ಬ್ಲ್ಯಾಕ್‌ ಡ್ರೆಸ್‌ನಲ್ಲಿ ಬೇಬಿ ಡಾಲ್ ಸನ್ನಿ ಲಿಯೋನ್: ನಿಮ್ಮ ಹೊಸ ಪೊರ್ನ್ ವಿಡಿಯೋ ಯಾವಾಗ ರಿಲೀಸ್ ಅನ್ನೋದಾ?

First Published Dec 24, 2023, 11:19 AM IST

ಬಾಲಿವುಡ್ ಹಾಟ್ ತಾರೆ ಸನ್ನಿ ಲಿಯೋನ್ ತಮ್ಮ ಸೌಂದರ್ಯದಿಂದಲೇ ಸಾಕಷ್ಟು ಹೆಸರು ಮಾಡಿದ ಸುಂದರಿ. ಇದೀಗ ಆಕರ್ಷಕವಾದ ಫೊಟೋಶೂಟ್ ಮಾಡಿಸಿಕೊಂಡಿದ್ದು ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಹೇಗಿದೆ ನೋಡಿ.
 

ನಟಿ ಸನ್ನಿ ಲಿಯೋನ್ ಬಾಲಿವುಡ್‌ ಫ್ಯಾಷನಿಸ್ಟ್ ಸ್ಟಾರ್‌ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದಿವಾ ತನ್ನ ಅತ್ಯಾಕರ್ಷಕ ಫ್ಯಾಷನ್ಸೆನ್ಸ್‌ ನಿಂದಾಗಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ.  

ಬಿಕಿನಿ ಅವತಾರದಿಂದ ಹಿಡಿದು ಸೀರೆಯಲ್ಲಿ ಮಿಂಚುವ ನೀರೆಯ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ ಆಗುತ್ತಾರೆ. ಇದೀಗ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕಂಗೊಳಿಸಿರುವ ಸನ್ನಿ ಅಂದ ಸಖತ್ ಹಾಟ್ ಆಗಿದೆ.

ಬಿಟೌನ್‌ ಮಾದಕ ನಟಿ ಸನ್ನಿ ಲಿಯೋನ್‌ ಕೆಲವೊಂದಿಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕಪ್ಪು ಸೀಕ್ವಿನ್ಡ್ ಟಾಪ್, ಸ್ಕರ್ಟ್ ಮತ್ತು ಕಪ್ಪು ಬ್ಲೇಜರ್‌ನಲ್ಲಿ ಶೇಷಮ್ಮಾ ಸಖತ್‌ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಸನ್ನಿ ಲಿಯೋನ್ ಸುಂದರವಾದ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಸ್ಟೈಲಿಶ್‌ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. ಡ್ಯಾನ್ಸ್​ಗಳ ಮೂಲಕ ಪ್ರೇಕ್ಷರನ್ನು ರಂಜಿಸುವ ಸನ್ನಿ ಲಿಯೋನ್ ಈಗ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

ಅಭಿಮಾನಿಯೊಬ್ಬರು ಕಮೆಂಟ್ ಮಾಡಿ ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ ಎಂದು ಟ್ರೆಂಡಿ ಡೈಲಾಗ್ ಕಮೆಂಟ್ ಮಾಡಿ ಹೊಗಳಿದ್ದಾರೆ. ಇನ್ನೊಬ್ಬ ನೆಟ್ಟಿಗ ನಿಮ್ಮ ಹೊಸ ಪೊರ್ನ್ ವಿಡಿಯೋ ಯಾವಾಗ ರಿಲೀಸ್ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾನೆ.

ಇನ್ನೊಂದರಲ್ಲಿ ಬ್ಯಾಕ್ ಪೋಸ್ ಕೊಟ್ಟಿದ್ದು ಅವರು ಕಣ್ಣೋಟದಲ್ಲಿಯೇ ಯುವಕರನ್ನು ಮೋಡಿ ಮಾಡಿದ್ದಾರೆ. ನಟಿಯ ಈ ಲೇಟೆಸ್ಟ್ ಫೊಟೋಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಹಿಂದಿ ಬಿಗ್​ಬಾಸ್ ಅವಕಾಶವನ್ನು ಪಡೆದು ನಂತರ ಭಾರತದಲ್ಲಿ ದಿಢೀರ್ ಖ್ಯಾತಿಗೆ ಬಂದ ನಟಿ ಸನ್ನಿ ಲಿಯೋನ್ ಆರಂಭದಲ್ಲಿ ಡ್ಯಾನ್ಸ್​ಗಳನ್ನು ಮಾತ್ರ ಮಾಡುತ್ತಿದ್ದರೂ ನಂತರ ಒಳ್ಳೊಳ್ಳೆ ಸಿನಿಮಾ ಅವಕಾಶ ಪಡೆದಿದ್ದಾರೆ.

click me!