ಜಯರಾಜ್ ಬಲಗೈ ಕೊರಂಗು ಕೃಷ್ಣಾ ಇನ್ನಿಲ್ಲ

By Suvarna NewsFirst Published Jun 19, 2020, 2:43 PM IST
Highlights

ಪಾತಕಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣಾ ನಿಧನ/ ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣ/ ದಶಕದ ಹಿಂದೆ ಅಟ್ಯಾಕ್ ಆದ ಮೇಲೆ ಚಿತ್ತೂರಿಗೆ ತೆರಳಿ ಬಿಜಿನಸ್  ಮಾಡಿಕೊಂಡಿದ್ದ

ಚಿತ್ತೂರ್(ಜೂ. 18) ಕುಖ್ಯಾತ ಪಾತಕಿ ಕೃಷ್ಣಮೂರ್ತಿ ಅಲಿಯಾಸ್  ಕೊರಂಗು ಕೃಷ್ಣಾ ಸಾವನ್ನಪ್ಪಿದ್ದಾನೆ. ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ  ಕೃಷ್ಣಾ ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾನೆ. 

ದಶಕದ ಹಿಂದೆ ಹೆಬ್ಬಟ್ಟು  ಮಂಜ ಅಂಡ್ ಟೀಂ ನಿಂದ ಕೊರಂಗೂ ಮೇಲೆ ಆಟ್ಯಾಕ್ ಆಗಿತ್ತು.  ಹಿರಿಯೂರು ಡಾಬದಲ್ಲಿ ನಡೆದ ದಾಳಿಯಲ್ಲಿ ಕೊರೊಂಗು ಕೈ ಕಟ್ ಆಗಿ ಬದುಕುಳಿದ್ದಿದ್ದ.  ಇದಾದ ನಂತರ ಕೊರಂಗು ಕೃಷ್ಣಾ ಗಡಿಪಾರಾಗಿದ್ದ. 

ಅಂಡರ್‌ವರ್ಲ್ಡ್ ಫ್ಲಾಶ್ ಬ್ಯಾಕ್; ಮುತ್ತಪ್ಪ ರೈ ಆಗಮನ

ಚಿತ್ತೂರಿನಲ್ಲೇ ಬ್ಯುಸಿನೆಸ್ ಮಾಡಿಕೊಂಡಿದ್ದ ಕೊರಂಗು ಕೃಷ್ಣಾ ಅನಾರೋಗ್ಯಕ್ಕೆ ತುತ್ತಾಗಿದ್ದ.  ಚಿತ್ತೂರಿನಲ್ಲೇ ಕೊರಂಗು ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ

ಕೊರಂಗೂ ಬೆಂಗಳೂರಿನ‌ ಡಾನ್ ಎಂದು ಕರೆಸಿಕೊಂಡಿದ್ದ ಜಯರಾಜ್ ಅತ್ಯಾಪ್ತನಾಗಿ ಗುರುತಿಸಿಕೊಂಡಿದ್ದ.  ತಿಮ್ಮೆನಹಳ್ಳಿ ತಮ್ಮಯ್ಯನ ಸಿಂಡಿಕೇಟ್ ನಲ್ಲಿ ಗುರ್ತಿಸಿ ಕೊಂಡಿದ್ದ ಕೊರಂಗು  ತಮ್ಮಯನಿಗೆ ಏಕವಚನದಲ್ಲಿ ಬಲರಾಮ ಬೈದಿದ್ದಕ್ಕೆ ಬಲರಾಮನ ಕೊಲೆ ಮಾಡಿದ್ದ.

ಬೆಂಗಳೂರಿನ ಹಳೇ ಜೈಲಿನಲ್ಲಿದ್ದ ಬಲರಾಮನನ್ನು ಕೊರಂಗು ಕೊಲ್ಲಿಸಿದ್ದ.  ಮಹಿಳೆ ಮೂಲಕ ಆಯುಧ  ಸಪ್ಲೈ ಮಾಡಿಸಿ ಕೊಲೆ ಮಾಡಿಸಿದ್ದ. ಇದೇ ಕಾರಣಕ್ಕೆ  ಬಲರಾಮನ‌ಶಿಷ್ಯ ಮುಲಾಮ ಕೊರಂಗು ಮೇಲೆ‌ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ.  ಬಲರಾಮನ ಸಮಾಧಿ ಮೇಲೆ‌‌ ಮುಲಾಮ ಲೊಕೇಶ ಪ್ರತಿಜ್ಞೆ ಮಾಡಿದ್ದ.

ತನ್ನ ಶಿಷ್ಯ ಹೆಬ್ಬೆಟ್ಟು ಮಂಜನ‌ಮೂಲಕ ಹಿರಿಯೂರಿನಲ್ಲಿ ಕೊರಂಗು ಮೇಲೆ ಮಂಜ ಅಟ್ಯಾಕ್ ಮಾಡಿದ್ದ.  ಈ ಆಟ್ಯಾಕ್ ನಲ್ಲಿ ದೀಪೂ ಎಂಬ ಯುವಕ‌ಸ್ಥಳದಲ್ಲೇ ಮೃತನಾಗಿದ್ದ ಘಟನೆಯಲ್ಲಿ ಕೊರಂಗು ಬದುಕಿ ಉಳಿದಿದ್ದ.  ನಂತರ  ಚಿತ್ತೂರಿನಲ್ಲಿ ಕೊರಂಗುಗಾಗಿ ಕಲ್ಲಿದ್ದಲು ಗಣಿಯನ್ನು ಕೊರಂಗು  ಅಣ್ಣ ಮಾಡಿಕೊಟ್ಟಿದ್ದ.

click me!