ಮಟನ್ vs ಚಿಕನ್ ಲಿವರ್: ಯಾವುದು ಬೆಸ್ಟ್?, ಯಾರು ತಿನ್ನಬಾರದು?

Published : Dec 30, 2025, 06:38 PM IST

Mutton Liver vs Chicken Liver: ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?, ಯಾವುದು ತಿನ್ನುವುದು ಉತ್ತಮ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆದ್ದರಿಂದ ಮಟನ್ ಮತ್ತು ಚಿಕನ್ ಲಿವರ್ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆಂದು ನೋಡೋಣ.. 

PREV
16
ಆರೋಗ್ಯ ತಜ್ಞರು ಏನು ಹೇಳ್ತಾರೆ?

ಮಾಂಸಾಹಾರಿಗಳು ವಾರಕ್ಕೊಮ್ಮೆಯಾದರೂ ಚಿಕನ್, ಮಟನ್ ಮತ್ತು ಮೀನು ತಿಂತಾರೆ. ಆದರೆ ಇತ್ತೀಚೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಕನ್ ಲಿವರ್ ಮತ್ತು ಮಟನ್ ಲಿವರ್‌ನ ಸೇವನೆ ಹೆಚ್ಚಾಗಿದೆ. ಇವೆರಡೂ ಹೆಚ್ಚು ಪೌಷ್ಟಿಕ ಆಹಾರಗಳಾಗಿವೆ. ಆದರೆ ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?, ಯಾವುದು ತಿನ್ನುವುದು ಉತ್ತಮ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆದ್ದರಿಂದ ಮಟನ್ ಮತ್ತು ಚಿಕನ್ ಲಿವರ್ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆಂದು ನೋಡೋಣ..

26
ಕ್ಯಾನ್ಸರ್ ಅಪಾಯ ತಡೆಯಲು ಸಹಕಾರಿ

ಚಿಕನ್ ಲಿವರ್ ತಿನ್ನುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಚಿಕನ್ ಲಿವರ್ ಕಬ್ಬಿಣ, ಸೆಲೆನಿಯಮ್, ವಿಟಮಿನ್ ಎ, ಬಿ 12, ಫೋಲೇಟ್ ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿದೆ. ಇದರ ಸೆಲೆನಿಯಮ್ ಅಂಶವು ಕ್ಯಾನ್ಸರ್ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.

36
ದೇಹದ ಕೊಬ್ಬನ್ನು ಕಡಿಮೆ ಮಾಡುತ್ತೆ

ಹಾಗೆಯೇ ಚಿಕನ್ ಲಿವರ್‌ನಲ್ಲಿರುವ ವಿಟಮಿನ್ ಎ ಮತ್ತು ಬಿ 12 ಕಣ್ಣು ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ನೀವು ಮಧುಮೇಹಿಗಳಾಗಿದ್ದರೆ ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೇಯಿಸಿದ ಲಿವರ್ ತಿನ್ನುವುದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ.

46
ಆಮ್ಲಜನಕದ ಪೂರೈಕೆ ಸುಧಾರಣೆ

ಅನೇಕ ಜನರು ಚಿಕನ್‌ ಲಿವರ್‌ಗಿಂತ ಮಟನ್ ಲಿವರ್ ತಿನ್ನಲು ಇಷ್ಟಪಡುತ್ತಾರೆ. ಮಟನ್ ನಲ್ಲಿ ಕೊಬ್ಬು ಹೆಚ್ಚಿರುವುದರಿಂದ ಅನೇಕರು ಮೊದಲು ಅದನ್ನು ಬೇಯಿಸಿ ತಿನ್ನುತ್ತಾರೆ. ಇದರಲ್ಲಿ ವಿಟಮಿನ್ ಎ, ಡಿ, ಬಿ 12, ಸತು, ಪೊಟ್ಯಾಶಿಯಂ ಮತ್ತು ತಾಮ್ರದಂತಹ ಪೋಷಕಾಂಶಗಳಿವೆ. ಆದ್ದರಿಂದ ಇದನ್ನು ತಿನ್ನುವುದರಿಂದ ದೇಹದಲ್ಲಿ ಆಮ್ಲಜನಕದ ಪೂರೈಕೆ ಸುಧಾರಿಸುತ್ತದೆ.

56
ಸೋಂಕುಗಳಿಂದ ರಕ್ಷಣೆ

ದೇಹದಲ್ಲಿ ರಕ್ತ ಕಡಿಮೆಯಾಗಿ ಕೆಲವರಿಗೆ ರಕ್ತಹೀನತೆ ಬರುತ್ತದೆ. ಅಂತಹವರಿಗೆ ಮಟನ್ ಲಿವರ್ ಒಳ್ಳೆಯ ಆಹಾರ. ವಿಟಮಿನ್ ಬಿ12 ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

66
ಯಾರು ತಿನ್ನಬಾರದು?

ಯಾವುದೇ ಆರೋಗ್ಯ ಸಮಸ್ಯೆಗಳಿರುವ ಜನರು ಚಿಕನ್ ಅಥವಾ ಮಟನ್ ಲಿವರ್ ತಿನ್ನಬಾರದು. ಕಿಡ್ನಿ ಸ್ಟೋನ್, ಅಧಿಕ ಕೊಲೆಸ್ಟ್ರಾಲ್, ಹೃದಯ ಕಾಯಿಲೆ ಇರುವವರು ಮತ್ತು ಗರ್ಭಿಣಿಯರು ಇದನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories