ಹಾವೇರಿ: ಮೂರು ವರ್ಷದ ಮಗಳ ಎದುರೇ ತಂದೆ, ತಾಯಿ ಆತ್ಮಹ*

By Kannadaprabha News  |  First Published Nov 17, 2024, 9:23 AM IST

3 ವರ್ಷದ ಮಗಳು ಹನುಮಂತ ಹೊನ್ನಪ್ಪ ಹಾಗೂ ಪತ್ನಿ ಸವಿತಾ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ತಾಲೂಕಿನ ಬೆಳವಗಿ ಗ್ರಾಮದಲ್ಲಿ ನಡೆದಿದೆ. 


ಗುತ್ತಲ(ಹಾವೇರಿ)(ನ.17):  ಮೂರು ವರ್ಷದ ಮಗಳ ಎದುರೇ ತಂದೆ, ತಾಯಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹಾವೇರಿ ತಾಲೂಕಿನ ಬೆಳವಗಿ ಗ್ರಾಮದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಬೆಳವಗಿಯ ನಿವಾಸಿ ಹನುಮಂತ ಹೊನ್ನಪ್ಪ (32) ಹಾಗೂ ಪತ್ನಿ ಸವಿತಾ (26) ಮೃತರು. ಆತ್ಮಹತ್ಯೆ ಮಾಡಿಕೊಂಡ ದಂಪತಿಯ 3 ವರ್ಷದ ಮಗಳು ಚೇತನಾ ಗುರುವಾರ ತಡರಾತ್ರಿ ಜೋರಾಗಿ ಅಳುತ್ತಿರುವ ಧ್ವನಿ ಅಕ್ಕಪಕ್ಕದವರಿಗೆ ಕೇಳಿಸಿದೆ. 

Tap to resize

Latest Videos

undefined

ಶಿವಮೊಗ್ಗ: ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಜೀವ ತೆತ್ತ ಮೆಸ್ಕಾಂ ನೌಕರ, ಎಕ್ಸ್‌ಕ್ಲೂಸಿವ್‌ ಆಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯ!

ಕೂಡಲೇ ಎಚ್ಚೆತ್ತ ನೆರೆ ಮನೆಯವರು ಹನುಮಂತ ಅವರ ಮನೆಯ ಬಾಗಿಲು ಬಡಿದಾಗ ಯಾರು ಬಾಗಿಲು ತೆರೆದಿಲ್ಲ. ಆಗ ಮನೆಯ ಚಾವಣಿಯ ಹಂಚು ತೆಗೆದು ನೋಡಿದಾಗ ವಿಷಯ ತಿಳಿದಿದೆ.

ಚನ್ನಪಟ್ಟಣ: ಚಾಕುವಿನಿಂದ ಇರಿದು ಹಣ ದೋಚಿದ ದುಷ್ಕರ್ಮಿಗಳು!

click me!