ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮುಡಿಯುವಂತಿಲ್ಲ ಯಾಕೆ ಗೊತ್ತ?

First Published Jul 11, 2024, 4:53 PM IST

ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಅಲಂಕಾರ ಮತ್ತು ಸೇವೆಗಳಿಗಾಗಿ ಪ್ರತಿದಿನ ಟನ್ ಗಟ್ಟಲೆ ಹೂವುಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಭಕ್ತರು ಹೂವುಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಹೂ ಮುಡಿದ ಮಹಿಳೆಯರಿಗೆ ದೇವರ ದರ್ಶನ ಪಡೆಯಲು ಸಹ ಅವಕಾಶವಿಲ್ಲ ಯಾಕೆ ಅನ್ನೋದನ್ನ ನೋಡೋಣ. 
 

ಸಾಮಾನ್ಯವಾಗಿ ಭಕ್ತರು ದೇವಸ್ಥಾನಕ್ಕೆ ಹೇಗೆ ಹೋಗ್ತಾರೆ? ಸಾಂಪ್ರದಾಯಿಕ ಉಡುಗೆ (traditional dress) ತೊಟ್ಟು ಹೋಗ್ತಾರೆ ಅಲ್ವಾ? ವಿಶೇಷವಾಗಿ ಮಹಿಳೆಯರು ಸುಂದರವಾಗಿ ಜರಿ ಸೀರೆಯುಟ್ಟು, ಹಣೆ ಕುಂಕುಮದ ಬೊಟ್ಟನಿಟ್ಟು, ಕೈ ತುಂಬಾ ಬಳೆ ಇಟ್ಟು, ತಲೆ ತುಂಬಾ ಹೂವು ಮುಡಿದು ಹೋಗೋದು ಸಾಮಾನ್ಯ.
 

ದೇವಾಲಯಗಳಿಗೆ ಸಾಂಪ್ರದಾಯಿಕ ಉಡುಗೆ -ತೊಡುಗೆಯಲ್ಲಿ ಹೋಗುವ ಜನರನ್ನು ನಾವು ನೋಡ್ತಾನೆ ಇರೀವಿ, ಅದರಲ್ಲೇನಿದೆ ಹೊಸತು ಅಂತ ನಿಮಗೆ ಅನಿಸಬಹುದು. ಆದರೆ ನಿಮಗೆ ಗೊತ್ತಾ?, ಕಲಿಯುಗದ ವಿಶೇಷ ದೇವರಾದ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವಾದ ತಿರುಮಲದಲ್ಲಿ (Titupathi Tirumala) ಮಹಿಳೆಯರು ಹೂವುಗಳನ್ನು ಮುಡಿಯುವಂತಿಲ್ಲ. ಏಕೆ ಅನ್ನೋದು ನಿಮಗೆ ತಿಳಿದಿದೆಯೇ?

Latest Videos


ಕಲಿಯುಗದ ನೇರ ದೇವತೆ ಎಂದು ನಂಬಲಾದ ತಿರುಮಲ ಕ್ಷೇತ್ರಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಾರೆ. ತೆಲುಗು ರಾಜ್ಯಗಳು ಮಾತ್ರವಲ್ಲದೇ, ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪ್ರತಿದಿನ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಬ್ರಹ್ಮೋತ್ಸವಗಳು ಮತ್ತು ಇತರ ವಿಶೇಷ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ತಿರುಮಲವನ್ನು ತಲುಪುತ್ತಾರೆ. ದಿನಗಟ್ಟಲೆ ಸರದಿಯಲ್ಲಿ ಕಾದು ತಿಮ್ಮಪ್ಪನ ದರ್ಶನ ಪಡೆದು ಸಂತುಷ್ಟರಾಗ್ತಾರೆ. 
 

ತಿರುಮಲದಲ್ಲಿ ಪ್ರತಿದಿನವೂ ಹಬ್ಬದ ಸಂಭ್ರಮ ಇರುತ್ತೆ. ಶ್ರೀ ವೆಂಕಟೇಶ್ವರ ಸ್ವಾಮಿಗೆ ನಿಯಮಿತವಾಗಿ ವಿಶೇಷ ಪೂಜೆಗಳು, ಅರ್ಚನೆಗಳು ಮತ್ತು ಅಭಿಷೇಕಗಳು ನಡೆಯುತ್ತಲೇ ಇರುತ್ತವೆ. ಭಕ್ತರು ವಿವಿಧ ಅಲಂಕಾರಗಳಲ್ಲಿ ತಿಮ್ಮಪ್ಪನನ್ನು ನೋಡುತ್ತಾರೆ. ಶಿವನನ್ನು ಸಾಮಾನ್ಯವಾಗಿ ಅಭಿಷೇಕದ ಪ್ರೇಮಿ ಎಂದು ಕರೆದರೆ ಮತ್ತು ವಿಷ್ಣುವನ್ನು ಅಲಂಕಾರಗಳ ಪ್ರೇಮಿ ಎಂದು ಕರೆಯಲಾಗುತ್ತದೆ. ಅಂತೆಯೇ, ಶ್ರೀಹರಿಯನ್ನು ಹೂವುಗಳ ಪ್ರೇಮಿ ಎಂದು ಹೇಳಲಾಗುತ್ತದೆ. 
 

ಪುರಾಣಗಳ ಪ್ರಕಾರ ಶ್ರೀರಂಗಂ (Shreerangam) ಅನ್ನು ಭೋಗ ಮಂಟಪ ಮತ್ತು ಕಾಂಚಿಯನ್ನು ತ್ಯಾಗ ಮಂಟಪ ಎಂದು ಹೇಳಲಾಗುತ್ತದೆ. ಅಂತೆಯೇ, ಪುರಾಣಗಳು ತಿರುಮಲವನ್ನು ಹೂವಿನ ಮಂಟಪವೆಂದು ಉಲ್ಲೇಖಿಸುತ್ತವೆ. ತಿರುಮಲವು ಹೂವಿನ ಮಂಟಪವಾಗಿರೋದ್ರಿಂದ, ವೆಂಕಟೇಶ್ವರ ಹೂವುಗಳ ಪ್ರೇಮಿಯಾಗಿರುವುದರಿಂದ, ಪ್ರತಿದಿನ ಟನ್ ಗಟ್ಟಲೆ ಹೂವುಗಳಿಂದ ದೇವರಿಗೆ ಅಲಂಕಾರಗಳು ಮತ್ತು ಪೂಜೆಗಳನ್ನು ನಡೆಸಲಾಗುತ್ತದೆ.
 

ಅಷ್ಟೇ ಅಲ್ಲ ಬ್ರಹ್ಮೋತ್ಸವದ ಸಮಯದಲ್ಲಿ, ನೂರಾರು ವಿಧಗಳಲ್ಲಿ ವೆಂಕಟೇಶ್ವರನನ್ನು ಅಲಂಕರಿಸಲಾಗುತ್ತದೆ. ಟನ್ ಗಟ್ಟಲೆ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗುತ್ತದೆ. ಅದಕ್ಕಾಗಿಯೇ ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂವು ವಿಷ್ಣುವಿನ ಸಲುವಾಗಿ, ವಿಷ್ಣುವಿನ ಅಲಂಕಾರಕ್ಕಾಗಿಯೇ ಅರಳುತ್ತದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ. 
 

Tirupati

Tirupatiತಿರುಪತಿಯ ಏಳು ಬೆಟ್ಟಗಳಲ್ಲಿ ಎಲ್ಲೆಯೇ ಹೂವುಗಳಾದರೂ ಅದು ತಿಮ್ಮಪ್ಪನಿಗೆ ಸಲ್ಲಬೇಕೆಂಬ ನಂಬಿಕೆ ಇದೆ. ಅದಕ್ಕಾಗಿಯೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ದೇವರ ದರ್ಶನಕ್ಕೆ ತೆರಳುವ ಭಕ್ತರು ಹೂವುಗಳನ್ನು ಮುಡಿಯಬಾರದು ಎಂಬ ನಿಯಮವನ್ನು ಜಾರಿಗೆ ತಂದಿದೆ. ಇದನ್ನು ನಿಯಮಿತವಾಗಿ ಮೈಕ್ರೊಫೋನ್ ಗಳ ಮೂಲಕ ಜಾಹೀರಾತುಗಳ ಮೂಲಕ ತಿಳಿಸಲಾಗುತ್ತದೆ. ಇದರ ಬಗ್ಗೆ ತಿಳಿಯದೇ ಸಾಲಿನಲ್ಲಿ ದೇಗುಲ ದರ್ಶನಕ್ಕೆ ನಿಂತಿರುವವರನ್ನು ಸಾಲಿನಿಂದ ಹೊರ ಹಾಕುತ್ತಾರೆ, ಹೂ ಮುಡಿದು ಬಂದವರಿಗೆ ವೆಂಕಟೇಶ್ವರನ ದರ್ಶನದ ಭಾಗ್ಯ ಇರೋದಿಲ್ಲ. 

click me!