ರಜನಿಕಾಂತ್‌ ಅಳಿಯನ ವಿರುದ್ಧ ತಿರುಗಿಬಿದ್ದ ನಯನತಾರ; 3 ಸೆಕೆಂಡ್‌ನ ಆ ವಿಡಿಯೋಗೆ 10 ಕೋಟಿ ಡಿಮ್ಯಾಂಡ್‌ ಮಾಡಿದ್ದು ನಿಜವೇ?

By Vaishnavi Chandrashekar  |  First Published Nov 16, 2024, 2:52 PM IST

ನಟ ಧನುಷ್ ವಿರುದ್ಧ ತಿರುಗಿಬಿದ್ದ ನಯನತಾರ. ಸಣ್ಣ ವಿಡಿಯೋಗೂ ರಗಳೆ ಮಾಡಿದ್ದಕ್ಕೆ ಬೇಸರದಿಂದ ಪತ್ರ ಬರೆದ ಲೇಡಿ ಸೂಪರ್ ಸ್ಟಾರ್...


ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರ ಜೀವನದ ಬಗ್ಗೆ netflixನಲ್ಲಿ ಡಾಕ್ಯೂಮೆಂಟರಿ ರಿಲೀಸ್ ಆಗಿದೆ, ಅದುವೇ ನಯನತಾರ:ಬಿಯಾಂಡ್‌ ದಿ ಫೇರಿಟೇಲ್‌ ಎಂದು. ಯಾರ ಸಹಾಯನೂ ಇಲ್ಲದೆ ಇಂಡಸ್ಟ್ರಿಯಲ್ಲಿ ಬೆಳೆದಿರುವ ನಯನತಾರ ಇದೀಗ ತಮ್ಮ ಡಾಕ್ಯೂಮೆಂಟರಿ ನೋಡಿ ಬೇಸರ ಮಾಡಿಕೊಂಡಿದ್ದಾರೆ. ತಮ್ಮ ಡಾಕ್ಯೂಮೆಂಟರಿಯಲ್ಲಿ ನಿರ್ದೇಶಕರು ಬಳಸಿರುವ 3 ಸೆಕೆಂಡ್ ವಿಡಿಯೋಗೆ ಕಾಪಿ ರೈಟ್ಸ್‌ ನೋಟಿಸ್‌ ಕಳುಹಿಸಿ 10 ಕೋಟಿ ಹಣವನ್ನು ನಟ ಧನುಷ್ ಡಿಮ್ಯಾಂಡ್ ಮಾಡಿರುವುದಾಗಿ ರಿವೀಲ್ ಮಾಡಿದ್ದಾರೆ.. 

ಹೌದು! ನಯನತಾರ ಮತ್ತು ವಿಜಯ್ ಸೇತುಪತಿ ನಟಿಸಿರುವ ನಾನು ರೌಡಿ ಧಾನ್ ಸಿನಿಮಾ 2015ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ನಯನತಾರ ಪತಿ ವಿಘ್ನೇಶ್ ಶಿವನ್ ನಿರ್ದೇಶಕ ಹಾಗೂ ರಜನಿಕಾಂತ್ ಅಳಿಯ ಧನುಷ್ ನಿರ್ಮಾಪಕ. ನಯನತಾರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಿದ್ದ ಕಾರಣ ಚಿತ್ರದ ಹಾಡು ಮತ್ತು ಸಣ್ಣ ಪುಟ್ಟ ದೃಶ್ಯಗಳನ್ನು ಬಳಸಿಕೊಳ್ಳಲು ಸುಮಾರು ವರ್ಷಗಳಿಂದ ಲೈಕಾ ಪ್ರೊಡಕ್ಷನ್ ಬಳಿ ಮನವಿ ಮಾಡಿಕೊಂಡಿದ್ದರು. ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ತಮ್ಮ ಬಳಿ ಇದ್ದ BTS videoವನ್ನು ಡಾಕ್ಯೂಮೆಂಟರಿಯಲ್ಲಿ ಸೇರಿಸಲಾಗಿದೆ. ಇದನ್ನು ಗಮನಿಸಿದ ನಿರ್ಮಾಣ ಸಂಸ್ಥೆ ನೋಟಿಸ್ ನೀಡಿದ್ದಾರೆ. 

Tap to resize

Latest Videos

undefined

ಲಕ್ಷ ದುಡಿದು ಎಣಿಸೋಕೆ ಕಷ್ಟ ಪಡ್ತಿದ್ದೆ ಈಗ ಕೋಟಿ ಕೋಟಿ ಬರ್ತಿದೆ; ಹಿಂದಿ ಬಿಗ್ ಬಾಸ್‌ಗೆ ಲಾಯರ್

ನಯನತಾರ ಬಳಸಿರುವುದು 3 ಸೆಕೆಂಡ್ ವಿಡಿಯೋಗೆ 10 ಕೋಟಿ ರೂಪಾಯಿಗಳನ್ನು ಡಿಮ್ಯಾಂಡ್ ಮಾಡಿದ್ದಾರೆ. ಆಡಿಯೋ ಲಾಂಚ್ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ನಿಂತು ಮುಗ್ಧ ಜನರ ಮುಂದೆ ನೀವು ನಿಮ್ಮನ್ನು ಪ್ರತಿನಿಧಿಸಿಕೊಳ್ಳುವ ಅರ್ಧದಷ್ಟು ಆದರೂ ರಿಯಲ್ ಆಗಿದ್ದರೆ ಖುಷಿಯಾಗುತ್ತಿತ್ತು. ನೀವು ಹೇಳಿದಂತೆ ತೋರಿಸಿಕೊಳ್ಳುವಂತೆ ನಡೆದುಕೊಳ್ಳುವವರಲ್ಲ. ಯಾವಾಗ ನಿರ್ಮಾಪಕರು ರಾಜನಾಗಿ ಸೆಟ್‌ನಲ್ಲಿರುವವರ ಫ್ರೀಡಂ ರೈಟ್ಸ್‌ ಕಿತ್ತುಕೊಳ್ಳಲು ಶುರು ಮಾಡಿದ್ದರು? ಸಿನಿಮಾ ರಿಲೀಸ್ ಆಗಿ ಸುಮಾರು 10 ವರ್ಷಗಳ ಕಳೆಯುತ್ತಿದೆ ಆದರೂ ನೀವು ಈ ರೀತಿ ವರ್ತಿಸಿ ಜನರ ಮುಂದೆ ಮಾಸ್ಕ್‌ ಹಾಕಿರುವುದು ಸರಿ ಅಲ್ಲ ಎಂದು ನಯನತಾರ ಬರೆದುಕೊಂಡಿದ್ದಾರೆ. 

'ಕಳಪೆ' ಪಟ್ಟಕ್ಕೆ ಹೆದರಿ ಬಾತ್‌ರೂಮ್‌ನಲ್ಲಿ ಪ್ರಜ್ಞೆ ತಪ್ಪಿದ್ದು ನಾಟಕ; ಚೈತ್ರಾ ಕುಂದಾಪುರ

'ಈ ಜಗತ್ತು ದೊಡ್ಡ ಸ್ಥಳ...ನಿಮಗೆ ಗೊತ್ತಿರುವ ವ್ಯಕ್ತಿಗಳು ಮೇಲಕ್ಕೆ ಬೆಳೆದರೆ ಪರ್ವಾಗಿಲ್ಲ, ಯಾವುದೇ ಬ್ಯಾಗ್ರೌಂಡ್‌ ಇಲ್ಲದೆ ಇಂಡಸ್ಟ್ರಿಯಲ್ಲಿ ಬೆಳೆದರೆ ಅದು ನಾರ್ಮಲ್. ಕೆಲವು ಒಳ್ಳೆ ಸಂಪರ್ಕ ಬೆಳೆಸಿ ಖುಷಿಯಾಗಿದ್ದರೆ ನಿಮಗೆ ಏನು ಆಗಬೇಕಿಲ್ಲ. ನೀವು ಕೆಲವೊಂದು ನಕಲಿ ಸಾಲುಗಳನ್ನು ಕದ್ದು ಅದಕ್ಕೆ ಪಂಚ್‌ಗಳನ್ನು ಸೇರಿಸಿ ಮುಂದಿನ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಹೇಳಬಹುದು ಆದರೆ ಇದನ್ನು ದೇವರ ನೋಡುತ್ತಿದ್ದಾನೆ. ಹೀಗಾಗಿ ಫ್ರೆಂಚ್‌ನಲ್ಲಿ ಒಂದೊಳ್ಳೆ ಪದವಿದೆ 'Schadenfreude' (ಮತ್ತೊಬ್ಬರ ಕಷ್ಟ ನೋವುಗಳನ್ನು ನೋಡಿ ಖುಷಿ ಪಡುವವರು) ಇದು ನಿಮಗೆ ಸೂಕ್ತವಾಗಿದೆ, ಬಹುಷ ಇನ್ನು ಮುಂದೆ ಆದರೂ ನೀವು ಮತ್ತೊಬ್ಬರ ಭಾವನೆಗಳ ಜೊತೆ ಅಟವಾಡುವುದಿಲ್ಲ ಅಂದುಕೊಂಡಿದ್ದೀನಿ' ಎಂದು ನಯನತಾರ ಹೇಳಿದ್ದಾರೆ. 

 

click me!