ಮೋಟರ್‌ ಕದ್ದಿದ್ದಾನೆಂದು ಕೈ ಕಟ್ಟಿಬಡಿದು ಕಾರ್ಮಿಕನ ಹತ್ಯೆ

By Suvarna NewsFirst Published May 30, 2022, 7:03 AM IST
Highlights

* ಹಗ್ಗ, ತಂತಿಯಿಂದ ಕಾರ್ಮಿಕನ ಕೈಕಾಲು ಕಟ್ಟಿಕಬ್ಬಿಣದ ರಾಡ್‌, ಮರದ ತುಂಡಿನಿಂದ ಹಲ್ಲೆ ನಡೆಸಿ ಕೊಲೆ

* ಕಟ್ಟಡ ಮಾಲಿಕ, ಕೆಲಸಗಾರ ಸೆರೆ, ಸಂಪ್‌ಗೆ ಹಾಕಿದ್ದ ಮೋಟರ್‌ ಕದ್ದ ಆರೋಪ

* ಅಶ್ವತ್ ಮೇಲೆ ಮಾರಾಣಾಂತಿಕ ಹಲ್ಲೆ, *ಬಳಿಕ ರಸ್ತೆ ಬದಿಗೆ ಶವ ಎಸೆದು ಪರಾರಿ

ಬೆಂಗಳೂರು(ಮೇ.30): ನಿರ್ಮಾಣ ಹಂತದ ಕಟ್ಟಡದಲ್ಲಿನ ಸಂಪ್‌ ಮೋಟರ್‌ ಕದ್ದ ಆರೋಪದಡಿ ಕಾರ್ಮಿಕನ ಕೈ-ಕಾಲು ಕಟ್ಟಿಮರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದ ಪ್ರಕರಣ ಸಂಬಂಧ ಕಟ್ಟಡದ ಮಾಲಿಕ ಸೇರಿ ಇಬ್ಬರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಯ್ಸಳ ನಗರ ನಿವಾಸಿ ಶ್ರೀನಿವಾಸ ರೆಡ್ಡಿ (68) ಮತ್ತು ಸುಬ್ಬಯ್ಯ ನಾಯ್ಡು (69) ಬಂಧಿತರು. ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಮುನೇಶ್ವರ ನಗರ ನಿವಾಸಿ ಅಶ್ವತ್‌್ಥ(48) ಕೊಲೆಯಾದ ದುರ್ದೈವಿ. ಮೇ 28ರಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಹೊಯ್ಸಳ ನಗರದ 18ನೇ ಕ್ರಾಸ್‌ನಲ್ಲಿ ಅಪರಿಚಿತ ಶವ ಬಿದ್ದಿರುವುದಾಗಿ ಸ್ಥಳೀಯರು ರಾಮಮೂರ್ತಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲಿಸಿದಾಗ ಮೃತ ವ್ಯಕ್ತಿ ಕಾರ್ಮಿಕ ಅಶ್ವತ್‌್ಥ ಎಂಬುದು ತಿಳಿದು ಬಂದಿದೆ.

Latest Videos

ಗಾರೆ ಕೆಲಸ ಮಾಡುವ ಅಶ್ವತ್‌್ಥ, ಆರೋಪಿ ಶ್ರೀನಿವಾಸ ರೆಡ್ಡಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ. ಮೇ 27ರಂದು ಅಶ್ವತ್‌್ಥ ಕೆಲಸಕ್ಕೆ ಬಂದಿದ್ದ ವೇಳೆ ಕಟ್ಟಡದ ಮಾಲಿಕ ಶ್ರೀನಿವಾಸ ರೆಡ್ಡಿ ಹಾಗೂ ಕೆಲಸಗಾರ ಸುಬ್ಬಯ್ಯ ನಾಯ್ಡು ಸೇರಿಕೊಂಡು ಸಂಪ್‌ನ ಮೋಟರ್‌ ಕಳವು ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ತಾನು ಕದ್ದಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಇಬ್ಬರು ಹಗ್ಗ ಹಾಗೂ ತಂತಿಯಿಂದ ಅಶ್ವತ್‌್ಥನ ಕೈ ಕಾಲು ಕಟ್ಟಿಕಬ್ಬಿಣದ ರಾಡ್‌ ಹಾಗೂ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಶ್ವತ್‌್ಥ ಮೃತಪಟ್ಟಿದ್ದಾನೆ. ಬಳಿಕ ನಿರ್ಮಾಣ ಹಂತದ ಕಟ್ಟಡದಿಂದ ಸುಮಾರು 50 ಮೀಟರ್‌ ದೂರಕ್ಕೆ ಮೃತದೇಹವನ್ನು ಎಳೆದು ತಂದು ಪಾದಚಾರಿ ಮಾರ್ಗದಲ್ಲಿ ಹಾಕಿ ಪರಾರಿಯಾಗಿದ್ದರು.

ಈ ನಡುವೆ ಮೃತ ಅಶ್ವತ್‌್ಥ ಪತ್ನಿ ಮಂಜುಳಾ ಠಾಣೆಗೆ ಬಂದು ಮೇ 27ರಂದು ಕೆಲಸಕ್ಕೆ ಹೋಗಿದ್ದ ಪತಿ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ. ಕಟ್ಟಡದ ಮಾಲಿಕ ಶ್ರೀನಿವಾಸ ರೆಡ್ಡಿ ಹಾಗೂ ಕೆಲಸಗಾರ ಸುಬ್ಬಯ್ಯ ನಾಯ್ಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಈ ಇಬ್ಬರು ಅಶ್ವತ್‌್ಥನ ಕೈ-ಕಾಲು ಕಟ್ಟಿಮಾರಣಾಂತಿಕ ಹಲ್ಲೆ ನಡೆಸಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!