ಬರೀ ವಿಮಲ್ ಅಲ್ಲ ಮಗಳ ಕಡೆನೂ ಗಮನ ಕೊಡಿ; ಹಾಟ್ ಆದ ನಿಸಾ ನೋಡಿ ಅಜಯ್ ದೇವಗನ್‌ಗೆ ನೆಟ್ಟಿಗರ ತರಾಟೆ

First Published Jan 4, 2023, 11:27 AM IST

ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮಗಳ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಹೊಸ ವರ್ಷದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವ ನಿಸಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. 

ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮಗಳ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ಅಜಯ್ ದೇವಗನ್ ಇದೀಗ ಮಗಳ ನಿಸಾ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅಂದಹಾಗೆ ಅಜಯ್ ದೇವಗನ್ ಮಗಳು ನಿಸಾ ದೇವಗನ್ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. 

ದುಬೈನಲ್ಲಿ ತನ್ನ ಸ್ನೇಹಿತರ ಜೊತೆ ನಿಸಾ ದೇವಗನ್ 2023ರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ನಿಸಾ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ನೇಹಿತರ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 
 

ಅಂದಹಾಗೆ ನಿಸಾ ಕಪ್ಪು ಬಣ್ಣದ ಸಿಂಗಲ್ ಡ್ರೆಸ್ ಧರಿಸಿದ್ದರು. ಡೀಪ್ ನೆಕ್‌ನ ಬಟ್ಟೆಯಾಗಿತ್ತು. ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ನಿಸಾ ಕ್ಯಾಮರಾ ಮುಂದೆಯೂ ಅಷ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿಸಾ ಹೆಚ್ಚಾಗಿ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಆಗಾಗ ಸುದ್ದಿಯಾಗುತ್ತಿದ್ದಾರೆ. 

ನಿಸಾ ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು, ಬರೀ ವಿಮಲ್ ಕಡೆ ಮಾತ್ರವಲ್ಲ ಮಗಳ ಕಡೆಯೂ ಗಮನ ಹರಿಸಿ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಅಜಯ್ ದೇವಗನ್ ಮತ್ತು ಕಾಜೋಲ್ ನಿಮ್ಮ ಸಂಸ್ಕೃತಿ ಎಲ್ಲಿ ಹೋಯಿತು' ಎಂದು ಕೇಳುತ್ತಿದ್ದಾರೆ. 

ಮತ್ತೋರ್ವ ಕಾಮೆಂಟ್ ಮಾಡಿ, 'ಅಜಯ್ ಮತ್ತು ಕಾಜೋಲ್ ನೀವು ದೊಡ್ಡ ಸಂಸ್ಕೃತವಂತರು. ಆದರೆ ನಿಮ್ಮ ಮಗಳು ಉರ್ಫಿ ಜಾವೇದ್ ಗಿಂತನೂ 10 ಪಟ್ಟು ಮುಂದಕ್ಕೆ ಹೋಗಿದ್ದಾರೆ' ಎಂದು ಕಾಲೆಳೆಯುತ್ತಿದ್ದಾರೆ. 
 

ಅಂದಹಾಗೆ ನಿಸಾ ಅವರ ಕ್ರಿಸ್ಮಸ್ ಪಾರ್ಟಿಯ ಫೋಟೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಹೊಸ  ವರ್ಷವನ್ನು ಅದ್ದೂರಿಯಾಗಿ ಆಚರಿಸಿದ್ದರು. ಅಂದಹಾಗೆ ನಿಸಾ ಫೇಸ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ಕೆಲವು ದಿನಗಳ ಹಿಂದೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಬಳಿಕ ಫೇಸ್ ಸರ್ಜರಿ ಬಗ್ಗೆ ಕಾಜೋಲ್ ಪ್ರತಿಕ್ರಿಯೆ ನೀಡಿ ವದಂತಿಗೆ ಬ್ರೇಕ್ ಹಾಕಿದ್ದರು. 
 

ಮಗಳ ಸಿನಿಮಾ ಎಂಟ್ರಿ ಬಗ್ಗೆಯೂ ಕಾಜೋಲ್ ಮತನಾಡಿದ್ದರು. ಅವಳಿಗೆ ಒತ್ತಾಯ ಏನು ಇಲ್ಲ, ಅವಳ ಇಷ್ಟ ಎಂದು ಹೇಳಿದರು. ನಿಸಾ ಸ್ವತಃ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಎಂದು ನಾನು ಭಾವಿಸುತ್ತೇನೆ. ನಾನು ಅವಳನ್ನು ಸಿನಿಮಾದಿಂದ ದೂರ ತಳ್ಳುತ್ತಿಲ್ಲ. ನಾನು ಅವಳನ್ನು ಸಿನಿಮಾ ಕಡೆಗೆ ತಳ್ಳುತ್ತಿಲ್ಲ, ಅದು ಅವಳಿಗೆ ಬಿಟ್ಟಿದ್ದು. ಆಕೆಗೆ 18 ವರ್ಷ, ಅವಳು ದೊಡ್ಡವಳಾಗಿದ್ದಾಳೆ' ಎಂದು ಕಾಜೋಲ್ ಹೇಳಿದರು. 

click me!