ಅದ್ಭುತ ಆರೋಗ್ಯ ಪ್ರಯೋಜನಕ್ಕೆ ನೀರು ಕುಡಿಯುವುದು ಅತ್ಯಗತ್ಯ. ಅದರಲ್ಲೂ ಸರಿಯಾದ ರೀತಿಯಲ್ಲಿ ಪಾನೀಯಗಳನ್ನು ಸೇವಿಸುವುದರಿಂದ ಅನೇಕ ಕಾಯಿಲೆಗಳಿಗೆ ಮುಕ್ತಿ ಸಿಗುತ್ತದೆ. ಇದೀಗ ಭಾರತ ಸರ್ಕಾರದ ಆಯುಷ್ ಸಚಿವಾಲಯವು ದೇಹವು ಹೈಡ್ರೇಟ್ ಆಗಿರಲು, ಜೀರ್ಣಕ್ರಿಯೆ ಮತ್ತು ಶಕ್ತಿಗಾಗಿ ಐದು ಸಲಹೆ ನೀಡಿದ್ದು, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಸಚಿವಾಲಯದ ಪ್ರಕಾರ, ನಿಮ್ಮ ದೈನಂದಿನ ದಿನಚರಿಯಲ್ಲಿನ ಸಣ್ಣ ವಿಷಯಗಳು ಸಹ ದೊಡ್ಡ ಬದಲಾವಣೆಯನ್ನು ಮಾಡಬಹುದು. ಈ ಸಲಹೆಗಳು ಆರೋಗ್ಯವನ್ನು ಸುಧಾರಿಸುವುದಲ್ಲದೆ, ಆಯುರ್ವೇದ ಸಿದ್ಧಾಂತ ಆಧರಿಸಿವೆ ಮತ್ತು ದೈನಂದಿನ ಜೀವನದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು.