ಸಾಧು – ಸಂತರ ಜಡೆ ನೋಡಿದ್ರೆ ಕೆಲವರಿಗೆ ಭಯವಾಗುತ್ತದೆ. ಗಂಟು ಕಟ್ಟಿದ, ಹಗ್ಗದಂತಿರು ಜಡೆಯನ್ನು ಸಂಭಾಳಿಸೋದು ಕಷ್ಟ. ಸೋಪ್, ಶಾಂಪೂ ಇಲ್ಲದ ಕೂದಲನ್ನು ಆರೈಕೆ ಮಾಡೋಕೂ ಒಂದು ಪಾರ್ಲರ್ ಇದೆ ಗೊತ್ತಾ?
ಸಾಧು – ಸಂತರ ಹೆಸರು ಕೇಳ್ತಿದ್ದಂತೆ ಉದ್ದದ ಜಡೆಗಳು ನೆನಪಿಗೆ ಬರುತ್ತವೆ. ಹಿಮಾಲಯದಲ್ಲಿರುವ ಸಾಧುಗಳು ಉದ್ದದ ಗಡ್ಡದ ಜೊತೆ ಗಂಟು ಕಟ್ಟಿದ ಜಡೆಯನ್ನು ಹೊಂದಿರುತ್ತಾರೆ. ಕೆಲವರು ಗಂಟು ಕಟ್ಟಿದ್ರೆ ಮತ್ತೆ ಕೆಲವರು ಜಡೆ ಹೆಣೆದು ಅದನ್ನು ಗಂಟಿನ ರೂಪದಲ್ಲಿ ಕಟ್ಟುತ್ತಾರೆ. ಮತ್ತೆ ಕೆಲವರು ಮೇಲೆ ಗಂಟು ಹಾಕಿ ಕೆಳಗಿನ ಕೂದಲನ್ನು ಜಡೆಯಂತೆ ಹೆಣೆದು ಹಗ್ಗದ ರೀತಿ ಮಾಡ್ತಾರೆ. ಕೆಲ ಸಾಧುಗಳ ಹೇರ್ ಸ್ಟೈಲ್ ಆಕರ್ಷಕವಾಗಿರುತ್ತದೆ. ಇಷ್ಟು ಉದ್ದುದ್ದರ ಕೂದಲಿನ ಆರೈಕೆಯನ್ನು ಸಾಧುಗಳು ಹೇಗೆ ಮಾಡ್ತಾರೆ ಎಂಬ ಪ್ರಶ್ನೆ ಅನೇಕರಿಗೆ ಕಾಡುವುದಿದೆ. ಉತ್ತರ ಭೋಪಾಲ್‌ನ ಹೇರ್ ಆರ್ಟಿಸ್ಟ್ ಕರಿಷ್ಮಾ ಶರ್ಮಾಗೂ ಇದೇ ಪ್ರಶ್ನೆ ಕಾಡತ್ತು. ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದ ಕರಿಷ್ಮಾ ಮೊದಲ ಬಾರಿ ಸಾಧುಗಳ ಕೂದಲ ಶೃಂಗಾರಕ್ಕಾಗಿ ಬ್ಯುಟಿಪಾರ್ಲರ್ ಶುರು ಮಾಡಿದ್ರು.
ಕರಿಷ್ಮಾ, ಭೋಪಾಲ್ (Bhopal) ನ ವಿನರ್ ರೆಸಿಡೆನ್ಸಿಯಲ್ಲಿ ಅಲೆಜಿಯನ್ಸ್ (Allegiance) ಹೆಸರಿನ ಸ್ಟುಡಿಯೋ ತೆರೆದಿದ್ದಾರೆ. ವೃತ್ತಿಯಲ್ಲಿ ಕಂಪ್ಯೂಟರ್ (Computer) ಇಂಜಿನಿಯರ್ ಆಗಿದ್ದ ಕರಿಷ್ಮಾ, ಸಾಧುಗಳ ಹೇರ್ ಆರ್ಟಿಸ್ಟ್ ಆಗಿ ಬದಲಾಗಿದ್ದು ಆಸಕ್ತಿದಾಯಕವಾಗಿದೆ. ಈ ಕೆಲಸ ಅವರಿಗೆ ಸುಲಭವೂ ಆಗಿರಲಿಲ್ಲ.
undefined
ಅನ್ಯಗ್ರಹ ಜೀವಿಯಂತೆ ಕಾಣಿಸಲು ತೋರು ಬೆರಳ ಕತ್ತರಿಸಿಕೊಂಡ ಭೂಪ!
ಹೇಗೆ ಆರಂಭವಾಯ್ತು ಸ್ಟುಡಿಯೋ : ಕರಿಷ್ಮಾ ಛಿಂದ್ವಾರಾದಿಂದ ಭೋಪಾಲ್ ಗೆ ಬಂದರು. ಇಂಜಿನಿಯರಿಂಗ್ ಮುಗಿಸಿದ ನಂತ್ರ ಕರಿಷ್ಮಾ ಕೂಡ ಕೂದಲನ್ನು ಜಡೆ ಹೆಣಿದು ಕಟ್ಟುವ ನಿರ್ಧಾರಕ್ಕೆ ಬಂದಿದ್ದರು. ಆದ್ರೆ ಅದರ ಆರೈಕೆ ಎಷ್ಟು ಕಷ್ಟ ಎಂಬುದು ಸ್ವಂತ ಅರಿವಿಗೆ ಬಂತು. ಆಗ ಅವರು ಕಾಶಿ, ಉಜ್ಜಯಿನಿ ಸೇರಿದಂತೆ ಅನೇಕ ತೀರ್ಥಯಾತ್ರಾ ಸ್ಥಳಗಳಲ್ಲಿ ಋಷಿಗಳನ್ನು ಭೇಟಿಯಾದರು. ಕೆಲ ಸಾಧುಗಳ ಜಡೆಗಳು ಆರೈಕೆಯಿಲ್ಲದೆ ಹಾಳಾಗಿರುವುದನ್ನು ನೋಡಿದ್ರು. ಕೆಲವರು ಸೂಜಿ, ದಾರದಿಂದ ಕೂದಲನ್ನು ಗಂಟು ಹಾಕಿದ್ದರು. ಅವರ ಸಮಸ್ಯೆಯನ್ನು ಅರಿತ ಕರಿಷ್ಮಾ ಸಾಧುಗಳ ಕೂದಲ ಆರೈಕೆಗಾಗಿಯೇ ಸ್ಟುಡಿಯೋ ತೆರೆಯಲು ನಿರ್ಧರಿಸಿದ್ರು. ಆರಂಭದಲ್ಲಿ ಕುಟುಂಬಸ್ಥರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಜನರು ಅನೇಕ ಮಾತುಗಳನ್ನಾಡಿದ್ದರು. ಇಷ್ಟವಿಲ್ಲದ ಮನಸ್ಸಿನಲ್ಲಿಯೇ ಇಂಜಿನಿಯರಿಂಗ್ ಮುಗಿಸಿದ್ದ ಕರಿಷ್ಮಾಗೆ ಅಲ್ಲಿ ಕೆಲಸ ಮಾಡಲು ಆಸಕ್ತಿ ಇರಲಿಲ್ಲ. ಹೊಸದೇನಾದ್ರೂ ಮಾಡಬೇಕೆಂದು ಅವರು ಈ ಕೆಲಸಕ್ಕೆ ಕೈ ಹಾಕಿದ್ದರು.
ಹೇರ್ ಸ್ಟೈಲ್ ಸ್ಟುಡಿಯೋ ತೆರೆದು ಸುಮಾರು ಒಂದೂವರೆ ವರ್ಷ ಕಳೆದಿದೆ. ಈ ಸಮಯದಲ್ಲಿ ಸುಮಾರು 40 ಕ್ಕೂ ಹೆಚ್ಚು ಸಾಧು-ಸಂತರು ಇಲ್ಲಿಗೆ ಬಂದಿದ್ದಾರೆ. ಕಲಾವಿದೆ ಕರಿಷ್ಮಾ ಶರ್ಮಾ ಅವರು ಕೆಲವು ಸಾಧುಗಳು ಇರುವ ಜಾಗಕ್ಕೆ ಹೋಗಿ ಅವರ ಹೇರ್ ಕೇರ್ ಮಾಡಿದ್ದಾರೆ. ಆ ಸಾಧುಗಳು ತಮಗೆ ತಿಳಿದ ಬೇರೆ ಸಾಧುಗಳು ಕೂದಲ ಆರೈಕೆ ಬಯಸಿದ್ರೆ ಅವರನ್ನು ಕರಿಷ್ಮಾ ಬಳಿ ಕಳುಹಿಸುತ್ತಾರೆ. ಕರಿಷ್ಮಾ ಯಾವುದೇ ಸೇವನೆಗೆ ರೇಟ್ ಫಿಕ್ಸ್ ಮಾಡಿಲ್ಲ. ಸಾಧುಗಳು ನೀಡಿದಷ್ಟು ಹಣವನ್ನು ಪಡೆಯುತ್ತಾರೆ.
ಇಳ್ಕಲ್ ಸೀರೆ, ಮುತ್ತಿನ ಮೂಗುತಿಯಲ್ಲಿ ರಂಜನಿ ರಾಘವನ್ ಪೋಸ್ : ಆ ಮೂಗುತಿ ನಾನಾಗಬಾರದೇ ಎಂದ ನೆಟ್ಟಿಗರು!
ಸಾಧುಗಳು 10 – 15 ವರ್ಷಗಳಿಂದ ಕೂದಲನ್ನು ತೊಳೆಯೋದು, ಬಾಚೋದು ಮಾಡಿರೋದಿಲ್ಲ. ಅದಕ್ಕೆ ಅರಿಶಿನ, ತುಪ್ಪವೆಲ್ಲ ಸೇರುವ ಕಾರಣ ಕೂದಲು ಗಟ್ಟಿಯಾಗಿರುತ್ತದೆ. ಅದನ್ನು ಬಿಚ್ಚಿ, ತೊಳೆದು ಮತ್ತೆ ಅದಕ್ಕೊಂದು ಆಕಾರ ನೀಡುವುದು ಸವಾಲು. ಒಮ್ಮೊಮ್ಮೆ ನಾಲ್ಕೈದು ದಿನ ಇದಕ್ಕೆ ಹಿಡಿಯುತ್ತದೆ. ಆಗ ತಾಳ್ಮೆ ಬೇಕು ಎನ್ನುತ್ತಾರೆ ಕರಿಷ್ಮಾ. ಋಷಿಗಳು ತಮ್ಮ ಕೂದಲನ್ನು ನದಿಗಳ ಮರಳಿನಿಂದ ತೊಳೆಯುತ್ತಾರೆ. ಸೆಣಬನ್ನು ಧರಿಸುವ ಋಷಿಗಳು ಪಾದರಸವನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ ಕೂದಲಿನಲ್ಲಿ ಯಾವುದೇ ದುರ್ವಾಸನೆ ಇರುವುದಿಲ್ಲ. ಸಾಧುಗಳು ತಮ್ಮ ಕೂದಲನ್ನು ವಿವಿಧ ರೀತಿಯಲ್ಲಿ ಅಲಂಕರಿಸುತ್ತಾರೆ. ಕೆಲವರು ಹೂವುಗಳಿಂದ ಅಲಂಕರಿಸುತ್ತಾರೆ, ಕೆಲವರು ರುದ್ರಾಕ್ಷದಿಂದ ಮತ್ತು ಕೆಲವರು ಮುತ್ತುಗಳ ಮಣಿಗಳಿಂದ ಕೂದಲನ್ನು ಅಲಂಕರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲೂ ಡ್ರೆಡ್ಲಾಕ್ ಕೂದಲಿನ ಕ್ರೇಜ್ ಹೆಚ್ಚಾಗಿದೆ. ಕೂದಲನ್ನು ಹೆಣೆಯುವ ಮೂಲಕ ರಚಿಸಲಾದ ಹಗ್ಗವನ್ನು ಡ್ರೆಡ್ಲಾಕ್ ಎಂದು ಕರೆಯಲಾಗುತ್ತದೆ. ಇದನ್ನು ಮಾಡಲು ಸುಮಾರು 200 ರಿಂದ 2000 ರೂಪಾಯಿವರೆಗೆ ಖರ್ಚು ಬರುತ್ತದೆ.