1 ಕೋಟಿ ರೂ ಆಫರ್ ನಿರಾಕರಿಸಿದ ನಟಿ!

First Published Jun 22, 2018, 2:22 PM IST
Highlights

ನಶ್ರತ್ ಬರೂಚಾ ಸದ್ಯ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಹಾಟ್ ನೇಮ್! ಇವರ ಕಾಲ್ ಶೀಟ್’ಗಾಗಿ ಮನೆ ಮುಂದೆ  ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಮುಂಬರುವ ಚಿತ್ರಕ್ಕಾಗಿ ದಕ್ಷಿಣ ಭಾರತದ ನಿರ್ಮಾಪಕರೊಬ್ಬರು 1 ಕೋಟಿ ರೂ ಆಫರ್ ನೀಡಿದ್ದು ಆದರೆ ನಶ್ರತ ನಿರಾಕರಿಸಿ ಸುದ್ದಿಯಾಗಿದ್ದಾರೆ.  

ಚೆನ್ನೖ (ಜೂ. 22): ನಶ್ರತ್ ಬರೂಚಾ ಸದ್ಯ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಹಾಟ್ ನೇಮ್! ಇವರ ಕಾಲ್ ಶೀಟ್’ಗಾಗಿ ಮನೆ ಮುಂದೆ  ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಮುಂಬರುವ ಚಿತ್ರಕ್ಕಾಗಿ ದಕ್ಷಿಣ ಭಾರತದ ನಿರ್ಮಾಪಕರೊಬ್ಬರು 1 ಕೋಟಿ ರೂ ಆಫರ್ ನೀಡಿದ್ದು ಆದರೆ ನಶ್ರತ ನಿರಾಕರಿಸಿ ಸುದ್ದಿಯಾಗಿದ್ದಾರೆ. 

ಹಣ ನನಗೆ ಆದ್ಯತೆಯಲ್ಲ. ಹಣದ ಮೊತ್ತದ ಕಡೆ ಗಮನ ನೀಡುವುದಿಲ್ಲ. ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡಲು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ನಶ್ರತ್  1 ಕೋಟಿ ರೂ ಆಫರನ್ನು ನಯವಾಗಿ ನಿರಾಕರಿಸಿದ್ದಾರೆ. 

ನಾನು ಎಲ್ಲಾ ಭಾಷೆಯ ಚಿತ್ರಗಳಿಗೂ ಆದ್ಯತೆ ನೀಡುತ್ತೇನೆ. ಪ್ರಾದೇಶಿಕ ಭಾಷೆಗಳಲ್ಲೂ ನಟಿಸಲು ಅಭ್ಯಂತರವಿಲ್ಲ. ಆಫರನ್ನು ನಿರಾಕರಿಸಿದೆ ಅಂದಾಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ನಾನು ನಟಿಸಲ್ಲ ಎಂದರ್ಥವಲ್ಲ ಎಂದು ನಶ್ರತ್ ಹೇಳಿದ್ದಾರೆ.     

click me!