ಧೂಮಪಾನಿಗಳಿಗೆ ಮಾತ್ರವಲ್ಲ ಇನ್ನೂ ಅನೇಕರ ತುಟಿ ಬಣ್ಣ ಕಪ್ಪಿರುತ್ತದೆ. ಹೊಳೆಯುತ್ತಿದ್ದ ತುಟಿಯ ಬಣ್ಣ ಮಂಕಾಗಿದ್ದರೆ ಅದಕ್ಕೆ ನಾನಾ ಕಾರಣ ಇರುತ್ತದೆ. ಅದು ಏನು ಎಂಬುದನ್ನು ತಿಳಿದುಕೊಂಡು ಪರಿಹಾರ ಹುಡುಕಿ.
ಮುಖ, ಚರ್ಮ, ಕೂದಲಿನ ಜೊತೆಗೆ ಕಣ್ಣು, ತುಟಿಯ ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆ. ಕೆಂದುಟಿಯ ಮೊಗದವಳು ಎಂದೇ ಚೆಂದದ, ಕೆಂಪು ತುಟಿಯ ಮಹಿಳೆಯನ್ನು ಹೊಗಳುತ್ತಾರೆ. ಪ್ರತಿಯೊಬ್ಬರು ಸುಂದರವಾದ, ಗುಲಾಬಿ ಬಣ್ಣದ ತುಟಿ ಹೊಂದಲು ಬಯಸ್ತಾರೆ. ಈಗಿನ ದಿನಗಳಲ್ಲಿ ಮನೆಯಿಂದ ಹೊರಗೆ ಬೀಳ್ಬೇಕೆಂದ್ರೆ ಲಿಪ್ಸ್ಟಿಕ್ ಹಚ್ಚಿಕೊಳ್ಳೋರೆ ಹೆಚ್ಚು. ಈ ಲಿಪ್ಸ್ಟಿಕ್ ನಿಮ್ಮ ತುಟಿಗೆ ತಾತ್ಕಾಲಿಕ ಸೌಂದರ್ಯ ನೀಡುತ್ತದೆ. ಅದನ್ನು ತೆಗೆದಾಗ ತುಟಿ ಬಿರುಕು ಬಿಡುವುದಲ್ಲದೆ ಬಣ್ಣ ಮಾಸಿರುತ್ತದೆ. ಅನೇಕರ ತುಟಿ ಕೆಂಪಗೆ ಇಲ್ಲವೆ ಗುಲಾಬಿ ಬಣ್ಣದಲ್ಲಿದ್ದರೆ ಮತ್ತೆ ಕೆಲವರ ತುಟಿ ಕಪ್ಪಾಗಿರುತ್ತದೆ. ಕಪ್ಪಾದ ತುಟಿ ನೋಡಿದ ತಕ್ಷಣ ಅನೇಕರು, ಅವರು ಧೂಮಪಾನ ಮಾಡ್ತಾರೆಂದು ಭಾವಿಸ್ತಾರೆ. ಧೂಮಪಾನಿಗಳ ತುಟಿ ಕಪ್ಪಾಗಿರೋದು ಸಾಮಾನ್ಯ. ಕೆಲವರಿಗೆ ಧೂಮಪಾನ ಮಾಡದೆ ತುಟಿ ಕಪ್ಪಾಗಿರುತ್ತದೆ. ಇದಕ್ಕೆ ಕಾರಣವೇನು, ಪರಿಹಾರ ಏನು ಎಂಬುದು ಇಲ್ಲಿದೆ.
ತುಟಿ (Lip) ಕಪ್ಪಾಗಲು ಇವೆಲ್ಲ ಕಾರಣ :
ದೇಹದಲ್ಲಿ ಹೆಚ್ಚಾಗುವ ಕಬ್ಬಿಣಾಂಶ (Iron) : ನಿಮ್ಮ ತುಟಿ ಕಪ್ಪಾ (Black) ಗಿದೆ ಎಂದ್ರೆ ಅದಕ್ಕೆ ಕಬ್ಬಿಣಾಂಶವೂ ಕಾರಣ ಆಗಿರಬಹುದು. ದೇಹವು ಹೆಚ್ಚು ಕಬ್ಬಿಣವನ್ನು ಸಂಗ್ರಹಿಸಲು ಅಥವಾ ಹೀರಲು ಶುರು ಮಾಡಿದಾಗ ಚರ್ಮದ ಮೇಲೆ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಚರ್ಮ ಕಪ್ಪಾಗುತ್ತದೆ. ನಿಮಗೆ ಆಯಾಸ ಕಾಣಿಸಿಕೊಳ್ಳುತ್ತದೆ. ಯಕೃತ್ತಿನ ಸಮಸ್ಯೆ ಕಾಡುತ್ತದೆ. ಇದಲ್ಲದೆ ನಿಮ್ಮ ತುಟಿ ಕಪ್ಪಾಗುತ್ತದೆ.
undefined
ಮಿಸ್ ಯೂನಿವರ್ಸ್ನ ಮಾಲೀಕ ಇವ್ರೇ ನೋಡಿ! ನಿಖಿಲ್ ಕುರಿತು ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ...
ಅಲರ್ಜಿ : ಕೆಲ ಉತ್ಪನ್ನಗಳು ಅಲರ್ಜಿ ಸಮಸ್ಯೆಯುಂಟು ಮಾಡುತ್ತವೆ. ಇದ್ರಿಂದ ತುಟಿ ಕಪ್ಪಾಗುತ್ತದೆ. ಇದನ್ನು ಪಿಗ್ಮೆಂಟೆಡ್ ಕಾಂಟ್ಯಾಕ್ಟ್ ಚೀಲೈಟಿಸ್ ಎಂದೂ ಕರೆಯುತ್ತಾರೆ. ಟೂತ್‌ಪೇಸ್ಟ್, ಮೌತ್‌ವಾಶ್, ಹೇರ್ ಡೈ, ಸುಗಂಧ, ಲಿಪ್‌ಸ್ಟಿಕ್, ಲಿಪ್ ಬಾಮ್ ಸೇರಿದಂತೆ ಕೆಲ ವಸ್ತುಗಳು ಅಲರ್ಜಿಯುಂಟು ಮಾಡಿದ್ರೆ ತುಟಿ ಕಪ್ಪಾಗುತ್ತದೆ.
ನೀರಿನ ಕೊರತೆ (Lack of Water) : ದೇಹಕ್ಕೆ ಅಗತ್ಯವಿರುವ ನೀರು ಸಿಗದೆ ಹೋದಾಗ ದೇಹ ನೀರ್ಜಲೀಕರಣಗೊಳ್ಳುತ್ತದೆ. ಇದರ ಲಕ್ಷಣ ತುಟಿ ಮತ್ತು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಒಣ ತುಟಿಯನ್ನು ನಾವು ನೆಕ್ಕಿದಾಗ ಹೈಪರ್ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ.
ಸನ್ ಸ್ಪಾಟ್ (Sun Spot) : ಸೂರ್ಯನ ಕಿರಣದಡಿ ದೀರ್ಘಕಾಲ ಇರುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯುವಿ ಕಿರಣಗಳಿಂದ ತುಟಿ ಕಪ್ಪಾಗುತ್ತದೆ. ಇದಕ್ಕೆ ಮನೆಯಲ್ಲಿ ಚಿಕಿತ್ಸೆ ಸಾಧ್ಯವಿಲ್ಲ. ನೀವು ತಜ್ಞ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.
ಔಷಧ (Medicine) : ಕೆಲ ಔಷಧಿಗಳು ತುಟಿ ಕಪ್ಪಾಗಲು ಕಾರಣವಾಗುತ್ತವೆ. ಮಲೇರಿಯಾ ವಿರೋಧಿ ಔಷಧಿ, ನೋವು ನಿವಾರಕಗಳು, ಆಂಟಿಮೈಕ್ರೊಬಿಯಲ್‌ಗಳನ್ನು ತುಟಿ ಪಿಗ್ಮಂಟೇಷನ್ ಉಂಟು ಮಾಡುತ್ತವೆ. ಇದನ್ನು ತಡೆಯಲು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.
ವಿಟಮಿನ್ ಕೊರತೆ (Vitamin Dificiency) : ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಬಿ 12 ಸೂಕ್ತ ಪ್ರಮಾಣದಲ್ಲಿ ಸಿಗದೆ ಹೋದಾಗ ಚರ್ಮದ ಬಣ್ಣ ಕಪ್ಪಾಗುತ್ತದೆ. ತುಟಿ ಬಣ್ಣ ಕೂಡ ಬದಲಾಗುತ್ತದೆ. ರಕ್ತಹೀನತೆ ಮತ್ತು ಬಾಯಿ ಹುಣ್ಣು, ಗಂಟಲ ನೋವು ಕೂಡ ಇದ್ರ ಲಕ್ಷಣವಾಗುದೆ. ವಿಟಮಿನ್ ಬಿ 12 ಪರೀಕ್ಷೆ ಮಾಡಿಸಿಕೊಂಡು ನಂತ್ರ ಅದಕ್ಕೆ ತಕ್ಕ ಔಷಧಿ ಸೇವನೆ ಮಾಡಬೇಕು.
ಹಾರ್ಮೋನ್ ಏರುಪೇರು (Harmonal Imbalance): ಅನೇಕ ಬಾರಿ ತುಟಿಯ ಬಣ್ಣ ಬದಲಾಗಲು ಹಾರ್ಮೋನ್ ಕೂಡ ಕಾರಣವಾಗುತ್ತದೆ. ಥೈರಾಯ್ಡ್ ಮತ್ತು ಕೆಲ ಹಾರ್ಮೋನ್ ಬದಲಾವಣೆಯಿಂದ ತುಟಿಯ ಬಣ್ಣ ಕಪ್ಪಾಗುತ್ತದೆ.
ಆರೆಂಜ್ ಸ್ಯಾರಿಯಲ್ಲಿ ಮಿಂಚಿದ ಶೋಭಾ ಶೆಟ್ಟಿ, ಇಷ್ಟೊಂದ್ ಮೇಕಪ್ ಮಾಡ್ಕೊಂಡ್ರೆ ಸ್ಕಿನ್ ಕ್ಯಾನ್ಸರ್ ಬರುತ್ತೆ ಎಂದ ನೆಟ್ಟಿಗರು!
ತುಟಿಯ ರಕ್ಷಣೆ ಹೀಗಿರಲಿ : ಯುವಿ ಕಿರಣದಿಂದ ದೂರವಿರುವುದು ಒಳ್ಳೆಯದು. ಹೊರಗೆ ಹೋಗುವ ಮುನ್ನ ತುಟಿಗೆ ಲಿಪ್ ಬಾಮ್ ಹಚ್ಚಿಕೊಳ್ಳಿ. ಸಾಕಷ್ಟು ನೀರು ಸೇವನೆ ಮಾಡಿ. ವಿಟಮಿನ್ ಪರೀಕ್ಷೆ ಮಾಡಿಸುತ್ತಿರಿ. ಆರೋಗ್ಯಕರ ಆಹಾರ ಸೇವನೆ ಮಾಡಿ.