ಇತ್ತೀಚಿನ ದಿನಗಳಲ್ಲಿ ತಲೆನೋವು ಸಾಮಾನ್ಯ ಸಮಸ್ಯೆಯಾಗಿದೆ. ಹಸಿವು, ಆಯಾಸ, ಒತ್ತಡ, ಶೀತ ಇತ್ಯಾದಿ ಹಲವು ಕಾರಣಗಳಿಂದ ತಲೆನೋವು ಬರುತ್ತದೆ. ಕೆಲವು ಅಪಾಯಕಾರಿ ಕಾಯಿಲೆಗಳ ಲಕ್ಷಣವೂ ಆಗಿರಬಹುದು. ತಲೆನೋವು ತೀವ್ರವಾದಾಗ ಆಸ್ಪತ್ರೆಗೆ ಹೋಗಲೇಬೇಕು. ಸಾಮಾನ್ಯ ತಲೆನೋವಿಗೆ ಮಾತ್ರೆ ತೆಗೆದುಕೊಳ್ಳುತ್ತೇವೆ. ಆದರೆ ಪ್ರತಿ ಬಾರಿ ಮಾತ್ರೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.