ಜಪಾನಿಗರ ಹೃದಯ ಗೆದ್ದಿದೆ ಬೊಂಬೆ ಹೇಳುತೈತೆ...ಮತ್ತೆ ಹೇಳುತೈತೆ... ಹಾಡು

Jul 9, 2018, 3:23 PM IST

ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ... ಮತ್ತೆ ಹೇಳುತೈತೆ... ಹಾಡನ್ನು ಯಾರು ತಾನೆ ಮರೆಯಲು ಸಾಧ್ಯ? ಎಲ್ಲರ ಬಾಯಲ್ಲಿ ಗುನುಗುನುಗಿಸುವ ಹಾಡಿದು. ಕೇವಲ ಕನ್ನಡಿಗರ ಮನ ಮಾತ್ರ ಗೆದ್ದಿಲ್ಲ. ವಿದೇಶದಲ್ಲೂ ಈ ಹಾಡಿನ ಗಂಧ ಪಸರಿಸಿದೆ. ಜಪಾನ್ ಹಬ್ಬ-2018 ರಲ್ಲಿ ಬೊಂಬೆ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.