Common tea mistakes: ಟೀ ಕೆಟ್ಟದಲ್ಲ, ಮಾಡುವ ವಿಧಾನವು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನೀವು ಎಂದಾದರೂ ಕೇಳಿದ್ದೀರಾ?. ಇಲ್ಲದಿದ್ದರೆ ನಾವು ಪ್ರತಿದಿನ ಟೀ ಮಾಡುವ ವಿಧಾನವು ಯಾವ ರೀತಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದನ್ನು ನಾವಿಲ್ಲಿ ನೋಡೋಣ..
ಹೆಚ್ಚಿನ ಜನರಿಗೆ ಟೀ ಅಂದ್ರೆ ಹಾಟ್ ಫೇವರಿಟ್. ಅದಕ್ಕೆ ಅನೇಕರು ಎದ್ದ ತಕ್ಷಣ ಒಂದು ಕಪ್ ಟೀಯೊಂದಿಗೆ ತಮ್ಮ ದಿನ ಪ್ರಾರಂಭಿಸುತ್ತಾರೆ. ಕೆಲವರಿಗೆ, ಟೀ ಸಿಗದಿದ್ದರೆ ಆ ದಿನವೇ ವೇಸ್ಟ್ ಎಂಬಂತೆ ಭಾವಿಸುತ್ತಾರೆ. ಕೆಲವರು ಟೀ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಕೆಟ್ಟದು ಎಂದು ಹೇಳಿರುವುದನ್ನ ಬಹುಶಃ ನೀವು ಕೇಳಿರಬಹುದು. ಆದರೆ ಟೀ ಕೆಟ್ಟದಲ್ಲ, ಮಾಡುವ ವಿಧಾನವು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನೀವು ಎಂದಾದರೂ ಕೇಳಿದ್ದೀರಾ?. ಇಲ್ಲದಿದ್ದರೆ ನಾವು ಪ್ರತಿದಿನ ಟೀ ಮಾಡುವ ವಿಧಾನವು ಯಾವ ರೀತಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದನ್ನು ನಾವಿಲ್ಲಿ ನೋಡೋಣ..
24
ಪ್ಲಾಸ್ಟಿಕ್ ಸ್ಟ್ರೈನರ್ (ಜಾಲರಿ) ಹಾನಿಕಾರಕ
ಅನೇಕ ಜನರು ಪ್ಲಾಸ್ಟಿಕ್ ಸ್ಟ್ರೈನರ್ ಬಳಸಿ ಟೀ ಸೋಸುತ್ತಾರೆ. ಆದರೆ ಪ್ಲಾಸ್ಟಿಕ್ ಸ್ಟ್ರೈನರ್ ಬಳಸುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?. ಬಿಸಿ ಟೀ ಪ್ಲಾಸ್ಟಿಕ್‌ನಿಂದ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಅದು ದೇಹವನ್ನು ಪ್ರವೇಶಿಸಿ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಯಾವಾಗಲೂ ಸ್ಟೀಲ್ ಸ್ಟ್ರೈನರ್ ಬಳಸಿ. ಇವು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ.
34
ಮತ್ತೆ ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಿ
ಅನೇಕ ಜನರು ಅತಿಥಿಗಳಿಗಾಗಿ ಅಥವಾ ತಮಗಾಗಿ ಉಳಿದ ಟೀ ಮತ್ತೆ ಬಿಸಿ ಮಾಡುವುದು ಸಾಮಾನ್ಯ. ಹಾಗೆ ಮಾಡುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಟೀ ರುಚಿಯನ್ನು ಹಾಳು ಮಾಡುವುದಲ್ಲದೆ ಅದರ ಪೌಷ್ಟಿಕಾಂಶದ ಮೌಲ್ಯವನ್ನು ಸಹ ನಾಶಪಡಿಸುತ್ತದೆ. ಇದು ಅಸಿಡಿಟಿಯಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.
ಟೀ ತಯಾರಿಸುವಾಗ ಮೊದಲು ಹಾಲು ಸೇರಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅಷ್ಟೇ ಅಲ್ಲ, ಇದು ಟೀ ನಿಜವಾದ ರುಚಿ ಮತ್ತು ಪ್ರಯೋಜನಗಳನ್ನು ಸಹ ಹಾಳು ಮಾಡುತ್ತದೆ. ಆದ್ದರಿಂದ ಟೀಪುಡಿ, ನೀರು, ಶುಂಠಿ ಇತ್ಯಾದಿಗಳನ್ನು ಒಟ್ಟಿಗೆ ಕುದಿಸಿ ನಂತರ ಹಾಲು ಸೇರಿಸುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.