ಪ್ರಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಪುತ್ರಿ ಭವತಾರಿಣಿ ವಿಧಿವಶ!

By Santosh NaikFirst Published Jan 25, 2024, 9:07 PM IST
Highlights

ಇಳಯರಾಜ ಅವರ ಪುತ್ರಿ ಮತ್ತು ಹಿನ್ನೆಲೆ ಗಾಯಕಿ ಭವತಾರಿಣಿ ಜನವರಿ 25 ರಂದು ನಿಧನರಾದರು. ವರದಿಗಳ ಪ್ರಕಾರ, ಭವತಾರಿಣಿ ಕಳೆದ ಕೆಲವು ತಿಂಗಳುಗಳಿಂದ ಲಿವರ್ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು.
 

ಚೆನ್ನೈ (ಜ.25): ಪ್ರಖ್ಯಾತ ಸಂಗೀತ ನಿರ್ದೇಶಕ ಹಾಗೂ ರಾಜ್ಯಸಭೆಯ ಬಿಜೆಪಿ ಸಂಸದ ಇಳಯರಾಜಾ ಅವರ ಪುತ್ರಿ ಭವತಾರಿಣಿ  ಜನವರಿ 25 ರಂದು ನಿಧನರಾದರು. ವರದಿಗಳ ಪ್ರಕಾರ, ಅವರು ಲಿವರ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಶ್ರೀಲಂಕಾಕ್ಕೆ ತೆರಳಿದ್ದರು. ಆದರೆ, ಶ್ರೀಲಂಕಾದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಇದೆ. ಆಕೆಯ ಪಾರ್ಥಿವ ಶರೀರವನ್ನು ಜನವರಿ 26 ರಂದು ಚೆನ್ನೈಗೆ ತರಲಾಗುತ್ತಿದೆ. ಅಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಅವರು ಪತಿ ಬಾಲಾಜಿ ಅವರನ್ನು ಅಗಲಿದ್ದಾರೆ. ಭವತಾರಿಣಿಗೆ 47 ವರ್ಷ ವಯಸ್ಸಾಗಿತ್ತು. ಇಳಯರಾಜಾ ಅವರ ಪುತ್ರಿಯಾಗಿರುವ ಭವತಾರಿಣಿ, ಕಾರ್ತಿಕ್ ರಾಜಾ ಹಾಗೂ ಸಂಗೀತ ನಿರ್ದೇಶಕ ಯುವನ್‌ ಶಂಕರ್‌ ರಾಜಾ ಅವರ ಸಹೋದರಿಯಾಗಿದ್ದರು. ಅವರು 'ಭಾರತಿ' ಚಿತ್ರದ 'ಮಾಯಿಲ್ ಪೋಲ ಪೊನ್ನು ಒನ್ನು' ತಮಿಳು ಹಾಡಿಗಾಗಿ ಅತ್ಯುತ್ತಮ ಹಿನ್ನಲೆ ಗಾಯಕಿ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದರು.

ಇಳಯರಾಜ ಅವರ ಪುತ್ರಿ ಭವತಾರಿಣಿ ಹಿನ್ನೆಲೆ ಗಾಯಕಿ ಮತ್ತು ಸಂಗೀತ ಸಂಯೋಜಕಿಯೂ ಆಗಿದ್ದರು. ಕಳೆದ ಆರು ತಿಂಗಳಿಂದ ಲಿವರ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಭವತಾರಣಿ ಕೊನೆಯುಸಿರೆಳೆದಿದ್ದಾರೆ. 

ಭವತಾರಿಣಿ ‘ರಾಸಯ್ಯ’ ಚಿತ್ರದ ಮೂಲಕ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು ತಮ್ಮ ತಂದೆ ಇಳಯರಾಜ ಮತ್ತು ಸಹೋದರರಾದ ಕಾರ್ತಿಕ್ ರಾಜಾ ಮತ್ತು ಯುವನ್ ಶಂಕರ್ ರಾಜಾಅವರ ಚಿತ್ರಗಳಿಗೆ ಹಾಡುಗಳನ್ನು ಹಾಡುತ್ತಿದ್ದರು. ಸಂಗೀತ ಸಂಯೋಜಕರಾದ ದೇವಾ ಮತ್ತು ಸಿರ್ಪಿ ಅವರಿಗೂ ಅವರಿಗೂ ಹಾಡುಗಳನ್ನು ಹಾಡಿದ್ದರು.

Latest Videos

Rajya Sabha Nomination; ದಕ್ಷಿಣ ಭಾರತೀಯರಿಗೆ ಮೋದಿ ಭರ್ಜರಿ ಗಿಫ್ಟ್

2002 ರಲ್ಲಿ, ಅವರು ರೇವತಿ ನಿರ್ದೇಶನದ 'ಮಿತ್ರ್, ಮೈ ಫ್ರೆಂಡ್' ಗೆ ಸಂಗೀತ ನಿರ್ದೇಶಕರಾಗಿದ್ದರು. ಆ ನಂತರ ಅವರು 'ಫಿರ್ ಮಿಲೇಂಗೆ' ಮತ್ತು ಕೆಲವೊಂದು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಭವತಾರಿಣಿ ಅವರ ಕೊನೆಯ ಮ್ಯೂಸಿಕ್ ಆಲ್ಬಂ ಮಲಯಾಳಂ ಚಿತ್ರ 'ಮಾಯಾನದಿ' ಆಗಿತ್ತು. ಅವರು ತಮಿಳು ಚಲನಚಿತ್ರಗಳಾದ 'ಕಾದಲುಕ್ಕು ಮರಿಯದೈ', 'ಭಾರತಿ', 'ಅಳಗಿ', 'ಫ್ರೆಂಡ್ಸ್', 'ಪಾ', 'ಮಂಕಥಾ' ಮತ್ತು 'ಅನೇಗನ್' ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.

ಮೋದಿಯನ್ನು ಅಂಬೇಡ್ಕರ್ ಗೆ ಹೋಲಿಸಿ ಸಂಕಷ್ಟಕ್ಕೆ ಸಿಲುಕಿದ ಇಳಯರಾಜ; ಪರ-ವಿರೋಧ ಚರ್ಚೆ

click me!