ಡಾ ರಾಜ್‌ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!

By Shriram Bhat  |  First Published Nov 16, 2024, 1:57 PM IST

'ವಿಷಯ ಅದಲ್ಲ. ಡಾ ರಾಜ್‌ಕುಮಾರ್ ಅವರೊಬ್ಬರು ಮೇರು ನಟರು ಹಾಗೂ ಕಲಾತಪಸ್ವಿ. ಅವರು ತಮ್ಮದೇ ಸಿನಿಮಾದ ನಿರ್ಮಾಪಕರು ಆಗಿರಲಿಲ್ಲ, ತಮ್ಮ ನಿರ್ಮಾಣ ಸಂಸ್ಥೆ ನಡೆಸುತ್ತಿರಲಿಲ್ಲ. ಹೀಗಾಗಿ ನಟಿಸುವುದನ್ನು ಬಿಟ್ಟರೆ ಅಣ್ಣಾವ್ರು ತಮ್ಮದೇ ಸಿನಿಮಾದ ಲಾಭ-ನಷ್ಟಗಳ ಬಗ್ಗೆ ಕೂಡ ತಲೆಕೆಡಿಸಿ..


ಕನ್ನಡನಾಡಿನ ಮೇರು ನಟ ಅಣ್ಣಾವ್ರು ಡಾ ರಾಜ್‌ಕುಮಾರ್ (Dr Rajkumar) ಮೇಲೆ ಬಹಳ ಕಾಲದಿಂದಲೂ ಒಂದು ಭಾರಿ ಆರೋಪವಿದೆ. ಅದೇನೆಂದು ಹಲವರಿಗೆ ಗೊತ್ತು. ಈ ಘನಘೋರವಾದ ಆರೋಪದ ಬಗ್ಗೆ ಪ್ರೊಫೆಸರ್ ಕೃಷ್ಣೇಗೌಡ್ರು (Professor Krishne Gowda) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ,ಅಧಿಗ ಸೋಷಿಯಲ್ ಮೀಡಿಯಾ ಮೂಲಕ ಭಾರೀ ವೈರಲ್ ಆಗುತ್ತಿದೆ. ಹಾಗಿದ್ದರೆ ಪ್ರೊ, ಕೃಷ್ಣೇಗೌಡರು ಆ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 

'ಡಾ ರಾಜ್‌ಕುಮಾರ್ ಅವರು ಯಾರಿಗೂ ಹಣದ ಸಹಾಯ ಮಾಡಲಿಲ್ಲ. ಅವರ ಕೊನೆಯಗಾಲದಲ್ಲಿ ಎಷ್ಟೊಂದು ದುಡ್ಡಿತ್ತು ಅವರ ಬಳಿಯಲ್ಲಿ. ಆದರೆ ಅಣ್ಣಾವ್ರು ಯಾರಿಗೂ ದಾನ-ಧರ್ಮ ಮಾಡಲೇ ಇಲ್ಲ. ಸಂಘ-ಸಂಸ್ಥೆಗಳಿಗೆ, ಅನಾಥಾಶ್ರಮಗಳಿಗೂ ಹಣ ನೀಡಲಿಲ್ಲ' ಎಂಬ ಆರೋಪ ಡಾ ರಾಜ್‌ಕುಮಾರ್ ಅವರ ಮೇಲೆ ಇದೆ. ಆ ಬಗ್ಗೆ ಪ್ರೊ. ಕೃಷ್ಣೇಗೌಡರು 'ಡಾ ರಾಜ್‌ಕುಮಾರ್ ಅವರು ಕೆಲವು ದಾನಧರ್ಮ ಮಾಡಿರಬಹುದು, ಅದನ್ನು ಹೇಳಿಕೊಂಡಿರಲಿಕ್ಕಿಲ್ಲ. ಸಹಾಯ ತೆಗೆದುಕೊಂಡಿರುವವರೂ ಅದನ್ನು ಹೇಳಿರಲಿಕ್ಕಿಲ್ಲ' ಎಂದಿದ್ದಾರೆ. 

Tap to resize

Latest Videos

undefined

ಮನೆಗೆ ಚಿರು ಹೆಸರಿಲ್ಲ ಎಂದಿದ್ದ ಅಭಿಮಾನಿಗಳೇ 'ದೇವತೆ ನಮ್ಮ ಕರುನಾಡ ಅತ್ತಿಗೆ' ಅಂದಿದ್ಯಾಕೆ?

ಪ್ರೊ. ಕೃಷ್ಣೇಗೌಡರು ಅದಕ್ಕಿಂತ ಹೆಚ್ಚಾಗಿ ಇನ್ನೂ ಏನೋ ಹೇಳಿದ್ದಾರೆ. 'ನನ್ನ ಪ್ರಕಾರ ಇದು ಚರ್ಚೆಯ ಸಂಗತಿಯೇ ಅಲ್ಲ ಅಂತ ನನಗನ್ನಿಸುತ್ತೆ. ಟೀಚರ್ ಆದವನು ತುಂಬಾ ಚೆನ್ನಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಅದೇ ಸಮಾಜಕ್ಕೆ ದೊಡ್ಡ ಕೊಡುಗೆ. ಒಬ್ಬ ಸಂನ್ಯಾಸಿಯ ಸನ್ಯಾಸತ್ವ ಶುದ್ಧವಾಗಿರಬೇಕು. ಒಬ್ಬ ಸಂಗೀತಗಾರ ಚೆನ್ನಾಗಿ ಹಾಡಬೇಕು. ಒಬ್ಬ ಕಲಾವಿದ ತನ್ನ ಕಲೆಯನ್ನು ಬಹಳ ಚೆನ್ನಾಗಿ ಪ್ರದರ್ಶಿಸಬೇಕು. ಅಷ್ಟು ಬಿಟ್ರೆ ಉಳಿದದ್ದೆಲ್ಲಾ ಅಪ್ರಸ್ತುತ..' 

ಡಾ ರಾಜ್‌ಕುಮಾರ್ ಅವರು ಅವರು ತಮ್ಮ ಕಲೆಯನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ಕಲಾಜೀವನವನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಂಡಿದ್ದಾರೆ. ಮತ್ತೊಬ್ಬರಿಗೆ ಅದು ಸಾಧ್ಯವಿಲ್ಲ ಎಂಬಷ್ಟು ಸಮರ್ಪಣಾ ಭಾವದಿಂದ ತಮ್ಮ ನಟನಾವೃತ್ತಿಯನ್ನು ಮಾಡಿ ಮುಗಿಸಿದ್ದಾರೆ. ಅದರಿಂದಾಚೆ ಚರ್ಚೆಯ ಅಗತ್ಯವಿದೆಯೇ?' ಎಂದಿದ್ದಾರೆ ಪ್ರೊ. ಕೃಷ್ಣೇಗೌಡರು. 

ನಂದೇನಿದ್ರೂ ಸಿನಿಮಾದಲ್ಲಿ ತೋರಿಸ್ತೀನಿ ಸೆಟ್ಟಲ್ಲಲ್ಲ! ಕೋಳಿ ಜಗಳದಲ್ಲಿ ಈ ಮಾತು ಹೇಳಿದ್ಯಾರು?

ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಲವು ಪರ ಹಾಗೂ ಕೆಲವು ವಿರೋಧ ಕಾಮೆಂಟ್‌ಗಳು ಸಹಜವಾಗಿಯೇ ಮೂಡಿ ಬಂದಿವೆ. ಕೃಷ್ಣೇಗೌಡರ ಮಾತಿಗೆ ಕೆಲವರು 'ಹೌದು, ಅವರವರು ತಮ್ಮತಮ್ಮ ಕೆಲಸ ಮಾಡಿಕೊಂಡಿದ್ದರೆ ಸಾಕು. ಹಾಗಿದ್ದರೆ ರತನ್‌ ಟಾಟಾ ಅಂಥವರು, ಸುಧಾಮೂರ್ತಿ ಅಂಥವರು ಸಮಾಜಕ್ಕೆ ಯಾಕೆ ಬಹಳಷ್ಟು ಬಾರಿ ಕೊಡುತ್ತಲೇ ಇರಬೇಕು. ಅತಿವೃಷ್ಟಿ, ಅನಾವೃಷ್ಟಿ ಇರಲಿ, ಬರಗಾಲ ಹಾಗೂ ಕೋವಿಡ್ ಸಂಕಷ್ಟವೇ ಇರಲಿ, ಸುಧಾಮೂರ್ತಿಯಂತಹ ಹಲವರು ಸಮಾಜಕ್ಕೆ ಧನಸಹಾಯ ಮಾಡುತ್ತಲೇ ಇರುತ್ತಾರಲ್ಲ! ಅದು ಅನಗತ್ಯ ಅಂತೀರಾ?' ಎಂದು ಪ್ರಶ್ನಿಸಿದ್ದಾರೆ. 

ಇನ್ನೂ ಕೆಲವರು 'ವಿಷಯ ಅದಲ್ಲ. ಡಾ ರಾಜ್‌ಕುಮಾರ್ ಅವರೊಬ್ಬರು ಮೇರು ನಟರು ಹಾಗೂ ಕಲಾತಪಸ್ವಿ. ಅವರು ತಮ್ಮದೇ ಸಿನಿಮಾದ ನಿರ್ಮಾಪಕರು ಆಗಿರಲಿಲ್ಲ, ತಮ್ಮ ನಿರ್ಮಾಣ ಸಂಸ್ಥೆ ನಡೆಸುತ್ತಿರಲಿಲ್ಲ. ಹೀಗಾಗಿ ನಟಿಸುವುದನ್ನು ಬಿಟ್ಟರೆ ಅಣ್ಣಾವ್ರು ತಮ್ಮದೇ ಸಿನಿಮಾದ ಲಾಭ-ನಷ್ಟಗಳ ಬಗ್ಗೆ ಕೂಡ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅದನ್ನೆಲ್ಲಾ ನೋಡಿಕೊಳ್ಳುತ್ತಿದ್ದದ್ದು (Parvathamma Rajkumar) ಅವರ ಶ್ರೀಮತಿ ಪಾರ್ವತಮ್ಮನವರು. ಹೀಗಾಗಿ ಡಾ ರಾಜ್‌ಕುಮಾರ್ ಮನೆಯಿಂದ ಯಾರಿಗಾದರೂ ಏನಾದರೂ ಹಣ ಅಥವಾ ಬೇರೆ ಸಹಾಯ ಆಗಿದ್ದರೆ ಅದು ಅಣ್ಣಾವ್ರ ಕಡೆಯಿಂದಲೇ ಅಂದುಕೊಳ್ಳಬೇಕು' ಎಂದಿದ್ದಾರೆ. ಜೊತೆಗೆ, 'ಡಾ ರಾಜ್‌ ಬಗ್ಗೆ ಎನೇ ಆರೋಪಗಳಿದ್ದರೂ ಅವೆಲ್ಲವೂ ಸತ್ಯಕ್ಕೆ ದೂರವಾದವುಗಳು' ಎಂದಿದ್ದಾರೆ ಕೆಲವರು. 

ಎಲ್ಲ ಗಂಡಸರ ಕಥೆ ಏನು ಅಂತ ರವೀನಾಗೆ ಹೇಳಿದ್ರು ಶ್ರೀದೇವಿ; ಜಗತ್ತೇ ಗಪ್‌ಚುಪ್‌ ಆಗಿತ್ತು! 

ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾ ಅಂದ್ರೇನೇ ಹೀಗೇ.. ಇಲ್ಲಿ ಪ್ರತಿಯೊಂದು ವಿಷಯ ಚರ್ಚೆಗೆ ಬರುತ್ತವೆ. ವಿಭಿನ್ನ ಕಾಮೆಂಟ್‌ಗಳು, ಅನಿಸಿಕೆಗಳು ಹರಿದುಬರುತ್ತವೆ. ಆ ಬಗ್ಗೆ ಯಾರೂ ಕೂಡ ತೀರಾ ಸೀರಿಯಸ್ಸಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ಕಾರಣ, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂ ಅಂದ್ರೆನೇ ಹಾಗೆ! ಇಲ್ಲ ಎಲ್ಲವೂ ಬರುತ್ತವೆ ಇರುತ್ತವೆ ಹಾಗೂ ಹೋಗುತ್ತವೆ. ನಮಗೇನು ಬೇಕೋ ಅದನ್ನು ತೆಗೆದುಕೊಂಡರಾಯ್ತು, ಮಿಕ್ಕಿದ್ದು ಬಿಟ್ಟರಾಯ್ತು! ಏನಂತೀರಾ?

click me!