ಅತ್ಯುತ್ತಮ ಕಲೆಕ್ಷನ್‌ ದಾಖಲಿಸಿದ ದಳಪತಿ ವಿಜಯ್‌ ನಟನೆಯ 'ಗೋಟ್‌': 100 ಕೋಟಿ ಕಲೆಕ್ಷನ್‌

By Kannadaprabha News  |  First Published Sep 7, 2024, 5:22 PM IST

ಮೊದಲ ಸ್ಥಾನದಲ್ಲಿ ಕಳೆದ ವರ್ಷ ಬಿಡುಗಡೆಯಾದ ವಿಜಯ್‌ ಅವರದೇ ‘ಲಿಯೋ’ ಸಿನಿಮಾವಿದೆ. ರಾಜಕೀಯದಲ್ಲಿ ಮುಂದಿನ ಭವಿಷ್ಯ ಕಂಡುಕೊಳ್ಳಲು ಹೊರಟಿರುವ ವಿಜಯ್‌ ಅವರ ವೃತ್ತಿ ಬದುಕಿನ ಕೊನೆಯ ಸಿನಿಮಾವಿದು. 
 


ದಳಪತಿ ವಿಜಯ್‌ ನಟನೆಯ ‘ಗೋಟ್‌’ ಸಿನಿಮಾಕ್ಕೆ ವಿಶ್ವಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಮೊದಲ ದಿನವೇ ದಾಖಲೆಯ 100 ಕೋಟಿ ರು. ಕಲೆಕ್ಷನ್‌ನತ್ತ ಮುನ್ನುಗ್ಗಿದೆ. ತಜ್ಞರ ಪ್ರಕಾರ ವಿಶ್ವಾದ್ಯಂತ ಮೊದಲ ದಿನ ಈ ಸಿನಿಮಾದ ಒಟ್ಟು ಕಲೆಕ್ಷನ್‌ 98 ಕೋಟಿ ರು. ಇತ್ತೀಚಿನ ವರ್ಷಗಳಲ್ಲಿ ಕಾಲಿವುಡ್‌ನಲ್ಲಿ ಮೊದಲ ದಿನವೇ ಭಾರೀ ಮೊತ್ತದ ಕಲೆಕ್ಷನ್‌ ಮಾಡಿರುವ ಎರಡನೇ ತಮಿಳು ಸಿನಿಮಾವಾಗಿ ‘ಗೋಟ್‌’ ಗುರುತಿಸಿಕೊಂಡಿದೆ. 

ಮೊದಲ ಸ್ಥಾನದಲ್ಲಿ ಕಳೆದ ವರ್ಷ ಬಿಡುಗಡೆಯಾದ ವಿಜಯ್‌ ಅವರದೇ ‘ಲಿಯೋ’ ಸಿನಿಮಾವಿದೆ. ರಾಜಕೀಯದಲ್ಲಿ ಮುಂದಿನ ಭವಿಷ್ಯ ಕಂಡುಕೊಳ್ಳಲು ಹೊರಟಿರುವ ವಿಜಯ್‌ ಅವರ ವೃತ್ತಿ ಬದುಕಿನ ಕೊನೆಯ ಸಿನಿಮಾವಿದು. ಹೀಗಾಗಿ ವಿಶ್ವಾದ್ಯಂತದ ಬಹುದೊಡ್ಡ ಸಂಖ್ಯೆಯಲ್ಲಿರುವ ವಿಜಯ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ವೆಂಕಟ್‌ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ವಿಜಯ್‌ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. 

Tap to resize

Latest Videos

ಪ್ರಭುದೇವ, ಪ್ರಶಾಂತ್‌, ಸ್ನೇಹಾ ಮೊದಲಾದವರು ನಟಿಸಿದ್ದಾರೆ. ಎಜಿಎಸ್‌ ಎಂಟರ್‌ಟೈನ್‌ಮೆಂಟ್‌ ಈ ಬಹುಕೋಟಿ ವೆಚ್ಚದ ಅದ್ದೂರಿ ಸಿನಿಮಾವನ್ನು ನಿರ್ಮಾಣ ಮಾಡಿದೆ. ಎ ಆರ್ ರೆಹಮಾನ್ ಸಂಗೀತ ನಿರ್ದೇಶನವಿದೆ.  ಈ ಸೈನ್ಸ್ ಫಿಕ್ಷನ್​​ ಆ್ಯಕ್ಷನ್​ ಸಿನಿಮಾ ತೆರೆಕಂಡ ಮೊದಲ ದಿನವೇ ಜಾಗತಿಕವಾಗಿ 100 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಭಾರತದಲ್ಲಿ ಈ ಚಿತ್ರದ ಕಲೆಕ್ಷನ್​​​ 44 ಕೋಟಿ ರೂ. ಆಗಿದೆ.  ‘GOAT’ ಚಿತ್ರಕ್ಕೆ ಸದ್ಯ ಎಲ್ಲ ಕಡೆಗಳಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. 

ಟೈಮ್‌ ಲೂಪ್‌ ಕಥೆಯನ್ನು ಸರಳವಾಗಿ ಹೇಳುವ ಶಾಲಿವಾಹನ ಶಕೆ: ನಿರ್ದೇಶಕ ಗಿರೀಶ್‌

ಹೀಗಾಗಿ ಅಂದುಕೊಂಡ ರೀತಿಯಲ್ಲಿ ಜನರು ಸಿನಿಮಾ ನೋಡುತ್ತಿಲ್ಲ. ‘GOAT’ ಸಿನಿಮಾದ ಮೊದಲ ದಿನದ ಕಲೆಕ್ಷನ್ 43 ಕೋಟಿ ರೂಪಾಯಿ. ತಮಿಳಿನಲ್ಲಿ 38 ಕೋಟಿ ರೂಪಾಯಿ, ಹಿಂದಿಯಲ್ಲಿ 1.7 ಕೋಟಿ ರೂಪಾಯಿ ಹಾಗೂ ತೆಲುಗಿನಿಂದ 3 ಕೋಟಿ ರೂಪಾಯಿ ಗಳಿಕೆ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಭರ್ಜರಿ ಗಳಿಕೆ ಮಾಡಬೇಕಿತ್ತು. ಏಕೆಂದರೆ ಬೆಂಗಳೂರು ಒಂದರಲ್ಲೇ ಈ ಚಿತ್ರಕ್ಕೆ ಬರೋಬ್ಬರಿ 1200 ಶೋಗಳನ್ನು ನೀಡಲಾಗಿತ್ತು. ಚೆನ್ನೈ, ಹೈದರಾಬಾದ್​ನಲ್ಲೂ ಹೆಚ್ಚಿನ ಶೋ ನೀಡಲಾಗಿತ್ತು. ಆದರೆ, ಗಳಿಕೆ ಮಾತ್ರ ಅಂದುಕೊಂಡ ರೀತಿಯಲ್ಲಿ ಆಗಿಲ್ಲ.

click me!