
ನಟರಾದ ರಮೇಶ್ ಅರವಿಂದ್ ಹಾಗೂ ಗಣೇಶ್ ಅವರು ಮತ್ತೆ ಜತೆಯಾಗಿದ್ದಾರೆ. ಈ ಇಬ್ಬರು ತೆರೆ ಮೇಲೆ ಜತೆಯಾಗಿದ್ದು, ಇವರ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇನ್‍ಸ್ಪೆಕ್ಟರ್ ವಿಕ್ರಂ’, ‘ಮಾನ್ಸೂನ್ ರಾಗ’, ‘ರಂಗನಾಯಕ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ವಿಖ್ಯಾತ್, ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ರಮೇಶ್ ಮತ್ತು ಗಣೇಶ್ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರವು ಯುದ್ಧ, ಪ್ರೀತಿ ಮತ್ತು ಸ್ನೇಹದ ಹಿನ್ನೆಲೆಯಲ್ಲಿ ಮೂಡಿ ಬರಲಿದೆ ಎಂಬುದು ಟೀಸರ್ ನೋಡಿದವರು ಮಾತನಾಡುತ್ತಿದ್ದಾರೆ.
ಮುಹೂರ್ತ ಮತ್ತು ಟೀಸರ್ ಬಿಡುಗಡೆ ನಂತರ ಮಾತನಾಡಿದ ರಮೇಶ್, ‘ವಿಖ್ಯಾತ್ ಪರಿಚಯ ಆಗಿದ್ದು ಒಂಬತ್ತು ವರ್ಷಗಳ ಹಿಂದೆ. ‘ಪುಷ್ಪಕ ವಿಮಾನ’ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ ಇವನಿಗೆ ಇರುವ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್‌ನಲ್ಲಿ ಆ ಸೂಕ್ಷ್ಮತೆಯನ್ನು ಗಮನಿಸಬಹುದು. ಇದು ನಿಮ್ಮ ಮೊದಲ ಪಯಣ. ಸತ್ಯ ಮತ್ತು ವಿಖ್ಯಾತ್ ಇಬ್ಬರಲ್ಲೂ ಬಹಳ ಉತ್ಸಾಹವಿದೆ’ ಎಂದರು.
ಬಹುಭಾಷೆಯಲ್ಲಿ ತನಿಶಾ ಕುಪ್ಪಂಡ ನಿರ್ಮಾಣದ ಕೋಣ ಟೀಸರ್ ಬಂತು: ಚಾರ್ಲಿ ಚಾಪ್ಲಿನ್ ಆದ ಕೋಮಲ್
ಗಣೇಶ್ ಮಾತನಾಡಿ, ‘ಈ ಟೀಸರ್ ನೋಡಿದರೆ ಬೇರೆ ರೀತಿ ಫೀಲ್ ಇದೆ. ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ ಇಲ್ಲಿದೆ. ಇದರ ನೂರರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ದೃಶ್ಯ ಒಂದು ಹೊಸ ಅನುಭವ ಕೊಡುತ್ತದೆ’ ಎಂದರು. ಸತ್ಯ ರಾಯಲ ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ, ನವೀನ್ ಕುಮಾರ್ ಕ್ಯಾಮೆರಾ ಚಿತ್ರಕ್ಕಿದೆ. ಗೌರಿ-ಗಣೇಶನ ಹಬ್ಬದ ಪ್ರಯುಕ್ತ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ಅಂದಹಾಗೆ ಈ ಹಿಂದೆ ರಮೇಶ್ ಅರವಿಂದ್ ಅವರು, ಗಣೇಶ್ ನಟನೆಯ ‘ಸುಂದರಾಂಗ ಜಾಣ’ ಚಿತ್ರವನ್ನು ನಿರ್ದೇಶಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.