ಶಾರುಖ್​ ಖಾನ್​ ಹಣವೇ ಕೊಡದಿದ್ರೂ ಬೀದಿ ವ್ಯಾಪಾರಿಗಳು ಮಾಲಾಮಾಲ್​- ಇದು ನಟನ ಕಮಾಲ್​!

By Suchethana D  |  First Published Nov 16, 2024, 2:44 PM IST

 ಶಾರುಖ್​ ಖಾನ್​ ಹಣವೇ ಕೊಡದಿದ್ರೂ ನಟನಿಂದಲೇ  ಬೀದಿ ವ್ಯಾಪಾರಿಗಳು ಮಾಲಾಮಾಲ್​ ಆಗಿದ್ದಾರೆ. ಅದು ಹೇಗೆ ಅಂತೀರಾ? 
 


 ಚಿತ್ರ ತಾರೆಯರ ಮೇಲಿನ ಅಭಿಮಾನ ಎಂದರೆ ಸುಮ್ಮನೇ ಅಲ್ಲ. ಚಿತ್ರ ನಟರನ್ನು ಕಣ್ಣಿಗೆ ಕಾಣುವ ದೇವರು ಎಂದು ಎಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಅವರನ್ನು ನೋಡಲು ಪ್ರಾಣವನ್ನೂ ಪಣಕ್ಕಿಡುವವರೂ ಇದ್ದಾರೆ. ಅವರ ದರ್ಶನ ಭಾಗ್ಯವೊಂದೇ ತಮ್ಮ ಏಳೇಳು ಜನ್ಮದ ಪುಣ್ಯ ಎಂದುಕೊಳ್ಳುವ ಅತಿರೇಕದ ಅಭಿಮಾನಿಗಳಿಗೂ ಕೊರತೆಯೇನಿಲ್ಲ.  ಈಚೆಗಷ್ಟೇ ಇವರ  ಅತಿರೇಕದ ಅಭಿಮಾನಿಯೊಬ್ಬ 95 ದಿನ ನಟನ ದರ್ಶನಕ್ಕೆ ಕಾದು ಕುಳಿತಿದ್ದ.  ಜಾರ್ಖಂಡ್‌ನ ಮೊಹಮ್ಮದ್ ಅನ್ಸಾರಿ ಎಂಬಾತ ಮೂರು ತಿಂಗಳು ಹುಚ್ಚನಂತೆ ಶಾರುಖ್​ ಖಾನ್​ ಮನೆಯ ಎದುರು ಕುಳಿತು ನಟನ ತಪಸ್ಸು ಮಾಡುತ್ತಿದ್ದ.  ಶಾರುಖ್​ ದರ್ಶನಕ್ಕಾಗಿ ಅವರ ಮನೆ ಮನ್ನತ್​ ಎದುರು ಕಾಯುತ್ತಿದ್ದ. ನಾನು ಒಮ್ಮೆ ಶಾರುಖ್​ ಖಾನ್​ರನ್ನು ಭೇಟಿಯಾಗಲೇ ಬೇಕು ಎಂದು ಹಠ ಹಿಡಿದು ಕೂತಿದ್ದ.  ಕೈಯಲ್ಲಿ ಫಲಕ ಹಿಡಿದಿದ್ದು,  ಅದರಲ್ಲಿ ಎಷ್ಟನೇ ದಿನ ಎಂಬುದನ್ನು ದಿನವೂ ಬದಲಿಸುತ್ತಿದ್ದ. ತನ್ನ ಕಂಪ್ಯೂಟರ್ ಸೆಂಟರ್ ಅನ್ನು ಮುಚ್ಚಿ ನಟನ ದರ್ಶನಕ್ಕಾಗಿ ಬಂದು ಕೂತಿದ್ದ. ಕೊನೆಗೂ ಅಭಿಮಾನಿಗಳ ತಪಸ್ಸಿಗೆ ಶಾರುಖ್​ ಒಲಿದು 95 ದಿನಗಳ ಬಳಿಕ ದರ್ಶನ ಕೊಟ್ಟಿದ್ದರು. 

ಇದು ಒಂದೆಡೆಯಾದರೆ, ಶಾರುಖ್​  ಖಾನ್​ ಅವರನ್ನು ನೋಡಲು ಅವರ ಮನ್ನತ್​ಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಗಣ್ಯರು, ಜನರು ಆಗಮಿಸುತ್ತಾರೆ.  ಇಲ್ಲವೇ ಶಾರುಖ್​ ಅವರ ಮನೆಯನ್ನಾದರೂ ಒಮ್ಮೆ ಕಣ್ತುಂಬಿಸಿಕೊಳ್ಳುವ ತವಕದಲ್ಲಿ ಹಲವು ಅಭಿಮಾನಿಗಳು ಇರುತ್ತಾರೆ. ಇದೇ ಕಾರಣಕ್ಕೆ ಅಲ್ಲಿ ಜನಜಂಗುಳಿ ಸಹಜವಾಗಿಯೇ ಇರುತ್ತದೆ. ಶಾರುಖ್​ ಖಾನ್​ ಅವರಿಗೆ ಈ ಜನರಿಂದ ಎಷ್ಟು ಪ್ರಯೋಜನ ಆಗ್ತಿದ್ಯೋ ಗೊತ್ತಿಲ್ಲ. ಆದರೆ ಇಲ್ಲಿ ಬರುವ ಜನರಿಂದ ಮನ್ನತ್​ ಎದುರಿಗಿರುವ ಬೀದಿ ವ್ಯಾಪಾರಿಗಳಂತೂ ಮಾಲಾಮಾಲ್​ ಆಗುತ್ತಿದ್ದಾರೆ. ಇದು ಶಾರುಖ್​ ಮನೆಯ ಎದುರಿನ ಬೀದಿ ವ್ಯಾಪಾರಿಗಳದ್ದಷ್ಟೇ ಮಾತಲ್ಲ, ಎಲ್ಲಾ ಚಿತ್ರತಾರೆಯರ ಮನೆ ಎದುರು ಇರುವ ವ್ಯಾಪಾರಿಗಳ ಮಾತು ಎಂದರೂ ತಪ್ಪಾಗಲಿಕ್ಕಿಲ್ಲ.

Tap to resize

Latest Videos

undefined

ಸಲ್ಮಾನ್​ ಬಳಿಕ ಶಾರುಖ್​ಗೂ ಜೀವ ಬೆದರಿಕೆ: ಶಾಕಿಂಗ್​ ನ್ಯೂಸ್​ಗೆ ನೆಟ್ಟಿಗರು ತಮಾಷೆ ಮಾಡ್ತಿರೋದ್ಯಾಕೆ ನೋಡಿ!

ಸಹಜವಾಗಿ ಶಾರುಖ್​ ಅವರನ್ನು ನೋಡಲು ಬರುವ ಅಭಿಮಾನಿಗಳು, ಇಲ್ಲವೇ ಅವರ ಬಂಗಲೆ ಮನ್ನತ್​ ಅನ್ನು ನೋಡಲು ಬರುವವರು ಬೀದಿ ವ್ಯಾಪಾರಿಗಳಿಂದ ಏನಾದರೂ ಕೊಳ್ಳುತ್ತಾರೆ. ಇದು ಸಹಜವಾಗಿ ಇಲ್ಲಿಯ ವ್ಯಾಪಾರಿಗಳಿಗೆ ಲಾಭ ತಂದುಕೊಡುತ್ತಿದೆ. ಈ ಕುರಿತು ಇನ್​ಸ್ಟಾಬಾಲಿವುಡ್​ ಬೀದಿ ವ್ಯಾಪಾರಿಗಳ ಸಂದರ್ಶನ ಮಾಡಿದ್ದು, ಅದರಲ್ಲಿ ಬೀದಿ ವ್ಯಾಪಾರಿಗಳು ಶಾರುಖ್​ ಅವರಿಂದ ತಮಗೆ ಲಾಭ ಆಗುತ್ತಿರುವ ಬಗ್ಗೆ ತಿಳಿಸಿದ್ದಾರೆ. ಇವರಲ್ಲಿ ಕೆಲವರು ಶಾರುಖ್​ ಖಾನ್​ ಅವರ ಮುಖವನ್ನೂ ನೋಡಿಲ್ಲ, ಅದು ಟೈಟ್​ ಸೆಕ್ಯುರಿಟಿ ಇರುವಾಗ ಮುಖ ದರ್ಶನ ಅಷ್ಟು ಸುಲಭವೂ ಅಲ್ಲ ಬಿಡಿ. ಆದರೂ ಶಾರುಖ್​ ಅವರಿಂದಾಗಿ ಬೀದಿ ವ್ಯಾಪಾರಿಗಳು ದಿನನಿತ್ಯ ಸಕತ್​ ಕಮಾಯಿ ಮಾಡುತ್ತಿರುವುದು ಅವರ ಮಾತುಗಳಿಂದ ಕೇಳಿ ಬರುತ್ತಿದೆ. 

ಸದ್ಯ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ನಿಂದ ಶಾರುಖ್​ ಅವರಿಗೂ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ, ಅವರ ಸೆಕ್ಯುರಿಟಿ ಇನ್ನಷ್ಟು ಟೈಟ್​ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅದಾದ ಬಳಿಕ ಅವರ  ಭದ್ರತೆಯನ್ನು ಹೆಚ್ಚಿಸಲಾಗಿತ್ತು.  ದಿನದ 24 ಗಂಟೆ ಆರು ಶಸ್ತ್ರಸಜ್ಜಿತ ಸಿಬ್ಬಂದಿ ಅವರ ಜೊತೆ ಇರುತ್ತಾರೆ. ಆದರೆ ಇದೀಗ ಸಲ್ಮಾನ್​ ಖಾನ್​ ಗಲಾಟೆಯ ಬಳಿಕ ಶಾರುಖ್​ ಅವರಿಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. ಮುಂಬೈನ ಬಾಂದ್ರಾ ಪೊಲೀಸರಿಗೆ  ಕರೆ ಮಾಡಿರುವ ವ್ಯಕ್ತಿ ಐವತ್ತು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ.    ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನತ್ತಿ ಹೋಗಿರುವ ಪೊಲೀಸರಿಗೆ ಛತ್ತೀಸ್‌ಗಢದ  ರಾಯಪುರದ ಫೈಜಾನ್ ಖಾನ್ ಎಂಬಾತನ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ  ಕರೆ ಬಂದಿರುವುದು ತಿಳಿದಿದೆ.  ಇದಾಗಲೇ ಆತನನ್ನು ಬಂಧಿಸಿ  ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ತಾನು ವಕೀಲ ಎಂದು ಹೇಳಿಕೊಂಡಿರುವ ಆತ, ನನ್ನ ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ದೂರು ಕೂಡ ದಾಖಲಿಸಿದ್ದೇನೆ, ಈಗ  ಶಾರುಖ್ ಖಾನ್‌ ಅವರಿಗೆ ಅದೇ ಫೋನ್​ನಿಂದ ಯಾರೋ ಬೆದರಿಕೆ ಹಾಕುತ್ತಿದ್ದಾರೆ ಎಂದಿದ್ದಾನೆ.
 

ಭಾರತದ ನಂ.1 ಶ್ರೀಮಂತ ಯುಟ್ಯೂಬರ್​ ಮಹಿಳೆ! ಖಿನ್ನತೆಗೆ ಜಾರಿದ್ದಾಕೆ ಅಡುಗೆ ಮಾಡಿ ಕೋಟ್ಯಧಿಪತಿಯಾದರು

click me!