ಮಾಜಿ ಪತ್ನಿಯರ ಜೊತೆ ಈದ್ ಹಬ್ಬ ಆಚರಿಸಿದ ಅಮೀರ್ ಖಾನ್, ಈಗಿನ ಪ್ರೇಯಸಿಯೂ ಜೊತೆಗಿದ್ಲಾ!?

ಅಮೀರ್ ಖಾನ್ ಫ್ಯಾಮಿಲಿ ಈದ್ ಸೆಲೆಬ್ರೇಷನ್. ಅಮೀರ್ ಖಾನ್ ಮನೆಯಲ್ಲಿ ಈದ್ ಹಬ್ಬದ ಸಂಭ್ರಮ ಜೋರಾಗಿತ್ತು. ಈ ಸಂದರ್ಭದಲ್ಲಿ ಮನೆಯವರೆಲ್ಲಾ ಒಟ್ಟಿಗೆ ಎಂಜಾಯ್ ಮಾಡಿದ್ರು. ಅಮೀರ್ ಖಾನ್ ಅವರ ಇಬ್ಬರು ಎಕ್ಸ್ ವೈಫ್ ರೀನಾ ದತ್ತಾ ಮತ್ತು ಕಿರಣ್ ರಾವ್ ಕೂಡಾ ಕಾಣಿಸಿಕೊಂಡರು. ಜೊತೆಗೆ ಅಳಿಯ ಕೂಡ ಭಾಗವಹಿಸಿದ್ದ.

ಅಮೀರ್ ಖಾನ್  ಇತ್ತೀಚೆಗೆ ತಮ್ಮ ಪ್ರೇಯಸಿ ಗೌರಿ ಸ್ಪ್ರಾಟ್ ಅವರನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಹಾಗೂ ಮಾಧ್ಯಮಗಳಿಗೆ ಪರಿಚಯಿಸಿದರು.  ಇದರ ನಡುವೆ ಸೋಮವಾರ ತಮ್ಮ ಮನೆಯಲ್ಲಿ ಅಮೀರ್ ಈದ್ ಹಬ್ಬವನ್ನ ಬಹಳ ಸಂಭ್ರಮದಿಂದ ತಮ್ಮ ಮಾಜಿ ಪತ್ನಿಯರು, ಮಕ್ಕಳು, ಅಳಿಯ, ಮಾತ್ರವಲ್ಲ ಸಹೋದರಿಯರ ಜೊತೆಗೆ  ಈದ್‌ ಆಚರಿಸಿಕೊಂಡು ಸಂಭ್ರಮಪಟ್ಟರು.

ಗೆಳತಿಯೊಂದಿಗೆ ಕಾಣಿಸಿಕೊಂಡ 60ರ ಹರೆಯದ ನಟ ಅಮೀರ್ ಖಾನ್: ಫೋಟೋಗಳು ವೈರಲ್‌!

ಸಲ್ಮಾನ್ ಖಾನ್ ತರಾನೇ ಅಮೀರ್ ಖಾನ್ ಮನೆಯಲ್ಲೂ ಈದ್ ಹಬ್ಬವನ್ನ  ಬಹಳ ಸಂಭ್ರಮದಿಂದ  ಆಚರಿಸಲಾಯಿತು.  ಅಮೀರ್ ಖಾನ್ ಅವರ ಎಕ್ಸ್ ವೈಫ್ ಕಿರಣ್ ರಾವ್  ಮತ್ತು ರೀನಾ ಕೂಡಾ ಈದ್ ಆಚರಿಸೋಕೆ ಮನೆಗೆ ಬಂದಿದ್ರು.  ಈದ್ ಹಬ್ಬದ ಸಂಭ್ರಮದಲ್ಲಿ ಅಮೀರ್ ಖಾನ್ ಅವರ ಇಬ್ಬರು ಎಕ್ಸ್ ವೈಫ್ ಒಬ್ಬರಿಗೊಬ್ಬರು ಖುಷಿಯಾಗಿದ್ದರು.


ಆಮಿರ್ ಖಾನ್ ಅವರ ತಾಯಿ, ಸಹೋದರಿಯರು ಮತ್ತು ಅವರ ಮಾಜಿ ಪತ್ನಿ ರೀನಾ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್  ಜೊತೆಗೆ ಸ್ನೇಹಿತರು ಈದ್ ಆಚರಿಸುತ್ತಿರುವ ಚಿತ್ರಗಳನ್ನು ಕಿರಣ್ ರಾವ್‌ ಹಂಚಿಕೊಂಡಿದ್ದಾರೆ. ಆದರೆ ಮಾಜಿ ಪತಿ ಅಮೀರ್‌ ಖಾನ್‌ ಚಿತ್ರವನ್ನು  ಹಂಚಿಕೊಂಡಿಲ್ಲ.

ಅಮೀರ್ ಖಾನ್ ಹೊಸ ಲವರ್ ಬೆಂಗಳೂರಿನ ಗೌರಿಯ ಅಸಲಿ ಫೋಟೋ ರಿವೀಲ್! ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ?

 ಅಮ್ಮೀ ಅವರ ಈದ್, ಅವರು ಅತ್ಯುತ್ತಮ ಮತ್ತು ಅತ್ಯಂತ ಸುಂದರ ಆತಿಥ್ಯ ಮಾಡುವ ಕುಟುಂಬ, ಇದು ಸ್ನೇಹಿತರೊಂದಿಗೆ ಆಚರಿಸುವ ಆಚರಣೆಯಾಗಿದೆ ಮತ್ತು ಯಾವಾಗಲೂ ಅತ್ಯುತ್ತಮ ಹಬ್ಬವಾಗಿದೆ! ಈ ವರ್ಷ ನಮ್ಮೆಲ್ಲರಿಗೂ ಶಾಂತಿ ಮತ್ತು ಸಂತೋಷವನ್ನು ತರಲಿ ಎಂದು ನಾವು ಆಶಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಕಿರಣ್ ರಾವ್‌ ಫೋಟೋ ಹಂಚಿಕೊಂಡಿದ್ದಾರೆ.

ಈದ್ ಹಬ್ಬದ ಸಂಭ್ರಮದಲ್ಲಿ ಅಮೀರ್ ಖಾನ್ ಅವರ ಇಬ್ಬರು ಎಕ್ಸ್ ವೈಫ್ ಒಬ್ಬರಿಗೊಬ್ಬರು ಅಪ್ಪಿಕೊಂಡ್ರು.  ಕಿರಣ್ ರಾವ್ ಮತ್ತು ರೀನಾ ದತ್ತಾ ಈದ್ ಸೆಲೆಬ್ರೇಷನ್‌ನಲ್ಲಿ ಅವರ ಅತ್ತಿಗೆಯಂದಿರ ಜೊತೆ ಫೋಟೋಗೆ ಪೋಸ್ ಕೊಡ್ತಿದ್ರು. ಇಷ್ಟೇ ಅಲ್ಲದೆ ಅಮೀರ್ ಖಾನ್   ಮನೆಯಲ್ಲಿ ಈದ್ ಹಬ್ಬಕ್ಕೆ ಬಂದ ಗೆಸ್ಟ್ ಗಳು ಕೂಡ ಊಟವನ್ನ ಸಖತ್ ಎಂಜಾಯ್ ಮಾಡಿದ್ರು.

ರೀನಾ V/S ಕಿರಣ್ ರಾವ್ V/S ಗೌರಿ.. ಯಾರೊಂದಿಗೆ ಅಮೀರ್ ಖಾನ್ ಸುದೀರ್ಘ ಆಟ..?!

ಈದ್ ಹಬ್ಬದ  ಸಂಭ್ರಮದಲ್ಲಿ ಅಮೀರ್ ಖಾನ್ ಅವರ ಅಳಿಯ ನೂಪುರ್ ಶಿಖರೆ ತುಂಬಾ ಮಸ್ತಿ ಮೂಡ್‌ನಲ್ಲಿ ಕಾಣ್ತಿದ್ರು. ಈದ್ ಹಬ್ಬದ ಟೈಮಲ್ಲಿ ಅಮೀರ್ ಖಾನ್ ಅವರ ಅಮ್ಮ ಜೀನತ್ ಹುಸೇನ್ ಫಿರೋಜ್ ಕಲರ್‌ನ ಜರಿ ಸೂಟ್‌ನಲ್ಲಿ ಚೆನ್ನಾಗಿದ್ರು. 

ಇರಾ, ಅವಳ ಪತಿ ನೂಪುರ್ ಶಿಖರೆ, ಅವರ ಮಾವ ಮತ್ತು ಉತ್ತಮ ಸ್ನೇಹಿತರಾದ ಆಶುತೋಷ್ ಮತ್ತು ಅವಿನಾಶ್ ಗೋವಾರಿಕರ್ ಅವರು ಆಚರಣೆಯಲ್ಲಿ ಉಪಸ್ಥಿತರಿದ್ದರು. 2025 ರ ಈದ್ ದಿನದಂದು, ಆಮಿರ್ ಸಹ ಕುಟುಂಬದೊಂದಿಗೆ ಈದ್ ಆಚರಿಸುತ್ತಿರುವುದು ಕಂಡುಬಂದಿತು.  ಮತ್ತು ಅವರ ಪುತ್ರರಾದ ಜುನೈದ್ ಮತ್ತು ಆಜಾದ್ ತಮ್ಮ ಅಭಿಮಾನಿಗಳನ್ನು ಸ್ವಾಗತಿಸುತ್ತಾ  ಪಾಪರಾಜಿಗಳಿಗೆ ಪೋಸ್ ನೀಡುತ್ತಾ, ನೆರೆದಿದ್ದ ಛಾಯಾಗ್ರಾಹಕರಿಗೆ ಸಿಹಿತಿಂಡಿಗಳನ್ನು ಸಹ ಹಂಚಿದರು.

ಆಮೀರ್ 1986 ರಲ್ಲಿ ರೀನಾಳನ್ನು ವಿವಾಹವಾಗಿ 2002 ರಲ್ಲಿ ಇಬ್ಬರೂ ಬೇರೆಯಾದರು. ಆಮಿರ್ ಮತ್ತು ಕಿರಣ್ 2005 ರಲ್ಲಿ ವಿವಾಹವಾದರು ಮತ್ತು 2021 ರಲ್ಲಿ ಬೇರ್ಪಟ್ಟರು. ಪ್ರಸ್ತುತ, ಆಮಿರ್ ಗೌರಿ ಸ್ಪ್ರಾಟ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಕಿರಣ್ ರಾವ್ ತಮ್ಮ ಕೊನೆಯ ನಿರ್ದೇಶನದ 'ಲಾಪತಾ ಲೇಡೀಸ್' ಚಿತ್ರದ ಮೂಲಕ ಹಲವು ಹೃದಯಗಳನ್ನು ಗೆದ್ದರು, ಇದು ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿತ್ತು. ಈ ವರ್ಷ ಐಫಾದಲ್ಲಿ ಈ ಚಿತ್ರವು ಹಲವಾರು ಪ್ರಶಸ್ತಿಗಳನ್ನು ಗೆದ್ದಿತು.    ಮತ್ತೊಂದೆಡೆ ಆಮೀರ್‌ ಮಾರ್ಚ್‌ನಲ್ಲಿ ತಮ್ಮ ಯೂಟ್ಯೂಬ್ ಚಾನೆಲ್ ಆಮೀರ್‌ ಖಾನ್ ಟಾಕೀಸ್ ಅನ್ನು ಪ್ರಾರಂಭಿಸಿದರು. ಅವರ ಮುಂದಿನ ಚಿತ್ರ 'ಸೀತಾರೆ ಜಮೀನ್ ಪರ್'  ಸದ್ಯದಲ್ಲೇ ತೆರೆಗೆ ಬರಲಿದೆ.

Latest Videos

click me!