* ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಎರಗಿದರು
* ಸಾಮೂಹಿಕ ಅತ್ಯಾಚಾರ ಮಾಡಿ ಕುಕೃತ್ಯ ರೆಕಾರ್ಡ್
* ಸೋಶಿಯಲ್ ಮೀಡಿಯಾಕ್ಕೂ ಅಪ್ ಲೋಡ್
* ನೊಂದ ಮಹಿಳೆಯಿಂದ ಪೊಲೀಸರಿಗೆ ದೂರು
ರಾಜ್‌ಕೋಟ್(ಮೇ 21) ಗುಜರಾತ್‌ನ ಭಾವನಗರದ ಕುಂಭರಾವ್ ಪ್ರದೇಶದಲ್ಲಿ 40 ವರ್ಷದ ಮಹಿಳೆ ಮೇಲೆ ಮೂವರು ಅತ್ಯಾಚಾರ ಮಾಡಿದ್ದಾರೆ. ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು ಅಲ್ಲದೇ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿದ್ದಾರೆ.
ಏಪ್ರಿಲ್ 1 ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಮೇ 19 ರಂದು ಮಹಿಳೆ ಮೂವರು ಆರೋಪಿಗಳಾದ ರಾಕೇಶ್ ಮಕ್ವಾನಾ, ದಿನೇಶ್ ಮಕ್ವಾನಾ ಮತ್ತು ಕಪಿಲ್ ಚುಡಾಸಾಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
undefined
ತಾಯಿಯ ಗೆಳೆಯನ ಉಸಿರು ನಿಲ್ಲುವವರೆಗೂ ಚುಚ್ಚುತ್ತಲೇ ಇದ್ದ!
ಕುಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಸ್ವಚ್ಛತಾ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ದೂರು ನೀಡಿದ್ದಾರೆ.
ಆರೋಪಿ ಕಪಿಲ್ ಎಂಬಾತನ ಕಚೇರಿಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಆತನ ಸ್ನೇಹಿತರು ಬಾಗಿಲು ಮುಚ್ಚಿದ್ದಾರೆ. ನಂತರ ಮಹಿಳೆ ಮೇಲೆ ಎರಗಿದ್ದಾರೆ.
ಈ ಘಟನೆಯ ನಂತರ ಮಹಿಳೆ ಅಲ್ಲಿಂದ ಕೆಲಸ ತೊರೆದಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ನಂತರ ಪೊಲೀಸ್ ಠಾಣೆಗೆ ಬಂದಿ ದೂರು ನೀಡಿದ್ದಾರೆ. ದಿನೇಶ್ ಮಕ್ವಾನಾ ಮತ್ತು ರಾಕೇಶ್ ಮಕ್ವಾನಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಕಪಿಲ್ ಚುಡಾಸಮಾಗೆ ಬಲೆ ಬೀಸಲಾಗಿದೆ.