ಒಂದೇ ಮಂಟಪದಲ್ಲಿ ಹಿಂದೂ- ಮುಸ್ಲಿಂ ಸ್ನೇಹಿತರ ಮದ್ವೆ: ಎಲ್ಲರ ಗಮನ ಸೆಳೀತಿದೆ ವಿಶೇಷ ಆಹ್ವಾನ ಪತ್ರಿಕೆ...

Published : Apr 10, 2025, 07:10 PM ISTUpdated : Apr 11, 2025, 10:05 AM IST
ಒಂದೇ ಮಂಟಪದಲ್ಲಿ ಹಿಂದೂ- ಮುಸ್ಲಿಂ ಸ್ನೇಹಿತರ ಮದ್ವೆ: ಎಲ್ಲರ ಗಮನ ಸೆಳೀತಿದೆ ವಿಶೇಷ ಆಹ್ವಾನ ಪತ್ರಿಕೆ...

ಸಾರಾಂಶ

ರಾಜಸ್ಥಾನದ ಕೋಟಾದಲ್ಲಿ ಬಾಲ್ಯದ ಗೆಳೆಯರಾದ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳು ತಮ್ಮ ಮಕ್ಕಳ ಮದುವೆಯನ್ನು ಒಂದೇ ದಿನ, ಒಂದೇ ಸ್ಥಳದಲ್ಲಿ ಆಯೋಜಿಸಿವೆ. ಸೌರಭ್ ಮತ್ತು ಯೂನಸ್ ಅವರ ವಿವಾಹವು ಏಪ್ರಿಲ್ 17 ಮತ್ತು 18 ರಂದು ನಡೆಯಲಿದ್ದು, ಎರಡೂ ಕುಟುಂಬಗಳು ಒಂದೇ ವಿವಾಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿವೆ. ಈ ವಿಶಿಷ್ಟ ಸಮಾರಂಭವು ಸೌಹಾರ್ದತೆಗೆ ಮಾದರಿಯಾಗಿದೆ.

ರಾಜಸ್ಥಾನದ ಕೋಟಾದಲ್ಲಿನ ಒಂದು ವಿವಾಹ ಪತ್ರ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗುತ್ತಿದೆ.  ಈ ಕಾರ್ಡ್‌ನಲ್ಲಿ, ದೇಶಾದ್ಯಂತ ಜನರಿಗೆ ಸಹೋದರತ್ವದ ಉತ್ತಮ ಸಂದೇಶವನ್ನು ನೀಡುತ್ತಿರುವ ಇಬ್ಬರು ಸ್ನೇಹಿತರ ಉದಾಹರಣೆಯನ್ನು ನಾವು ನೋಡಬಹುದು. ವಾಸ್ತವವಾಗಿ, ಕೋಟಾದಲ್ಲಿ ನಡೆಯುವ ಈ ಮದುವೆಯಲ್ಲಿ, ಒಬ್ಬ ವರ ಮುಸ್ಲಿಂ ಆಗಿದ್ದು, ಇನ್ನೊಬ್ಬ ಹಿಂದೂ ಆಗಿದ್ದಾನೆ. ಇವರಿಬ್ಬರ ಮದುವೆ ಒಂದೇ  ಮಂಟಪದಲ್ಲಿ ನಡೆಯಲಿದ್ದು, ಒಂದೇ ವೆಡ್ಡಿಂಗ್​ ಕಾರ್ಡ್​ ಪ್ರಿಂಟ್​ ಮಾಡಲಾಗಿದೆ. ಅಕ್ಕಪಕ್ಕದಲ್ಲಿಯೇ ಅವರ ಮದುವೆಯ ಬಗ್ಗೆ ಡಿಟೇಲ್ಸ್​ ಇದೆ.  ಎರಡೂ ಕುಟುಂಬಗಳು ಬೇರೆ ಬೇರೆ ಧರ್ಮಗಳಿಗೆ ಸೇರಿದವು ಆದರೆ ಅವರ ಮಕ್ಕಳನ್ನು ಒಂದೇ ಸ್ಥಳದಲ್ಲಿ ಮದುವೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದು ವಿಶೇಷವಾಗಿದೆ.
  
ಅಬ್ದುಲ್ ರೌಫ್ ಅನ್ಸಾರಿ ಅವರ ಕುಟುಂಬ ಮತ್ತು ವಿಶ್ವಜೀತ್ ಚಕ್ರವರ್ತಿ ಎನ್ನುವವರ ಮದುವೆ ಇದು. ಇವರ ಅಪ್ಪಂದಿರು ಇಬ್ಬರೂ  ಬಾಲ್ಯದ ಸ್ನೇಹಿತರು. ಇಬ್ಬರೂ ರಾಜಸ್ಥಾನದ ಕೋಟಾ ಜಿಲ್ಲೆಯ ಜನಕಪುರಿ ಮಾಲಾ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ದೊಡ್ಡವರಾದ ಬಳಿಕ ಇಬ್ಬರೂ ವ್ಯಾಪಾರ ಪಾಲುದಾರರಾಗಿದ್ದಾರೆ. ಅವರ ಮನೆ ಕೂಡ ಹತ್ತಿರದಲ್ಲೇ ನಿರ್ಮಿಸಲಾಗಿದೆ. ಅಬ್ದುಲ್ ರೌಫ್ ಅನ್ಸಾರಿ ಅವರ ಕುಟುಂಬ ಮತ್ತು ವಿಶ್ವಜೀತ್ ಚಕ್ರವರ್ತಿ ಅವರ ಕುಟುಂಬ ಕೂಡ ತಮ್ಮ ಎಲ್ಲಾ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಮತ್ತು ಪರಸ್ಪರರ ಹಬ್ಬಗಳನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಇದೀಗ, ಇವರು  ತಮ್ಮ ಪುತ್ರರಾದ ಸೌರಭ್ ಚಕ್ರವರ್ತಿ ಮತ್ತು ಯೂನಸ್ ಅನ್ಸಾರಿ ಅವರ ವಿವಾಹ ಸಮಾರಂಭವನ್ನು ಒಂದೇ ದಿನ ಮತ್ತು ಒಂದೇ ಸ್ಥಳದಲ್ಲಿ ಆಯೋಜಿಸಿದ್ದಾರೆ. ಇಬ್ಬರಿಗೂ ಒಂದೇ ಕಾರ್ಡ್ ಮುದ್ರಿಸಲಾಗಿದೆ.  

Viral Video: ಕಾಶಿಯಲ್ಲಿ ಕುತೂಹಲದ ರಾಮನವಮಿ- ವಕ್ಫ್​ ಮಸೂದೆ ಅಂಗೀಕಾರಕ್ಕೆ ಸಂತಸದಿಂದ ಮುಸ್ಲಿಂ ಮಹಿಳೆಯರ ಆರತಿ

ಈ ಕಾರ್ಡ್‌ನ ಒಂದು ಬದಿಯಲ್ಲಿ ಹಿಂದಿಯಲ್ಲಿ ಮತ್ತು ಇನ್ನೊಂದು ಬದಿಯಲ್ಲಿ ಉರ್ದು ಭಾಷೆಯಲ್ಲಿ ಮುದ್ರಿಸಲಾಗಿದ್ದು, ಅದಕ್ಕೆ "ಉತ್ಸವ್ ಇ ಶಾದಿ" ಎಂದು ಹೆಸರಿಸಲಾಗಿದೆ. ಒಬ್ಬರನ್ನೊಬ್ಬರು ಭೇಟಿ ಮಾಡುವ ಬಯಕೆಯಲ್ಲಿ ಪರಸ್ಪರರ ಕುಟುಂಬಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇಬ್ಬರೂ ಪ್ರತ್ಯೇಕವಾಗಿ ಮದುವೆಯಾಗಲಿದ್ದಾರೆ. ಆದರೆ ಅವರು ಒಟ್ಟಿಗೆ ವಿವಾಹ ಸಮಾರಂಭವನ್ನು ಆಯೋಜಿಸಿದ್ದಾರೆ. ಅಬ್ದುಲ್ ರೌಫ್ ಅನ್ಸಾರಿ ಅವರ ಪುತ್ರ ಯೂನಸ್ ಪರ್ವೇಜ್ ಅನ್ಸಾರಿ ಅವರ ವಿವಾಹ ಏಪ್ರಿಲ್ 17 ರಂದು ಮತ್ತು ವಿಶ್ವಜಿತ್ ಚಕ್ರವರ್ತಿ ಅವರ ಪುತ್ರ ಸೌರಭ್ ಅವರ ವಿವಾಹ ಏಪ್ರಿಲ್ 18 ರಂದು ನಡೆಯಲಿದೆ. ನಂತರ ಎರಡೂ ಕುಟುಂಬಗಳ ಆರತಕ್ಷತೆ ಒಂದೇ ರೆಸಾರ್ಟ್‌ನಲ್ಲಿ ನಡೆಯಲಿದೆ. ಅದಕ್ಕೆ ‘ದಾವತ್ ಎ ಖುಷಿ’ ಎಂದು ಹೆಸರಿಡಲಾಯಿತು.

ಜಾತಿ ಧರ್ಮದ ಹೆಸರಿನಲ್ಲಿ ಕಿತ್ತಾಟ ನಡೆಯುತ್ತಿರುವ ಸಂದರ್ಭದಲ್ಲಿ ಈ ಸ್ನೇಹಿತರ ಮದುವೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಇವರಿಬ್ಬರ ಸ್ನೇಹ ಸಂಬಂಧ ಹೀಗೆಯೇ ಮುಂದುವರೆಯಲಿ ಎಂದು ಅಭಿಮಾನಿಗಳು, ಹಿತೈಷಿಗಳು ಹಾರೈಸುತ್ತಿದ್ದಾರೆ. 

ನಿಗಿನಿಗಿ ಕೆಂಡ ತುಳಿದು ಹರಕೆ ತೀರಿಸಿದ ಬಿಗ್​ಬಾಸ್​ ಬ್ಯೂಟಿ ಅನುಷಾ ರೈ: ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌