Raichur: ತಾಯಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪಿಡಿಒನ ಹತ್ಯೆಗೈದ ಮಗ: ಆರೋಪಿಗಳ ಬಂಧನ

By Govindaraj SFirst Published Oct 9, 2022, 10:18 AM IST
Highlights

ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಹೊರವಲಯದ ಸೀಮೆ ಈರಣ್ಣ ದೇವಸ್ಥಾನದ ಬಳಿ ಕೋಟಾ ಗ್ರಾಮದ ಪಿಡಿಒ ಗಜದಂಡಯ್ಯ (50) ಹತ್ಯೆ ನಡೆದಿತ್ತು. ಎಂದಿನಂತೆ ಬೈಕ್‌ನಲ್ಲಿ ಕೆಲಸಕ್ಕೆ ಹೊರಟ್ಟ ಗಜದಂಡಯ್ಯ ಸ್ವಾಮಿ, ಎಲ್ಲರೊಂದಿಗೂ ಸ್ನೇಹಜೀವಿ ಆಗಿದ್ದ.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು 

ರಾಯಚೂರು (ಅ.09): ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಹೊರವಲಯದ ಸೀಮೆ ಈರಣ್ಣ ದೇವಸ್ಥಾನದ ಬಳಿ ಕೋಟಾ ಗ್ರಾಮದ ಪಿಡಿಒ ಗಜದಂಡಯ್ಯ (50) ಹತ್ಯೆ ನಡೆದಿತ್ತು. ಎಂದಿನಂತೆ ಬೈಕ್‌ನಲ್ಲಿ ಕೆಲಸಕ್ಕೆ ಹೊರಟ್ಟ ಗಜದಂಡಯ್ಯ ಸ್ವಾಮಿ, ಎಲ್ಲರೊಂದಿಗೂ ಸ್ನೇಹಜೀವಿ ಆಗಿದ್ದ. ಹೀಗಾಗಿ ಯಾರೇ ರಸ್ತೆಯಲ್ಲಿ ಕೈ ಮಾಡಿದ್ರೂ ನಿಂತು ಮಾತುಕತೆ ಮಾಡಿ ಹೋಗುವ ವ್ಯಕ್ತಿಯಾಗಿದ್ರು. ಆವತ್ತು ಅಕ್ಟೋಬರ್ 6 ರಂದು ಬೈಕ್‌ನಲ್ಲಿ ಹೋಗುತ್ತಿದ್ದ ಪಿಡಿಒ ಗಜದಂಡಯ್ಯ ಸ್ವಾಮಿಯನ್ನ ಬನ್ನಿ ಕೊಡುವ ನೆಪದಲ್ಲಿ ಆರೋಪಿಗಳು ಗಜದಂಡಯ್ಯ ಸ್ವಾಮಿಗೆ ನಿಲ್ಲಿಸಿದ್ದಾರೆ. ಪರಿಚಯದವರು ಎಂಬ ಕಾರಣಕ್ಕೆ ಬೈಕ್ ನಿಲ್ಲಿಸಿ ತಲೆಗೆ ಹಾಕಿದ ಹೆಲ್ಮೆಟ್ ತೆಗೆದು ಬೈಕ್ ಮೇಲೆ ಇಟ್ಟು ಚಪ್ಪಲಿ ಬಿಟ್ಟು ಬನ್ನಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರೂ ಆರೋಪಿಗಳು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದರು.

ಬನ್ನಿ ಕೊಟ್ಟು ಪ್ರಾಣ ತೆಗೆದ ಕೊಲೆಗಡುಕರು!: ದಸರಾ ಹಬ್ಬದ ಪ್ರಯುಕ್ತ ಮನೆ- ಮನೆಗೆ ತೆರಳಿ ಬನ್ನಿ ಕೊಡುವುದು ದಸರಾ ಹಬ್ಬದ ಶುಭಾಶಯ ಹೇಳುವುದು ಕಾಮಾನ್. ಇದೇ ಒಳ್ಳೆಯ ಸಮಯ ಅಂತ ಪ್ಲಾನ್ ಮಾಡಿದ ಕಿರಾತಕ ಕೊಲೆಗಡುಕರು. ಎಂದಿನಂತೆ ದೇವರಬೂಪುರ ಗ್ರಾಮದಿಂದ ಕೋಟಾ ಗ್ರಾ.ಪಂ.ಗೆ ಹೋಗುತ್ತಿರುವ ಪಿಡಿಒ ಗಜದಂಡಯ್ಯ ಸ್ವಾಮಿಗೆ ಲಿಂಗಸೂಗೂರು ಹೊರವಲಯದ ಸೀಮೆ ಈರಣ್ಣ ದೇವಸ್ಥಾನದ ಬಳಿ ನಿಲ್ಲಿಸಿದ್ದಾರೆ. ಹುಡುಗರು ಬನ್ನಿ ಕೊಡಲು ಬರುತ್ತಿದ್ದಾರೆ ಎಂದ ಭಾವಿಸಿ ಪಿಡಿಒ ಗಜದಂಡಯ್ಯ ಸ್ವಾಮಿ ಸಂಪ್ರದಾಯದಂತೆ ಚಪ್ಪಲಿ ಬಿಟ್ಟು ನಿಂತಿದ್ದಾರೆ. ಇತ್ತ ಕೊಲೆಗಡುಕರು ಸಹ ಚಪ್ಪಲಿ ಬಿಟ್ಟು ಬನ್ನಿ ಕೊಟ್ಟು ಕಾಲಿಗೆ ನಮಸ್ಕಾರ ಮಾಡುವ ನೆಪದಲ್ಲಿ  ಕೊಲೆ ಮಾಡಿ ಶವವನ್ನು ರಸ್ತೆ ಬದಿಯಲ್ಲಿ ಬಿಸಾಕಿ ಪರಾರಿಯಾಗಿದ್ರು. 

Raichur: ಸತತ ಮಳೆಯಿಂದಾಗಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ ‌ಮೂವರು ಸಾವು

ಈ ಸುದ್ದಿ ತಿಳಿದ ಸ್ಥಳಕ್ಕೆ ಆಗಮಿಸಿದ ಲಿಂಗಸೂಗೂರು ಪೊಲೀಸರು ಕೆಲಕಾಲ ಶಾಕ್ ಆಗಿದ್ರು. ಏಕೆಂದರೆ ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಅದರ‌ ಮೇಲೆ ಹೆಲ್ಮೆಟ್ ಇಟ್ಟು ಚಪ್ಪಲಿ ಬಿಟ್ಟಿರುವ ಪಿಡಿಓ ಶವ ರಸ್ತೆ ಪಕ್ಕದಲ್ಲಿ ಪತ್ತೆಯಾಗಿತ್ತು. ಘಟನೆ ಹಿನ್ನೆಲೆ ಲಿಂಗಸುಗೂರು ಪೊಲೀಸ್ ಕೊಲೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆಗೆ ಮುಂದಾಗಿದ್ರು. ಇನ್ನೂ ಕೊಲೆಯಾದ ಪಿಡಿಒ ಗ್ರಾಮ  ಪಂಚಾಯತ್ ವ್ಯಾಪ್ತಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದ,  ಪಿಡಿಓ ಕೊಲೆ ಇಡೀ ಕೋಟಾ ಪಂಚಾಯತಿಯನ್ನೇ ಬೆಚ್ಚಿಬೀಳಿಸಿತ್ತು. ಜನ ಕೂಡ ಧಿಗ್ಬ್ರಾಂತಿಯಾಗಿ ಯಾರು ಪಿಡಿಒನನ್ನ ನಡುರಸ್ತೆಯಲ್ಲಿ ಹತ್ಯೆ ಮಾಡಿದ್ರು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಯಚೂರು ಎಸ್ ಪಿ ನಿಖಿಲ್ .ಬಿ. ಒಂದು ತಂಡ ರಚನೆ ಮಾಡಿ ತನಿಖೆ ಮಾಡಲು ಸೂಚನೆ ನೀಡಲಾಗಿತ್ತು. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಕೊಲೆಯಾದ ಪಿಡಿಒ ಗಜದಂಡಯ್ಯ ಸ್ವಾಮಿಯ ಒಂದು ವಿಕ್‌ನೆಸ್ ಗೊತ್ತಾಗಿತ್ತು. ಅದೇ ನೋಡಿ ಪಿಡಿಒನ ಅನೈತಿಕ ಸಂಬಂಧ.

ತಾಯಿ ಅನೈತಿಕ ಸಂಬಂಧಕ್ಕೆ ಫುಲ್ ಸ್ಟಾಪ್ ಹಾಕಲು ಹೋಗಿ ಕೊಲೆಗಡುಕನಾದ ಮಗ!: ರಾಯಚೂರು ಜಿಲ್ಲೆಯ ಲಿಂಗಸುಗೂರು ಹೊರವಲಯದಲ್ಲಿ ನಡೆದಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೊಲೆ ಪ್ರಕರಣದ ಆರೋಪಿಗಳು ಕೊನೆಗೂ ಸೆರೆಸಿಕ್ಕಿದ್ದಾರೆ. ಕೋಟಾ ಗ್ರಾ.ಪಂ. ಪಿಡಿಒ ಲಿಂಗಸೂಗೂರು ತಾಲೂಕಿನ ದೇವರ ಬೂಪುರ ಗ್ರಾಮದವರು. 50 ವರ್ಷದ ಗಜದಂಡಯ್ಯಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನ ಲಿಂಗಸುಗೂರು ಪೊಲೀಸರು 24 ಗಂಟೆಯಲ್ಲಿ ಬಂಧಿಸಿದ್ದಾರೆ. ಅಕ್ಟೋಬರ್ 6 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವಿಜಯದಶಮಿ ಹಿನ್ನೆಲೆ ಬನ್ನಿ ಕೊಡುವ ನೆಪದಲ್ಲಿ ಬೈಕ್ ನಿಲ್ಲಿಸಿ ಕೊಲೆ ಮಾಡಲಾಗಿತ್ತು. ದೇವರ ಭೂಪೂರು ಗ್ರಾಮದ ಶೀಲವಂತ ಹಾಗೂ ಶೀಲವಂತ ಬಂಧಿತ ಕೊಲೆ ಆರೋಪಿಗಳು. ಒಂದೇ ಹೆಸರಿನ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. 

 ಸಿಂಧನೂರು 'ಕೈ' ಟಿಕೆಟ್ ಗಾಗಿ ತೆರೆಮರೆಯಲ್ಲಿ ಭಾರೀ ಕಸರತ್ತು

ಪ್ರಕರಣದ ಮೊದಲ ಆರೋಪಿಯ ತಾಯಿಯೊಂದಿಗೆ ಪಿಡಿಓ ಅನೈತಿಕ ಸಂಬಂಧ ಹೊಂದಿದ್ದ, ಈ ಅನೈತಿಕ ಸಂಬಂಧದಿಂದ ಆರೋಪಿ ಶೀಲವಂತ ಬೇಸತ್ತು ಹೋಗಿದ್ದ, ಹಲವು ಬಾರಿ ತನ್ನ ತಾಯಿಗೂ ಹಾಗೂ ಪಿಡಿಒಗೂ ವಾರ್ನಿಂಗ್ ‌ಸಹ ನೀಡಿದನಂತೆ, ಆದ್ರೂ ಅವರಿಬ್ಬರ ಅನೈತಿಕ ‌ಸಂಬಂಧ ಹಾಗೇ ಮುಂದುವರೆದಿತ್ತು. ಇದರಿಂದಾಗಿ ಇನ್ನೋರ್ವ ಆರೋಪಿ ಶೀಲವಂತ ಗ್ರಾಮ ಪಂಚಾಯತ್‌ನಲ್ಲಿ ವಾಟರಮನ್ ಆಗಿ ಕೆಲಸ ಮಾಡುತ್ತಿದ್ದು, ಆತನ ಸಹಕಾರ ಪಡೆದು ಹತ್ಯೆ ಮಾಡಿದ್ದಾಗಿ ಆರೋಪಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಹೀಗಾಗಿ ‌ಪೊಲೀಸರು ಇಬ್ಬರೂ ಆರೋಪಿಗಳನ್ನ ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ. ಒಟ್ಟಿನಲ್ಲಿ ಲಿಂಗಸೂಗೂರು ಪೊಲೀಸರು ಕೊಲೆ ನಡೆದ 24 ಗಂಟೆಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಿಂಗಸೂಗೂರು ಪೊಲೀಸರ ಕಾರ್ಯಕ್ಕೆ ರಾಯಚೂರು ಎಸ್ ಪಿ ನಿಖಿಲ್. ಬಿ. ಮೆಚ್ಚುಗೆ ವ್ಯಕ್ತಪಡಿದ್ದಾರೆ.

click me!