ಕೈ ತಪ್ಪಿ ಸಾಂಬಾರ್‌ನಲ್ಲಿ ಉಪ್ಪು ಹೆಚ್ಚಾಯಿತೇ?, ಇಷ್ಟು ಮಾಡಿದ್ರೆ ಸಾಕು.. ರುಚಿ ದುಪ್ಪಟ್ಟಾಗುತ್ತೆ

Published : Dec 28, 2025, 06:56 PM IST

Reduce salt in curry: ಹೆಚ್ಚು ಉಪ್ಪು ತಿನ್ನುವುದೂ ಕಷ್ಟ. ಆರೋಗ್ಯಕ್ಕೂ ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ನಾವು ಮಾಡಿದ್ದೆಲ್ಲಾ ವೇಸ್ಟ್ ಆಯ್ತು ಎಂದು ಕೆಲವರು ಚೆಲ್ಲಬಹುದು. ಆದರೆ ಇನ್ಮುಂದೆ ಹಾಗೆ ಮಾಡಬೇಡಿ. ಇಂತಹ ಸಮಯದಲ್ಲಿ ಬ್ಯಾಲೆನ್ಸ್ ಮಾಡುವ ಕೆಲವು ಟೆಕ್ನಿಕ್ ಅನ್ನು ನೀವು ಅಳವಡಿಸಿಕೊಳ್ಳಬೇಕು. 

PREV
16
ಕೆಲವು ಟೆಕ್ನಿಕ್ ಅಳವಡಿಸಿಕೊಳ್ಳಿ

ಅಡುಗೆ ಮಾಡುವುದಾಗಲಿ, ಬಡಿಸುವುದಾಗಲಿ ಹೆಣ್ಮಕ್ಕಳಿಗೆ ದೈನಂದಿನ ಕೆಲಸ. ಪ್ರತಿದಿನ ಏನಾದರೂ ಹೊಸದನ್ನು ಮತ್ತು ಎಲ್ಲರಿಗೂ ಇಷ್ಟವಾದ ಆಹಾರವನ್ನು ತಯಾರಿಸುವಾಗ ಒಂದು ರೀತಿಯ ಒತ್ತಡವಿರುತ್ತದೆ. ನಾವು ಪಟ್ಟ ಪರಿಶ್ರಮ ಯಶಸ್ವಿಯಾಗಬೇಕು ಮತ್ತು ನಮ್ಮ ಕುಟುಂಬವು ಆರಾಮವಾಗಿ ಕೂತು ಊಟ ಮಾಡಬೇಕೆಂದು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಆತುರದಿಂದ ಅಡುಗೆ ಮಾಡುವಾಗ ಹೆಚ್ಚು ಉಪ್ಪನ್ನು ಸೇರಿಸುತ್ತೇವೆ. ಆಗ ಏನು ಮಾಡಬೇಕೆಂದು ಕೈ ಕೈ ಹಿಸುಕಿಕೊಳ್ಳುತ್ತೇವೆ. ಏಕೆಂದರೆ ಹೆಚ್ಚು ಉಪ್ಪು ತಿನ್ನುವುದೂ ಕಷ್ಟ. ಆರೋಗ್ಯಕ್ಕೂ ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ನಾವು ಮಾಡಿದ್ದೆಲ್ಲಾ ವೇಸ್ಟ್ ಆಯ್ತು ಎಂದು ಕೆಲವರು ಚೆಲ್ಲಬಹುದು. ಆದರೆ ಇನ್ಮುಂದೆ ಹಾಗೆ ಮಾಡಬೇಡಿ. ಇಂತಹ ಸಮಯದಲ್ಲಿ ಬ್ಯಾಲೆನ್ಸ್ ಮಾಡುವ ಕೆಲವು ಟೆಕ್ನಿಕ್ ಅನ್ನು ನೀವು ಅಳವಡಿಸಿಕೊಳ್ಳಬೇಕು.

26
ಉಪ್ಪನ್ನು ಕಡಿಮೆ ಮಾಡಲು ಕೆಲವು ಉಪಾಯಗಳು

ಕೆಂಪು ಮೆಣಸಿನ ಪುಡಿ
ಕಬ್ಬಿಣವು ಕಬ್ಬಿಣವನ್ನು ಕತ್ತರಿಸುವಂತೆಯೇ, ಮಸಾಲೆಗಳನ್ನು ಮಸಾಲೆಗಳು ಮಾತ್ರ ಕತ್ತರಿಸುತ್ತವೆ. ಹೆಚ್ಚುವರಿ ಉಪ್ಪನ್ನು ಕಡಿಮೆ ಮಾಡಲು ಕೆಂಪು ಮೆಣಸಿನ ಪುಡಿ ಅಥವಾ ಹಸಿರು ಮೆಣಸಿನಕಾಯಿಗಳನ್ನು ಸಾಂಬಾರ್‌ ಅಥವಾ ಕರಿಗೆ ಸೇರಿಸಬಹುದು.

36
ಆಲೂಗಡ್ಡೆ

ಆಲೂಗಡ್ಡೆ ಸ್ವಲ್ಪ ಸಿಹಿ ರುಚಿಯನ್ನು ಮತ್ತು ಮಸಾಲೆ ಹೀರಿಕೊಳ್ಳುವ ಅಂಶವನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ಸಾಂಬಾರ್‌ಗೆ ಆಲೂಗಡ್ಡೆಯನ್ನು ಸೇರಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಉಪ್ಪು ಕಡಿಮೆಯಾಗುವುದಲ್ಲದೆ, ಸುವಾಸನೆಯೂ ಹೆಚ್ಚಾಗುತ್ತದೆ.

46
ಕಡಲೆ ಹಿಟ್ಟು

ಆಲೂಗಡ್ಡೆಯ ರುಚಿ ನಿಮಗೆ ಇಷ್ಟವಾಗದಿದ್ದರೆ ಕರಿ ಅಥವಾ ಸಾಂಬಾರ್‌ನಲ್ಲಿ ಕಡಲೆ ಹಿಟ್ಟು ಸೇರಿಸುವುದು ಉತ್ತಮ. ಸ್ವಲ್ಪ ಕಡಲೆ ಹಿಟ್ಟು ಸೇರಿಸಿ, ಆ ನಂತರ ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. ಬೇಯಿಸಿದ ನಂತರ ಬಡಿಸಿ. ಕಡಲೆ ಹಿಟ್ಟು ಸಹ ಉಪ್ಪನ್ನು ಸಮತೋಲನಗೊಳಿಸುತ್ತದೆ.

56
ದೇಸಿ ತುಪ್ಪ

ದೇಸಿ ತುಪ್ಪವನ್ನು ಸೇರಿಸುವುದರಿಂದ ಉಪ್ಪು, ಕೆಂಪು ಮೆಣಸಿನ ಪುಡಿ ಅಥವಾ ಗರಂ ಮಸಾಲವನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸುತ್ತದೆ. ಬಡಿಸುವ ಮೊದಲು ಅಥವಾ ಆ ಸಮಯದಲ್ಲಿ ದೇಸಿ ತುಪ್ಪವನ್ನು ಸೇರಿಸಿ. ಇದು ಖಂಡಿತವಾಗಿಯೂ ಸುವಾಸನೆ ಮತ್ತು ಉಪ್ಪನ್ನು ಬ್ಯಾಲೆನ್ಸ್ ಮಾಡುತ್ತದೆ.

66
ಮೊಸರು ಬಳಸಿ

ನೀವು ಹೆಚ್ಚು ಮೊಸರನ್ನು ಸಹ ಬಳಸಬಹುದು. ಇದು ಖಾರವನ್ನು ಕಡಿಮೆ ಮಾಡುವುದಲ್ಲದೆ, ಉಪ್ಪನ್ನು ಬ್ಯಾಲೆನ್ಸ್ ಮಾಡುತ್ತದೆ. ನೆನಪಿಡಿ ನೀವು ಉಪ್ಪನ್ನು ಯಾವಾಗಲೂ ಮಿತವಾಗಿ ಬಳಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories