ಅನಿಲ್ ಕಪೂರ್’ನನ್ನು ಬಿಟ್ಟು ಒಬ್ಬರೇ ಹನಿಮೂನ್’ಗೆ ಹೋದ ಸುನೀತಾ!

Published : Aug 01, 2018, 01:47 PM IST
ಅನಿಲ್ ಕಪೂರ್’ನನ್ನು ಬಿಟ್ಟು ಒಬ್ಬರೇ ಹನಿಮೂನ್’ಗೆ ಹೋದ ಸುನೀತಾ!

ಸಾರಾಂಶ

45 ವರ್ಷದ ದಾಂಪತ್ಯ ನಮ್ಮದು. ಇಲ್ಲಿ ಸ್ನೇಹ, ಪ್ರೀತಿ, ಪರಸ್ಪರ ಗೌರವ ಎಲ್ಲವೂ ಇದೆ. ಆಕೆ ಪರ್ಫೆಕ್ಟ್ ತಾಯಿ, ಹೆಂಡತಿ, ಸ್ನೇಹಿತೆ. ನಾನು ದಿನಾ ಬೆಳಿಗ್ಗೆ ಎದ್ದಾಗ ಅವಳಿಂದ ಪ್ರೇರಿತನಾಗುತ್ತೇನೆ. ಯಾಕೆ ಗೊತ್ತಾ? ನಾನು ನಿನ್ನೆಯಷ್ಟೇ ನಿನಗೆ ಹಣ ಕೊಟ್ಟಿದ್ದೆನಲ್ಲ ಎಂದರೆ ಅರೇ,ಕೊಟ್ಟ ಹಣವೆಲ್ಲಾ ಖಾಲಿಯಾಗಿದೆ ಅಂತಾಳೆ. ಕೂಡಲೇ ನಾನು ಹಾಸಿಗೆಯಿಂದ ಎದ್ದು ದುಡಿಯಲು ಹೊರಡುತ್ತೇನೆ ಎನ್ನುತ್ತಾರೆ ಅನಿಲ್ ಕಪೂರ್.  

ಬೆಂಗಳೂರು (ಆ. 01): ಈ ನಟ ತೆರೆ ಮೇಲೆ ಕಾಣಿಸಿಕೊಂಡರೆ ಸಾಕು ಹುಡುಗಿಯರ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ನನ್ನ ಹುಡುಗನೂ ಹೀಗೆ ಇರಬೇಕು ಎಂದು ಕನಸು ಕಾಣುವರರೇ ಹೆಚ್ಚು. ಯಾರಪ್ಪಾ ಆ ಸುಂದರಾಂಗ ನಟ ಅಂದ್ಕೋತಿದಿರಾ? ಹೌದು ಅವರೇ ಹ್ಯಾಂಡಸಮ್ ಹೀರೋ, ನಗುಮಖದ ಸುಂದರ ಅನಿಲ್ ಕಪೂರ್. 

ಇಂದು ಅನಿಲ್ ಕಪೂರ್ ವೆಡ್ಡಿಂಗ್ ಆ್ಯನಿವರ್ಸರಿ.  ಅನಿಲ್ ಕಪೂರ್ ಹಾಗೂ ಸುನಿತಾ ಮದುವೆಯಾಗಿ ಇಂದಿಗೆ 35 ವರ್ಷಗಳು ತುಂಬುತ್ತದೆ. ಇವರಿಬ್ಬರ ಪ್ರೇಮ ಕಹಾನಿ ಬಹಳ ಮಜವಾಗಿದೆ. 

ಅನಿಲ್ ಕಪೂರ್ ಹಾಗೂ ಸುನೀತಾ ಪ್ರೇಮ್ ಕಹಾನಿ ಶುರುವಾಗುವುದು ಒಂದು ಪ್ರಾಂಕ್ ಕಾಲ್’ನಿಂದ. ಮೊದಲು ಪರಿಚಯ. ಅ ನಂತರ ಸ್ನೇಹ. ಸ್ನೇಹ ಪ್ರೀತಿಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಇಬ್ಬರೂ ಪ್ರಣಯ ಪಕ್ಷಿಗಳಾದರು. ಅನಿಲ್ ಕಪೂರ್, ಸುನಿತಾರನ್ನು ಮೊದಲ ಬಾರಿ ಬೇಟಿಯಾದಾಗ ನಿರುದ್ಯೋಗಿಯಾಗಿದ್ದರು. ಕೈಯಲ್ಲಿ ಕೆಲಸವಿರಲಿಲ್ಲ. ಜೇಬಲ್ಲಿ ಕಾಸಿರಲಿಲ್ಲ.  ಆ ವೇಳೆಗೆ ಸುನಿತಾ ಮಾಡೆಲ್ ಆಗಿದ್ದರು. ಇದ್ಯಾವುದೂ ಇವರ ಪ್ರೀತಿಗೆ ಅಡ್ಡ ಬರಲಿಲ್ಲ. 35 ವರ್ಷಗಳ ಅನ್ಯೋನ್ಯ ದಾಂಪತ್ಯ ಇವರದ್ದು. 

45 ವರ್ಷದ ದಾಂಪತ್ಯ ನಮ್ಮದು. ಇಲ್ಲಿ ಸ್ನೇಹ, ಪ್ರೀತಿ, ಪರಸ್ಪರ ಗೌರವ ಎಲ್ಲವೂ ಇದೆ. ಆಕೆ ಪರ್ಫೆಕ್ಟ್ ತಾಯಿ, ಹೆಂಡತಿ, ಸ್ನೇಹಿತೆ. ನಾನು ದಿನಾ ಬೆಳಿಗ್ಗೆ ಎದ್ದಾಗ ಅವಳಿಂದ ಪ್ರೇರಿತನಾಗುತ್ತೇನೆ. ಯಾಕೆ ಗೊತ್ತಾ? ನಾನು ನಿನ್ನೆಯಷ್ಟೇ ನಿನಗೆ ಹಣ ಕೊಟ್ಟಿದ್ದೆನಲ್ಲ ಎಂದರೆ ಅರೇ,ಕೊಟ್ಟ ಹಣವೆಲ್ಲಾ ಖಾಲಿಯಾಗಿದೆ ಅಂತಾಳೆ. ಕೂಡಲೇ ನಾನು ಹಾಸಿಗೆಯಿಂದ ಎದ್ದು ದುಡಿಯಲು ಹೊರಡುತ್ತೇನೆ ಎನ್ನುತ್ತಾರೆ ಅನಿಲ್ ಕಪೂರ್. 

ಇದೇ ಸಂದರ್ಭದಲ್ಲಿ ಒಂದು ಘಟನೆಯನ್ನು ನೆನೆಸಿಕೊಳ್ಳುತ್ತಾರೆ.; ನಾನು ಶೂಟ್ ಇದೆಯೆಂದು 3 ದಿನಗಳ ಕಾಲ ಹೊರ ಹೋಗಿದ್ದೆ. ಆಗ ನಮ್ ಮೇಡಮ್, ನನ್ನನ್ನು ಬಿಟ್ಟು ಒಬ್ಬರೇ ಹನಿಮೂನ್’ಗೆಂದು
ವಿದೇಶಕ್ಕೆ ತೆರಳಿದ್ದರು ಎಂದು ತಮಾಷೆ ಮಾಡುತ್ತಾರೆ. 

ಅನಿಲ್ ಕಪೂರ್ ತಮ್ಮ ಪತ್ನಿಯನ್ನು ನೆನೆಸಿಕೊಂಡಿದ್ದು ಹೀಗೆ; 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ