವಾಕಿಂಗ್ ಕರೆದುಕೊಂಡು ಹೋಗುವ ಮೂಲಕ ನಿಮ್ಮನ್ನು ಸಕ್ರಿಯವಾಗಿರಿಸಿಕೊಳ್ಳಬಹುದು .

67
ದೀರ್ಘಕಾಲ ಕುಳಿತುಕೊಳ್ಳುವುದನ್ನ ತಪ್ಪಿಸಿ

ಕಚೇರಿಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ತಪ್ಪಿಸಿ. ಹಾಗೆ ಮಾಡುವುದರಿಂದ ನಿಮಗೆ ಹಾನಿಕಾರಕವಾಗಬಹುದು. ಆದ್ದರಿಂದ ದಿನವಿಡೀ ಸಣ್ಣ ವಿರಾಮಗಳನ್ನು ತೆಗೆದುಕೊಂಡು ನಡುವೆ ನಡೆಯಲು ಪ್ರಯತ್ನಿಸಿ.

77
ಸಾಕಷ್ಟು ನಿದ್ರೆ ಪಡೆಯಿರಿ

7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಉರಿಯೂತ ಕಡಿಮೆಯಾಗುತ್ತದೆ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

Read more Photos on
click me!

Recommended Stories