ಹೀಗೂ ಸೀರೆ ಉಡಬಹುದು ನೋಡಿ; ನವರಾತ್ರಿಗೆ ಸಖತ್ ಹಾಟ್ ಆದ 'ಕಬ್ಜ' ಸುಂದರಿಯ ಫೋಟೋ ವೈರಲ್

First Published Oct 4, 2022, 12:31 PM IST

ನಟಿ ಶ್ರೀಯಾ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೀರೆಯನ್ನು ಸುತ್ತಿಕೊಂಡು ಹಾಟ್ ಆಗಿ ಕಾಣಿಸಿಕೊಂಡಿರುವ ಶ್ರೀಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಬಹುಭಾಷಾ ನಟಿ ಶ್ರೀಯಾ ಶರಣ್  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಶ್ರೀಯಾ ಕನ್ನಡದ ಕಬ್ಜ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಸದ್ಯ ಶ್ರೀಯಾ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೀರೆಯನ್ನು ಸುತ್ತಿಕೊಂಡು ಹಾಟ್ ಆಗಿ ಕಾಣಿಸಿಕೊಂಡಿರುವ ಶ್ರೀಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ನವರಾತ್ರಿ ಹಬ್ಬಕ್ಕೆ ಹಾಟ್ ಆಗಿ ದರ್ಶನ ನೀಡಿರುವ ಶ್ರೀಯಾಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ವಿಚಿತ್ರವಾಗಿ ಸೀರೆ ಸುತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡಿರುವ ಶ್ರೀಯಾ ಫೋಟೋಗಳನ್ನು ಶೇರ್ ಮಾಡಿ, ಹಾಗೆ ಸೀರೆಯಲ್ಲಿ ಎಂದು ಕ್ಯಾಪ್ಷನ್ ನೀಡಿದ್ದಾರೆ. 

Shriya Saran

ಶ್ರೀಯಾ ವಿಚಿತ್ರವಾಗಿ ಬ್ಯಾಕ್ ಲೆಸ್ ಸೀರೆ ಉಟ್ಟಿರುವುದನ್ನು ನೋಡಿ ನೆಟ್ಟಿಗರು ಹೀಗೂ ಸೀರೆ ಉಡಬಹುದು ನೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 40 ವರ್ಷದ ನಟಿ ಶ್ರೀಯಾ ಈಗಲೂ ಸಿಕ್ಕಾಪಟ್ಟೆ ಹಾಟ್. ಫಿಟ್ ಅಂಡ್ ಫೈನ್ ಆಗಿರುವ ಶ್ರೀಯಾ ಈಗಲೂ ಬೇಡಿಕೆ ನಟಿ.

ಸದ್ಯ ಕಬ್ಜ ಸಿನಿಮಾದಲ್ಲಿ ನಟಿಸುವ ಮೂಲಕ ಶ್ರೀಯಾ ಬರೋಬ್ಬರಿ 9 ವರ್ಷಗಳ ಬಳಿಕ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ಶ್ರೀಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

Shriya Saran

ಶ್ರೀಯಾ ಕೊನೆಯದಾಗಿ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆರ್ ಆರ್ ಆರ್ ಸಿನಿಮಾಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಇನ್ನು ಹಿಂದಿಯಲ್ಲಿ ದೃಶ್ಯಂ -2 ಸಿನಿಮಾ ರಿಲೀಸ್ ಆಗಬೇಕಿದೆ. ಅಜಯ್ ದೇವಗನ್ ಜೊತೆ ಶ್ರೀಯಾ ನಟಿಸಿದ್ದಾರೆ. 

click me!