ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘನೆ, ದರ್ಶನ್ ನೋಡಲು ಬಂದ ತಾಯಿ, ತಮ್ಮ ಕುಟುಂಬಕ್ಕೆ ರಾಜಾತಿಥ್ಯ!

By Gowthami K  |  First Published Jul 1, 2024, 11:35 AM IST

ಜೈಲಿನಲ್ಲಿರುವ ದರ್ಶನ್‌ ನನ್ನು ನೋಡಲು ದಿನಕ್ಕೊಬ್ಬರಂತೆ ಬರುತ್ತಿದ್ದಾರೆ. ಇದೀಗ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್‌ ರನ್ನು ನೋಡಲು ತಾಯಿ ಮೀನಾ, ತಮ್ಮ ದಿನಕರ್ , ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಬಂದಿದ್ದಾರೆ. 


ಬೆಂಗಳೂರು (ಜು.1): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತ್ಮೀಯ ಗೆಳತಿ ಪವಿತ್ರಾ ಗೌಡ  (  Pavithra Gowda) ಸೇರಿ ಒಟ್ಟು 17 ಮಂದಿ ಪರಪ್ಪನ  ಅಗ್ರಹಾರ ಜೈಲಿನಲ್ಲಿದ್ದಾರೆ.

ಜೈಲಿನಲ್ಲಿರುವ ದರ್ಶನ್‌ ನನ್ನು ನೋಡಲು ದಿನಕ್ಕೊಬ್ಬರಂತೆ ಬರುತ್ತಿದ್ದಾರೆ. ಇದೀಗ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್‌ ರನ್ನು ನೋಡಲು ತಾಯಿ ಮೀನಾ, ತಮ್ಮ ದಿನಕರ್ , ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಬಂದಿದ್ದಾರೆ. 

Latest Videos

undefined

ಆದರೆ ವಿಚಾರ ಅದಲ್ಲ ಜೈಲಿನಲ್ಲಿರುವವರನ್ನು ನೋಡಲು ಬರಬೇಕಾದರೆ ಕಾನೂನು ರೀತಿಯಲ್ಲಿ ಅನುಮತಿ ಪಡೆದು ಒಳಹೋಗಬೇಕಾಗುತ್ತೆ. ಆದರೆ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳು ಜನ ಸಾಮಾನ್ಯರಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಎಂಬಂತೆ ವರ್ತಿಸುತ್ತಿದ್ದಾರೆ.

5ಕೋಟಿ ಸಾಲಕ್ಕೆ ಬಡ್ಡಿ ಸೇರಿಸಿ 13 ಕೋಟಿ ಹಿಂತಿರುಗಿಸುವಂತೆ ಕನ್ನಡ ನಿರ್ಮಾಪಕ ಪುಷ್ಕರ್‌ಗೆ ಕೊಲೆ ಬೆದರಿಕೆ!

ಅದಕ್ಕೆ ಪೂರಕವೆಂಬತೆ ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬವನ್ನು ಜೈಲಿಗೆ ಕರೆದುಕೊಂಡು ಹೋಗಿ ದರ್ಶನ್‌ರನ್ನು ಭೇಟಿ ಮಾಡಲು ಅವಕಾಶ ನೀಡಿದ್ದಾರೆ. ಬಂಧಿಖಾನೆ ಇಲಾಖೆಯಲ್ಲಿರುವ ಕಾನೂನುಗಳನ್ನು ಗಾಳಿಗೆ ತೂರಿರುವ ಜೈಲಾಧಿಕಾರಿಗಳು ದರ್ಶನ್ ನಟ ಎಂಬ ಕಾರಣಕ್ಕೆ ರಾಜಾತಿಥ್ಯ ನೀಡುತ್ತಿದ್ದಾರೆ.

ಸಾಮಾನ್ಯರು ಜೈಲಿಗೆ ಎಂಟ್ರಿ‌ ಕೊಡಬೇಕಾದರೆ ಹತ್ತಾರು ಕಾನೂನು ಪಾಲನೆ ಮಾಡಬೇಕು. ಆದ್ರೆ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಯಾವುದೇ ನೀತಿ ನಿಯಮ ರೀತಿ ರಿವಾಜುಗಳಲ್ಲಿ, ರಾಜಾರೋಷವಾಗಿ ನಟ ದರ್ಶನ್ ಕುಟುಂಬದರು ಜೈಲಿಗೆ ಎಂಟ್ರಿ ಕೊಡುತ್ತಿದ್ದಾರೆ. ಇದಕ್ಕೆ ಅಲ್ಲಿನ ಪೊಲೀಸರು ಸಾಥ್‌ ನೀಡುತ್ತಿದ್ದಾರೆ.

ಮಾಧ್ಯಮಗಳ ಕಣ್ತಪ್ಪಿಸಿ ಆರೋಪಿ ದರ್ಶನ್ ನನ್ನು ಕುಟುಂಬ  ಭೇಟಿ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿಗೆ  ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಹತ್ತು ಗಂಟೆ ಸುಮಾರಿಗೆ ಜೈಲಿಗೆ ಎಂಟ್ರಿ ಕೊಟ್ಟಿದೆ. ಈ ವೇಳೆ  ಪೊಲೀಸ್ ಸಿಬ್ಬಂದಿ ಖುದ್ದಾಗಿ ತಾವೇ ಅವರನ್ನು ತಮ್ಮ ಖಾಸಗಿ ಕಾರಿನಲ್ಲಿ ಜೈಲಿನ ಒಳಗೆ ಕರೆದೊಯ್ದಿದ್ದಾರೆ.

ಸಂತಾನ ಭಾಗ್ಯವಿಲ್ಲದ್ದಕ್ಕೆ ಐವಿಫ್‌ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದ ತಾರೆಯರು

ಪರಪ್ಪನ ಅಗ್ರಹಾರ ಠಾಣೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉದಯ್  ಎಂಬಾತ ನಟ ದರ್ಶನ್ ಭೇಟಿಗೆ  ಖಾಸಗಿ ವಾಹನದಲ್ಲಿ ಕರೆದೊಯ್ದಿದ್ದಾನೆ. ಕಳೆದ ಸೋಮವಾರ ಕೂಡ ಮಾಧ್ಯಮಗಳ ಕಣ್ತಪ್ಪಿಸಿ ಇದೇ ಉದಯ್ , ದರ್ಶನ್ ಪತ್ನಿ ಮಗನನ್ನು ಕರೆದೊಯ್ದಿದ್ದ. ಇಂದು ಕೂಡ ಖಾಸಗಿ ಕಾರಿನಲ್ಲಿ ಪೊಲೀಸ್ ಸಿಬ್ಬಂದಿ ಉದಯ್ ಕರೆದೊಯ್ದಿದ್ದು, ಈಗ ಜೈಲಿನ ಅವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬುದು ತಿಳಿಯುತ್ತಿದೆ. ಜನ ಸಾಮಾನ್ಯರಿಗೆ ಒಂದು ನ್ಯಾಯ ಮತ್ತು ಇತರೆ ವ್ಯಕ್ತಿಗಳಿಗೆ ಒಂದು ನ್ಯಾಯ ಎಂಬಂತೆ ಭೇದ ಭಾವ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

click me!