ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ನಿರ್ಮಾಪಕರಿಗೆ ಕಾಪಿ ರೈಟ್ ಉಲ್ಲಂಘಿಸಿದ ಆರೋಪದ ಮೇಲೆ ಇಳಯರಾಜಾ ಅವರು ನೊಟೀಸ್ ಕಳುಹಿಸಿದ್ದಾರೆ.
2006ರಲ್ಲಿ ನಡೆದ ನಿಜ ಘಟನೆ ಆಧರಿತ ಮಲಯಾಳಂ ಸಿನಿಮಾ ಮಂಜುಮ್ಮೆಲ್ ಬಾಯ್ಸ್‌ಗೆ ಸಂಕಷ್ಟ ಎದುರಾಗಿದೆ. ಈ ಸಿನಿಮಾದಲ್ಲಿ ತಾವು ಸಂಗೀತ ನೀಡಿದ ತಮಿಳು ಭಾಷೆಯ ಕಣ್ಮಣಿ ಅನ್ಬೊದು ಹಾಡನ್ನು ಒಪ್ಪಿಗೆ ಇಲ್ಲದೇ ಬಳಸಲಾಗಿದೆ ಎಂದು ಆರೋಪಿಸಿರುವ ಸಂಗೀತ ನಿರ್ದೇಶಕ ಇಳಯರಾಜ ಮಂಜುಮ್ಮೆಲ್ ತಂಡದ ನಿರ್ಮಾಪಕರಿಗೆ ಲೀಗಲ್ ನೊಟೀಸ್ ಕಳುಹಿಸಿದ್ದಾರೆ. ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ನಿರ್ಮಾಪಕರಿಗೆ ಕಾಪಿ ರೈಟ್ ಉಲ್ಲಂಘಿಸಿದ ಆರೋಪದ ಮೇಲೆ ಇಳಯರಾಜಾ ಅವರು ನೊಟೀಸ್ ಕಳುಹಿಸಿದ್ದಾರೆ.
ಕಣ್ಮಣಿ ಅನ್ಬೊದು ಹಾಡು ತಮಿಳಿನಲ್ಲಿ ನಟ ಕಮಲ್ ಹಾಸನ್ ಅವರು ನಟಿಸಿರುವ ಗುನ್ನಾ ಸಿನಿಮಾದ ಹಾಡಾಗಿದ್ದು, ಅದನ್ನು ಯಾವುದೇ ಅನುಮತಿ ಪಡೆಯದೇ ಮಂಜುಮ್ಮೆಲ್ ಬಾಯ್ಸ್ ಸಿನಿಮಾದವರು ಬಳಸಿ ಕಾಪಿ ರೈಟ್ ಉಲ್ಲಂಘನೆ ಮಾಡಿದ್ದಾರೆ ಎಂದು ಸಂಗೀತಾ ನಿರ್ದೇಶಕ ಇಳಯರಾಜ ಆರೋಪಿಸಿದ್ದಾರೆ. ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ನಿರ್ಣಾಯಕ ಹಂತದಲ್ಲಿ ಇಳಯರಾಜ ಅವರ ಈ ಹಾಡನ್ನು ಬಳಸಲಾಗಿದೆ. ಇದಕ್ಕೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಮೂಲತಃ ಈ ಹಾಡಿಗೆ ಸಂಗೀತ ನಿರ್ದೇಶಿಸಿದ ಇಳಯರಾಜ ಅವರಿಗೆ ಮಾತ್ರ ಈ ಹಾಡನ್ನು ಬಳಸಿರುವುದಕ್ಕೆ ಸಿಟ್ಟು ಬಂದಿದೆ.
undefined
2024ರಲ್ಲಿ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಮಲೆಯಾಳಂ ಚಿತ್ರಗಳಿವು; ಒಟಿಟಿಯಲ್ಲಿ ಮಿಸ್ ಮಾಡ್ದೇ ನೋಡಿ
ಹೀಗಾಗಿ ಇಳಯರಾಜ ಈಗ ನಿರ್ಮಾಪಕರ ವಿರುದ್ಧ ಕಾಪಿ ರೈಟ್ ಉಲ್ಲಂಘಿಸಿದ ಕೇಸ್ ದಾಖಲಿಸಿದ್ದಾರೆ. ತಮ್ಮ ಈ ಹಾಡನ್ನು ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಬಳಸಲೇಬೇಕೆಂದಿದ್ದರೆ ಸರಿಯಾಗಿ ಅನುಮತಿ ತೆಗೆದುಕೊಂಡು ಮುಂದುವರೆಯುವಂತೆ ಇಳಯರಾಜ ಅವರು ಕಳುಹಿಸಿದ ಲೀಗಲ್ ನೋಟೀಸ್‌ನಲ್ಲಿ ತಿಳಿಸಲಾಗಿದೆ.
ಕಣ್ಮಣಿ ಅನ್ಬೋದು ಹಾಡಿನ ಮೇಲೆ ಇಳಯರಾಜ ಕಾನೂನಾತ್ಮಕ, ನೈತಿಕ ಮತ್ತು ವಿಶೇಷ ಹಕ್ಕುಗಳನ್ನು ಹೊಂದಿದ್ದಾರೆ. ಹೀಗಾಗಿ ಆ ಹಾಡಿನ ಅಸಮರ್ಪಕ ಮತ್ತು ಅನಧಿಕೃತ ಬಳಕೆಗಾಗಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವ ಹಕ್ಕನ್ನು ಅವರು ಹೊಂದಿದ್ದಾರೆ ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ. ಈ ಹಿಂದೆ ಒಬ್ಬರು ಪತ್ರಕರ್ತರು ಕೂಡ ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ನಿರ್ಮಾಪಕರ ವಿರುದ್ಧ ಆರೋಪಿಸಿದ್ದರು. ಗುನಾ ಸಿನಿಮಾದ ಹಾಡನ್ನು ಇಳಯರಾಜ ಅವರ ಒಪ್ಪಿಗೆ ಪಡೆಯದೇ ಬಳಸಿದ್ದಾರೆ ಎಂದು ಪತ್ರಕರ್ತರೊಬ್ಬರು ದೂರಿದ್ದರು.
Manjummel boys Malayalam Movie Review: ಹುಡುಗಾಟಿಕೆಯಲ್ಲಿ ಅಪಾಯದ ಗಡಿ ದಾಟಿ, ಸಿಕ್ಕಾಕಿಕೊಂಡು ನರಳೋ ಚಿತ್ರ
ಮಂಜುಮ್ಮೆಲ್ ಬಾಯ್ಸ್ ಸಿನಿಮಾವೂ ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದು, ಈ ವರ್ಷ ಬಿಡುಗಡೆಯಾದ ಮಲೆಯಾಳಂ ಸಿನಿಮಾಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಅತ್ಯುತ್ತಮ ಗಳಿಕೆ ಮಾಡಿದ ನಂಬರ್ 1 ಸಿನಿಮಾ ಎನಿಸಿದೆ. ಪ್ರಪಾತಕ್ಕೆ ಬಿದ್ದು ಬದುಕುಳಿಯುವ ಥ್ರಿಲ್ಲರ್ ಕತೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್ ಮತ್ತು ಶೆಬಿನ್ ಬೆನ್ಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
2006ರಲ್ಲಿ ನಡೆದ ನಿಜ ಘಟನೆಯ ಆಧರಿತ ಸಿನಿಮಾ ಇದಾಗಿದ್ದು, ಸ್ನೇಹಿತರ ಗುಂಪೊಂದು ಕೊಡೈಕೆನಾಲ್‌ಗೆ ಪ್ರವಾಸ ಹೋಗಿದ್ದು, ಈ ವೇಳೆ ಗುನಾ ಗುಹೆಯಲ್ಲಿ ಸಿಕ್ಕಿಬಿದ್ದ ನಂತರ ಅವರ ಬದುಕು ಏರುಪೇರಾಗುವಂತಹ ಕತೆಯನ್ನು ಹೊಂದಿದೆ.