ಕೋಮಲ್ ನಟನೆಯ ‘ಕೋಣ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇದು ತನಿಶಾ ಕುಪ್ಪಂಡ ನಿರ್ಮಾಣದ ಮೊದಲ ಚಿತ್ರ. ಹರಿಕೃಷ್ಣ ಎಸ್ ನಿರ್ದೇಶನದ ಈ ಚಿತ್ರದ್ದು ಇದೊಂದು ಡಾರ್ಕ್ ಹ್ಯೂಮರ್ ಕತೆ. ಕೋಮಲ್, ‘ವಿಶೇಷವಾದ ಕತೆಯನ್ನು ಒಳಗೊಂಡ ಸಿನಿಮಾ ಇದು.
ಕೋಮಲ್ ನಟನೆಯ ‘ಕೋಣ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇದು ತನಿಶಾ ಕುಪ್ಪಂಡ ನಿರ್ಮಾಣದ ಮೊದಲ ಚಿತ್ರ. ಹರಿಕೃಷ್ಣ ಎಸ್ ನಿರ್ದೇಶನದ ಈ ಚಿತ್ರದ್ದು ಇದೊಂದು ಡಾರ್ಕ್ ಹ್ಯೂಮರ್ ಕತೆ. ಕೋಮಲ್, ‘ವಿಶೇಷವಾದ ಕತೆಯನ್ನು ಒಳಗೊಂಡ ಸಿನಿಮಾ ಇದು. ನನ್ನ ಪಾತ್ರ ಒಂದು ರೀತಿಯಲ್ಲಿ ಚಾರ್ಲಿ ಚಾಪ್ಲಿನ್ ರೀತಿ. ಅಂದರೆ ತಾನು ಕಷ್ಟದಲ್ಲಿ ಸಿಕ್ಕಿಕೊಂಡರೂ ಜನರನ್ನು ನಗಿಸುವ ಚಾಪ್ಲಿನ್ ಅವರಂತೆ ನನ್ನ ಪಾತ್ರ ಸಾಗುತ್ತದೆ. ಕೋಣ, ಭವಿಷ್ಯ ಹೇಳುವ ರೋಬೋ, ಶಾಸ್ತ್ರ, ನಂಬಿಕೆ, ಮೂಢನಂಬಿಕೆ ಇತ್ಯಾದಿಗಳ ಸುತ್ತ ಸಿನಿಮಾ ಸಾಗುತ್ತದೆ’ ಎಂದರು.
ಹರಿಕೃಷ್ಣ ಎಸ್, ‘ಈಗ ಬಂದಿರುವ ಟೀಸರ್ ನಮ್ಮ ಚಿತ್ರದ ಕ್ವಾಲಿಟಿ ಹೇಗಿರುತ್ತದೆ ಅಂತ ಹೇಳುತ್ತದೆ. ಹೊಸ ರೀತಿಯಲ್ಲಿ ಕೋಮಲ್ ಅವರನ್ನು ನೋಡಬಹುದು. ಕತೆ, ಮೇಕಿಂಗ್ ಕಾರಣಕ್ಕೆ ಈ ಚಿತ್ರವನ್ನು ಬಹುಭಾಷೆಯಲ್ಲಿ ನಿರ್ಮಿಸುತ್ತಿದ್ದೇವೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ದೀಪಾವಳಿ ಹಬ್ಬದಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ’ ಎಂದರು. ಶಶಾಂಕ್ ಶೇಷಗಿರಿ ಸಂಗೀತ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಇದೆ.
ಚಿತ್ರೀಕರಣ ಮುಗಿಸಿದ ಯಲಾಕುನ್ನಿ: ಯಲಾಕುನ್ನಿ ಈ ಡೈಲಾಗ್ ಅನ್ನು ಕನ್ನಡ ಚಿತ್ರಪ್ರೇಮಿಗಳು ಅದು ಹೇಗೆ ಮರೆಯಲು ಸಾಧ್ಯ ಹೇಳಿ. ದಿವಂಗತ ವಜ್ರಮುನಿ ಅವರ ಫೇಮಸ್ ಡೈಲಾಗ್ ಇದು. ಈ ಡೈಲಾಗ್ ಅನ್ನೇ ಸಿನಿಮಾ ಶೀರ್ಷಿಕೆಯಾಗಿಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಮುಹೂರ್ತ ಮಾಡಿ ಸದ್ದು ಮಾಡಿತ್ತು ‘ಯಲಾಕುನ್ನಿ’ ಚಿತ್ರತಂಡ. ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್,ಸಹನ ಮೂರ್ತಿ ನಿರ್ಮಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನ ಗೆದ್ದಿರುವ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಹೊಸ ಪ್ರತಿಭೆ ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಅತ್ಯುತ್ತಮ ಕಲೆಕ್ಷನ್ ದಾಖಲಿಸಿದ ದಳಪತಿ ವಿಜಯ್ ನಟನೆಯ 'ಗೋಟ್': 100 ಕೋಟಿ ಕಲೆಕ್ಷನ್
ಸದ್ಯ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಳಿಸಿರುವ ಯಲಾಕುನ್ನಿ ಚಿತ್ರಕ್ಕೆ ಚಿತ್ರೀಕರಣ ನಂತರದ ಚಟುವಟಿಕೆಗಳು(ಪೋಸ್ಟ್ ಪ್ರೊಡಕ್ಷನ್) ಬಿರುಸಿನಿಂದ ಸಾಗಿದೆ.ಸದ್ಯದಲ್ಲೇ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡಲು ಚಿತ್ರಮಂದಿರಗಳಿಗೆ ಯಲಾಕುನ್ನಿ ಚಿತ್ರ ಬರಲಿದೆ. ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೆದಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗಿತ್ತು. ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ವಿಶೇಷ ವಾಗಿ ವಜ್ರಮುನಿ ಯವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ.ಮಯೂರ್ ಪಟೇಲ್ ಖಳ ನಾಯಕನಾಗಿ ನಟಿಸಿದ್ದಾರೆ.