ಟೈಮ್‌ ಲೂಪ್‌ ಕಥೆಯನ್ನು ಸರಳವಾಗಿ ಹೇಳುವ ಶಾಲಿವಾಹನ ಶಕೆ: ನಿರ್ದೇಶಕ ಗಿರೀಶ್‌

By Kannadaprabha News  |  First Published Sep 7, 2024, 5:12 PM IST

‘ಟೈಮ್‌ ಲೂಪ್‌ ಚಿತ್ರಗಳು ಸಿಟಿಯ ಜಾಣರಿಗೆ ಮಾತ್ರ ಎಂಬ ಪೂರ್ವಾಗ್ರಹ ನಮ್ಮಲ್ಲಿದೆ. ಅದನ್ನು ಅಳಿಸುವ ಪ್ರಯತ್ನ ಚಿತ್ರದಲ್ಲಾಗಿದೆ. ನನ್ನೂರು ಯಡಿಯೂರಿನ ಮಳವಳ್ಳಿ. ಆ ಊರಿಗೆ ಕಾಲ್ಪನಿಕ ಹೆಸರು ಕೊಟ್ಟು ಚಿರತೆ ಪ್ರಸಂಗವನ್ನೂ ತಂದು ಶಂಖವನ್ನು ಸಾಂಕೇತಿಕವಾಗಿ ಬಳಸಿ ವಿಭಿನ್ನವಾಗಿ ಟೈಮ್‌ ಲೂಪ್‌ ಸ್ಟೋರಿ ಹೇಳಿದ್ದೇವೆ’ ಎಂದೂ ಗಿರೀಶ್‌ ವಿವರ ನೀಡಿದ್ದಾರೆ.


‘ಟೈಮ್‌ ಲೂಪ್‌ ಕಥೆಯನ್ನು ನಮ್ಮ ಹಳ್ಳಿ ಮಂದಿಗೂ ಅರ್ಥವಾಗುವಂತೆ ಸರಳವಾಗಿ ಸೊಗಸಾಗಿ ನಿರೂಪಿಸುತ್ತಿದ್ದೇವೆ. ಭಾರತೀಯ ಪುರಾಣ ಮತ್ತು ಕ್ವಾಂಟಮ್ ಥಿಯರಿಯನ್ನು ಬೆಸೆದು ಮಾಡಿರುವ ಸಿನಿಮಾವಿದು’ ಎಂದು ‘ಶಾಲಿವಾಹನ ಶಕೆ’ ಸಿನಿಮಾ ನಿರ್ದೇಶಕ ಗಿರೀಶ್‌ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ನಡೆಯಿತು. ಸೆ.13ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

‘ಟೈಮ್‌ ಲೂಪ್‌ ಚಿತ್ರಗಳು ಸಿಟಿಯ ಜಾಣರಿಗೆ ಮಾತ್ರ ಎಂಬ ಪೂರ್ವಾಗ್ರಹ ನಮ್ಮಲ್ಲಿದೆ. ಅದನ್ನು ಅಳಿಸುವ ಪ್ರಯತ್ನ ಚಿತ್ರದಲ್ಲಾಗಿದೆ. ನನ್ನೂರು ಯಡಿಯೂರಿನ ಮಳವಳ್ಳಿ. ಆ ಊರಿಗೆ ಕಾಲ್ಪನಿಕ ಹೆಸರು ಕೊಟ್ಟು ಚಿರತೆ ಪ್ರಸಂಗವನ್ನೂ ತಂದು ಶಂಖವನ್ನು ಸಾಂಕೇತಿಕವಾಗಿ ಬಳಸಿ ವಿಭಿನ್ನವಾಗಿ ಟೈಮ್‌ ಲೂಪ್‌ ಸ್ಟೋರಿ ಹೇಳಿದ್ದೇವೆ’ ಎಂದೂ ಗಿರೀಶ್‌ ವಿವರ ನೀಡಿದ್ದಾರೆ.

Tap to resize

Latest Videos

ನಿರ್ಮಾಪಕ ಶೈಲೇಶ್‌ ಕುಮಾರ್‌ ರಂಗಭೂಮಿ ಹಿನ್ನೆಲೆಯ ತನ್ನ ಬಹು ಕಾಲದ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ‘ನಾಲ್ಕೈದು ದಿನದ ಘಟನಾವಳಿಗಳಲ್ಲೇ ಟೈಮ್‌ ಲೂಪ್‌ ಕಾನ್ಸೆಪ್ಟ್‌ ಕಥೆ ಹೇಳಲಾಗಿದೆ’ ಎಂದರು. ನಾಯಕಿ ಸುಪ್ರೀತಾ ಸತ್ಯನಾರಾಯಣನ್‌ ಕಾಲೇಜ್‌ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಫ್ರೆಶ್‌ ಕಥೆಯನ್ನು ಅವರು ಮೆಚ್ಚಿಕೊಂಡರು. ನಟ ಸುಂದರ್‌ ದರಬೇಸಿ ಪಾತ್ರವನ್ನು ಮಾಡುತ್ತಿರುವುದಾಗಿ ತಿಳಿಸಿದರು. ಅವರು ಈ ಸಿನಿಮಾ ಕಾಸ್ಟ್ಯೂಮ್‌ನಲ್ಲಿದ್ದಾಗ ಒಂದಿಷ್ಟು ಜನ ಹೆಂಗಸರು ಇವರ ಬಳಿ ಬಂದು ಮಕ್ಕಳಿಗೆ ತಾಯ್ತ ಕಟ್ಟಿಸಿಕೊಂಡು ಹೋದರಂತೆ.

ಟಾಕ್ಸಿಕ್ ಅಡ್ಡದಿಂದ ಬಂತು ಮತ್ತೊಂದು ಸೂಪರ್ ಸರ್​ಪ್ರೈಸ್: ಯಶ್ ಜೊತೆ ನಾನಿದ್ದೇನೆ ಎಂದ ಟಿಟೌನ್ ಲೇಡಿ ಸೂಪರ್ ಸ್ಟಾರ್!

ಈ ಹಿಂದೆ ‘ಒಂದು ಕಥೆ ಹೇಳ್ಲಾ’ ಎಂಬ ಸಿನಿಮಾ ನಿರ್ದೇಶಿಸಿದ್ದ ಗಿರೀಶ್ ಹೊಸ ಸಿನಿಮಾ ‘ಶಾಲಿವಾಹನ ಶಕೆ’. ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡು ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ರಂಗಕರ್ಮಿ ಶೈಲೇಶ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಸಿನಿಮಾ ಬಗ್ಗೆ ನಿರ್ದೇಶಕ ಗಿರೀಶ್‌, ‘ಇದು ಒಂದು ದಿನದಲ್ಲಿ ನಡೆಯುವ ಕಥೆ. ಜೀವನದ ಕೆಲವು ಘಟನೆಗಳನ್ನು ಸರಿಮಾಡಿಕೊಳ್ಳುವ ಅವಕಾಶ ಸಿಕ್ಕರೆ ಬದುಕು ಹೇಗಾಗಬಹುದು ಎನ್ನುವುದನ್ನು ಈ ಸಿನಿಮಾ ಮೂಲಕ ತೋರಿಸುತ್ತೇವೆ. ಹಳ್ಳಿ ಸೊಗಡಿನಲ್ಲಿ ಈ ಕಥೆ ನಿರೂಪಿಸುವುದು ವಿಶೇಷ’ ಎಂದಿದ್ದಾರೆ.

click me!