* ವಿವಾಹಿತ ಮಹಿಳೆಯಿಂದ ಬಾಲಕನ ಮೇಲೆ ದೌರ್ಜನ್ಯ
* ಮಹಿಳೆ ಕುಟುಂಬದಿಂದ ಬಾಲಕನ ಬಳಿ ಹಣಕ್ಕೆ
* ಹಣ ಕೊಡದಿದ್ದರೆ ನಿನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ
ಭೋಪಾಲ್ (ಜೂ. 02) ಮಹಿಳೆ ಮೇಲೆ ಪುರುಷರಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವರದಿ ಕೇಳುತ್ತಲೇ ಇರುತ್ತೇವೆ. ಆದರೆ ಇದು ಮಹಿಳೆಯಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ.
ಮಧ್ಯಪ್ರದೇಶದ 35 ವರ್ಷದ ಮಹಿಳೆಯೊಬ್ಬರು 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಅಲ್ಲದೆ ಆತನಿಕೆ ಬೆದರಿಕೆ ಹಾಕಿದ್ದಾಳೆ. ಮಹಿಳೆಯ ಪತಿ ಮತ್ತು ಅಳಿಯಂದಿರು 1 ಲಕ್ಷ ರೂ. ತಂದುಕೊಡಲು ಒತ್ತಾಯ ಮಾಡಿದ್ದಾರೆ. ಹಣ ಕೊಡದಿದ್ದರೆ ನಿನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
undefined
ಮಹಿಳೆ ಹದಿಹರೆಯದ ಬಾಲಕ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಮೇ 27 ರಂದು ಮಹಿಳೆಯ ಅಳಿಯ ಮತ್ತು ಪತಿಗೆ ಈ ವಿಚಾರ ಗೊತ್ತಾಗಿದೆ. ಬಾಲಕನ ನೆರವಿಗೆ ನಿಲ್ಲುವ ಬದಲು ಕುಟುಂಬದವರು ಆತನಿಗೆ ಬೆದರಿಕೆ ಹಾಕಿದ್ದಾರೆ.
'ಕಾಲ್ ಮಾಡಿ ಆಂಟಿ ಬರ್ತಾಳೆ' ಮಾಲೀಕನ ಮಗಳ ಮೊಬೈಲ್ ನಂಬರ್ ವೈರಲ್
ಬಾಲಕನ ಕುಟುಂಬ ಹಣ ಕೊಡಲು ಒಪ್ಪಿಕೊಪಂಡಿಲ್ಲ. ಹಣದ ಬದಲು ನಿಮ್ಮ ಕೃಷಿ ಭೂಮಿ ಕೊಡಿ ಎಂದು ಮಹಿಳೆಯ ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಕೃಷಿ ಭೂಮಿಯಲ್ಲಿದ್ದ ಪಪ್ಪಾಯಿ ಮರಗಳನ್ನು ಕಡಿದು ಹಾಕಲಾಗಿದೆ. ಇದೆಲ್ಲ ಆದ ಮೇಲೆ ಬಾಲಕ ಸಹಾಯವಾಣಿಗೆ ದೂರು ಕೊಟ್ಟಿದ್ದಾನೆ. ಅತ್ಯಾಚಾರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಯತ್ನ ನಡೆಯುತ್ತಿದೆ ಎಂದು ಆತಂಕ ತೋಡಿಕೊಂಡಿದ್ದಾನೆ.
ಅಧಿಕಾರಿ ಮನೀಶ್ ದಂಗಿ ಪ್ರಕರಣದ ಸಂಪೂರ್ಣ ವಿವರಣೆ ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ನಿನ್ನ ಮಾನ ಹರಾಜು ಹಾಕುತ್ತೇವೆ ಎಂದು ಬಾಲಕಿನಿಗೆ ಬೆದರಿಕೆ ಬಂದಿದೆ.
ಖಿನ್ನತೆಗೆ ಹೋದ ಬಾಲಕ ಅಧಿಕಾರಿಗಳ ಮೊರೆ ಹೋಗಿದ್ದು ಮಹಿಳೆಯ ಕುಟುಂಬದವರನ್ನು ಬಂಧಿಸಲಾಗಿದೆ. ಪೊಕ್ಸೋ ಕಾಯ್ದೆಯಡಿ ಮಹಿಳೆ ಮೇಲೆಯೂ ಪ್ರಕರಣ ದಾಖಲಾಗಿದೆ.