ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!

Published : Apr 10, 2025, 02:46 PM ISTUpdated : Apr 10, 2025, 02:50 PM IST
ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!

ಸಾರಾಂಶ

ಕಿಚ್ಚ ಸುದೀಪ್ ಅವರು ತಮ್ಮ ಜೀವನದ ಅನುಭವದ ಮೂಲಕ ಹಲವಾರು ಸಂಗತಿಗಳನ್ನು ಹೊರಜಗತ್ತಿಗೆ ಹೇಳುತ್ತಾ ಇರುತ್ತಾರೆ. ಅದನ್ನು ಕೇಳಿ, ನೋಡಿ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್..

ಸ್ಯಾಂಡಲ್‌ವುಡ್ ನಟ, ಕಿಚ್ಚ ಸುದೀಪ್ (Kichcha Sudeep) ಅವರು ಆಗಾಗ ಹಲವಾರು ವೇದಿಕೆಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಮಾತನ್ನಾಡುತ್ತಾರೆ. ಅದನ್ನು ಕೆಲವರು ಮೋಟಿವೇಶನಲ್ ಸ್ಪೀಚ್ ಅಂತನೂ ಹೇಳಬಹುದು. ತಮ್ಮ ಜೀವನದ ಅನುಭವಗಳನ್ನು ಸಮಯಕ್ಕೆ ಸರಿಯಾಗಿ ಅಥವಾ ಕೇಳಿದ ಪ್ರಶ್ನೆಗೆ ಸಿಂಕ್ ಮಾಡಿಕೊಂಡು ನಟ ಸುದೀಪ್ ಅವರು ಮಾತನ್ನಾಡುತ್ತಾರೆ. ಇಲ್ಲಿ ಅದೇನೋ ಹೇಳಿದ್ದಾರೆ ನೋಡಿ.. 

'ನಾವ್ಯಾರೂ ಇಲ್ಲಿ ಶಾಶ್ವತ ಅಲ್ಲ.. ನಿಮ್ಮ ದೃಷ್ಟಿಯಲ್ಲಿ ನಾನು ದೊಡ್ದ ತಪ್ಪಿತಸ್ಥ ಆಗಿರಬಹುದು, ನಿಮ್ಮ ದೃಷ್ಟಿಯಲ್ಲಿ ನಾನು ಆಗಿರಬಹುದು. ಮುಖ್ಯವಾಗಿ ಯೋಚಿಸಬೇಕಾಗಿದ್ದು ಅಂದ್ರೆ, ಈ ವ್ಯಕ್ತಿ ನಮಗೆ ಈಗ ಬೇಕಾ? ಅನ್ನೋದು. ಬೇಕು ಅಂತಂದ್ರೆ, ಆ ಸಂಬಂಧನಾ ಉಳಿಸ್ಕೊಳ್ಳೋಕೆ ಎಲ್ಲಾ ಪ್ರಯತ್ನ ಮಾಡೋಣ.. ಬೇಡ ಅಂದ್ರೆ, ಅವ್ರನ್ನ ಬಿಟ್ಟು ಮುಂದಕ್ಕೆ ಹೋಗೋಣ.. ಅದು ಅವ್ರಿಗೂ ಒಳ್ಳೇದು, ನಮಗೂ ಒಳ್ಳೇದು.. ಅದು ಬಿಟ್ಟು ಅನಾವಶ್ಯಕ ಸಮಸ್ಯೆನಾ ಇಬ್ರೂ ಮಾಡ್ಕೊಳ್ಳೋದು ಯಾಕೆ?' ಎಂದಿದ್ದಾರೆ ಕಿಚ್ಚ ಸುದೀಪ್. 

ಕಿಚ್ಚ ಸುದೀಪ್ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ; ಆದ್ರೂ ಫ್ಯಾನ್ಸ್ ಕೋಪದ ಬದಲು ಖುಷಿಯಾಗಿದ್ದೇಕೆ?

ಹೌದು, ಕಿಚ್ಚ ಸುದೀಪ್ ಅವರು ತಮ್ಮ ಜೀವನದ ಅನುಭವದ ಮೂಲಕ ಹಲವಾರು ಸಂಗತಿಗಳನ್ನು ಹೊರಜಗತ್ತಿಗೆ ಹೇಳುತ್ತಾ ಇರುತ್ತಾರೆ. ಅದನ್ನು ಕೇಳಿ, ನೋಡಿ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕುತ್ತಾ ಇರುತ್ತಾರೆ. ಅದನ್ನು ಅವರ ಅಭಿಮಾನಿಗಳಲ್ಲಿ ಹಲವರು ಫಾಲೋ ಕೂಡ ಮಾಡಬಹುದು. ಆದರೆ, ನಟ ಸುದೀಪ್ ಅವರು ಹೇಳುವ ಮಾತುಗಳಿಗೆ ನೆಗೆಟಿವ್ ಕಾಮೆಂಟ್ಸ್ ಬರೋದು ತೀರಾ ಕಡಿಮೆ ಎನ್ನಬಹುದು. 

ಅಂದಹಾಗೆ, ನಟ ಸುದೀಪ್ ಅವರು ಸದ್ಯ 'ಬಿಲ್ಲ ರಂಗ ಭಾಷ' ಸಿನಿಮಾ ಶೂಟಿಂಗ್‌ಗೆ ರೆಡಿಯಾಗುತ್ತಿದ್ದಾರೆ. ಅದಕ್ಕಾಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ, ಸೂಕ್ತ ಡಯಟ್ ಮಾಡುತ್ತಿದ್ದಾರೆ.  ಈ ತಿಂಗಳ 16 ರಿಂದ (16 April 2025) ಸುದೀಪ್ ನಟನೆಯ ಬಿಲ್ಲ ರಂಗ ಭಾಷ ಚಿತ್ರದ ಶೂಟಿಂಗ್ ಶುರುವಾಗುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರು ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

 

ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆ ಕಂಡು ಅಭೂತಪೂರ್ವ ಯಶಸ್ಸು ಸಾಧಿಸಿದೆ. ಈ ಚಿತ್ರವು ಕಡಿಮೆ ಬಜೆಟ್‌ನಲ್ಲಿ ರೆಡಿಯಾಗಿ ಉತ್ತಮ ಕಲೆಕ್ಷನ್ ಮಾಡಿದೆ. ನಟ ಸುದೀಪ್ ವೃತ್ತಿಜೀವನದಲ್ಲಿ ಅತ್ಯುತ್ತಮ ಗಳಿಕೆ ಕಂಡ ಸಿನಿಮಾಗಳಲ್ಲಿ ಇದೂ ಕೂಡ ಒಂದು ಎನ್ನಬಹುದು. ಈ ಚಿತ್ರವು ಸ್ವತಃ ನಟ ಸುದೀಪ್ ಅವರಿಗೆ ಗೆಲುವು ಮಾತ್ರ ತಂದುಕೊಟ್ಟಿಲ್ಲ, ಬದಲಿಗೆ ಸೋತು ಕಂಗಾಆಗಿದ್ದ ಕನ್ನಡ ಸಿನಿಮಾ ಉದ್ಯಮಕ್ಕೆ ಕೂಡ ಟಾನಿಕ್ ಕೊಟ್ಟಿದೆ ಎಂದು ಧಾರಾಳವಾಗಿ ಹೇಳಬಹುದು.

ಒಟ್ಟಿನಲ್ಲಿ, ನಟ ಸುದೀಪ್ ಸದ್ಯ ಕ್ರಿಕೆಟ್ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋದಿಂದ ಸದ್ಯ ಹೊರಕ್ಕೆ ಬಂದಿದ್ದಾಗಿ ನಟ ಸುದೀಪ್ ಹೇಳಿಕೊಂಡಿದ್ದಾರೆ. ಬಿಗ್‌ಬಾಸ್‌ನ ಹನ್ನೊಂದು ಆವೃತ್ತಿಯನ್ನುನಿರೂಪಣೆ ಮಾಡಿರುವ ನಟ ಸುದೀಪ್ ಅವರು ಸದ್ಯಕ್ಕೆ ಅದರಿಂದ ನಿವೃತ್ತಿ ಪಡೆದಿದ್ದಾರೆ ಎನ್ನಬಹುದು. ಈ ವರ್ಷದ ಕೊನೆಯೊಳಗೆ ಬಿಲ್ಲ ರಂಗ ಭಾಷ ಚಿತ್ರವು ತೆರೆಗೆ ಬರಲಿದೆ. ಮ್ಯಾಕ್ಸ್ ಚಿತ್ರದ ಮೂಲಕ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿರುವ ಕಿಚ್ಚ ಸುದೀಪ್, ಮುಂಬರುವ ಸಿನಿಮಾ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿದ್ದಾರೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಸುದೀಪ್ ನಟನೆಯಲ್ಲಿ ಮುಂಬರುವ ಸಿನಿಮಾ 'ಬಿಲ್ಲ ರಂಗ ಭಾಷ' ಆಗಲಿದೆ. ಅದಕ್ಕೂ ಮೊದಲು ಬೇರೆ ಯಾವುದೇ ಸಿನಿಮಾ ಕ್ಯೂನಲ್ಲಿ ಇಲ್ಲ.. 

ಮೋಹನ್‌ಲಾಲ್-ಪೃಥ್ವಿರಾಜ್ ಕಮಾಲ್.. ಮಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'L2: ಎಂಪುರಾನ್'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?