* ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಕಿರುಕುಳ ನೀಡಲಾಗುತ್ತಿದೆ
* ಅಶ್ಲೀಲ ಚಿತ್ರ ಎಡಿಟ್, ಕೊಲೆ ಮಾಡಿದಂತೆ ಬಿಂಬಿಸುವ ಯತ್ನ
* ಸಮಸ್ಯೆಗೆ ಸಿಲುಕದಿರುವುದು ಹೇಗೆ?
ಮಯೂರ ಹೆಗಡೆ
ಹುಬ್ಬಳ್ಳಿ(ಮಾ.30): ನಮ್ಮ ಮನೆಯ ಹೆಣ್ಣುಮಕ್ಕಳ ಮರ್ಯಾದೆ ಹೋಗಬಾರದು ಎಂದು ಅವರು ಕೇಳಿದಷ್ಟು ಹಣ ತುಂಬುತ್ತಿದ್ದೆ. ಒಂದು ಹಂತದಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಂದಿಟ್ಟಿದ್ದರು...... ಇದು ಆನ್‌ಲೈನ್ ಆ್ಯಪ್‌ನಲ್ಲಿ(Online App) ಸಾಲ ತೆಗೆದುಕೊಂಡು ಕಿರುಕುಳಕ್ಕೆ(Harassment) ಒಳಗಾದ ನಗರದ ಯುವಕನ ಮಾತು. ಇದೀಗ ಸೈಬರ್ ಕ್ರೈಮ್‌ನ ಮಗದೊಂದು ಸ್ವರೂಪ ನಗರದಲ್ಲಿ ಯುವಕ, ಯುವತಿಯರನ್ನು ಟಾರ್ಗೇಟ್ ಮಾಡಿಕೊಂಡಿದೆ.
undefined
ಆನ್‌ಲೈನ್ ಸಾಲ(Loan) ನೀಡುವ ಕೆಲ ಆ್ಯಪ್‌ಗಳು ಪೂರ್ಣ ಮರುಪಾವತಿ ಮಾಡಿದರೂ ಬೆದರಿಕೆ ಒಡ್ಡುತ್ತಿವೆ. ಅಶ್ಲೀಲ ಚಿತ್ರಗಳಿಗೆ ಫೋಟೊ ಎಡಿಟ್ ಮಾಡುವುದಾಗಿ ಬೆದರಿಸುತ್ತಿವೆ. ಕಳೆದ ಒಂದು ತಿಂಗಳಲ್ಲಿ ಇಲ್ಲಿನ ಸಿಇಎನ್ ಪೊಲೀಸ್(CAN Police) ಠಾಣೆಯಲ್ಲಿ ಇಂತಹ ನಾಲ್ಕಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
Bengaluru Crime: ಬಿಟ್ ಕಾಯಿನ್ ಹೂಡಿಕೆ ನೆಪದಲ್ಲಿ ಧೋಖಾ..!
ಕನ್ನಡಪ್ರಭ ಜತೆ ಮಾತನಾಡಿದ ನಗರದ ಯುವಕ, ಈ ಆ್ಯಪ್‌ಗಳು 5 ರಿಂದ 10 ಸಾವಿರ ವರೆಗೆ ಸಾಲ ನೀಡುತ್ತಿವೆ. ವಾರಕ್ಕೆ 3 ಸಾವಿರನಷ್ಟು ಅತ್ಯಧಿಕ ಬಡ್ಡಿ(Interest) ವಿಧಿಸುತ್ತಿವೆ. ನಿಗದಿತ ವೇಳೆಗೆ ಹಣ ತುಂಬಿದರೂ ಮತ್ತಷ್ಟುಹಣಕ್ಕಾಗಿ ಬೇಡಿಕೆ ಇಡುತ್ತಿವೆ. ನನ್ನ ಮೊಬೈಲ್‌ನಲ್ಲಿದ್ದ ಸಂಬಂಧಿ ಮಹಿಳೆಯರ ಫೋಟೋಗೆ ನನ್ನ ಪೋಟೋ ಸೇರಿಸಿ ಅಶ್ಲೀಲ ಚಿತ್ರ ರೂಪಿಸಿದ್ದರು. ಅದನ್ನು ಸ್ನೇಹಿತರಿಗೆ ಕಳಿಸಿದ್ದರು. ಮನೆ ಹೆಂಗಸರ ಮರ್ಯಾದೆ ಹೋಗಬಾರದೆಂದು ಕೇಳಿದಷ್ಟು ಹಣ(Money) ಕೊಡುತ್ತಿದ್ದೆ ಎಂದು ತಿಳಿಸಿದ.
ಆ ಬಳಿಕ ಕೊಲೆ ಆರೋಪಿ ಎಂದು ಬಿಂಬಿಸುವ ಫೋಟೋ ಕ್ರಿಯೆಟ್ ಮಾಡಿದ್ದರು. ಸಾಲ ತೆಗೆದಕೊಂಡ ಬಗ್ಗೆ ಮನೆಯಲ್ಲಿ ಮೊದಲು ಹೇಳಿರಲಿಲ್ಲ. ಯಾವಾಗ ನನಗೆ ಬ್ಲಾಕ್‌ಮೇಲ್(Blackmail) ಮಾಡಲು ಶುರು ಮಾಡಿದರೊ ಆಗ ನೇಣು ಹಾಕಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ, ಧೈರ್ಯ ಮಾಡಿ ಮನೆಯಲ್ಲಿ ಹೇಳಿದೆ. ಮನೆಯವರು ಕೊಟ್ಟದುಡ್ಡನ್ನು ತುಂಬಿದ ಬಳಿಕವೂ ಬೆದರಿಕೆ ಹಾಕುತ್ತಿದ್ದರು ಎಂದು ನೊಂದ ಯುವಕ ಹೇಳುತ್ತಾನೆ.
ಮಹಿಳೆಯೊಬ್ಬರು(Woman) ಮಾತನಾಡಿ, ನಾನು ಯಾವುದೇ ಲೋನ್ ತೆಗೆದುಕೊಂಡಿರಲಿಲ್ಲ. ಕೇವಲ ಒಂದು ವೆಬ್‌ಸೈಟ್‌ಗೆ ಹೋಗಿದ್ದೆ ಅಷ್ಟೆ. ಮರುದಿನದಿಂದಲೆ ವಾಟ್ಸ್‌ಆ್ಯಪ್ ಕರೆ ಮಾಡಿ ಲೋನ್ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಆರಂಭಿಸಿದರು. ಉತ್ತರಪ್ರದೇಶ ಸೇರಿ ಇತರೆಡೆಯಿಂದ ಕರೆ ಮಾಡಿ ಅಶ್ಲೀಲವಾಗಿ ಬಯ್ಯಲು ಆರಂಭಿಸಿದರು. ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.
ಈ ಕುರಿತು ಮಾತನಾಡಿದ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಎಸ್. ಹೂಗಾರ, ಜಾಗೃತಿ ಮೂಡಿಸಿದ ಬಳಿಕ ಆನ್‌ಲೈನ್ ಲೋನ್ ಆ್ಯಪ್ ಕಿರುಕುಳದ ಕುರಿತು ಪ್ರಕರಣಗಳು ದಾಖಲಾಗುತ್ತಿವೆ. ಕೆಲ ನಂಬರ್‌ಗಳನ್ನು ಟ್ರೇಸ್ ಮಾಡಿದಾಗ ಪಶ್ಚಿಮ ಬಂಗಾಳ, ರಾಜಸ್ಥಾನ ಲೊಕೇಶನ್ ತೋರಿಸಿದೆ. ನಾವು ಮೊದಲು ವಂಚನೆಗೆ ಒಳಗಾದವರ ಹಣವನ್ನು ಫ್ರೀಜ್ ಮಾಡಿ ರಿಕವರಿ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆರೋಪಿಗಳ ಹಿಂದೆ ಹೋದರೆ ಅವರು ಲೊಕೇಶನ್‌ನಲ್ಲಿ ಇರುವುದಿಲ್ಲ. ಮೊಬೈಲ್ ಸಂಖ್ಯೆ ಯಾರಾರಯರದ್ದೊ ಹೆಸರಲ್ಲಿ ನೋಂದಣಿ ಆಗಿರುತ್ತದೆ ಎಂದರು.
ಯಾವ್ಯಾವ ಆ್ಯಪ್?
ರೋಪೇಲೋ, ಗೋಲ್ಡ್ ಕ್ಯಾಶ್, ಲೋನ್ ಕ್ಯೂಬ್, ಕ್ಲಿಯರ್ ಲೋನ್, ಕ್ಯಾಶ್ ಪಾರ್ಕ್, ಲೆಂಡ್ ಮೇಲ್, ಸ್ಮಾಲ್ ಒನ್, ಕ್ಯಾಶ್ ಬಾಸ್, ಈಡಿ ಕ್ರೆಡಿಟ್, ಗೋ ಲೋನ್, ರುಪೇಸ್ಟಾರ್ಚ್ ಆ್ಯಪ್‌ನಿಂದ ಸಾಲ ಪಡೆದವರು ಈ ಸಮಸ್ಯೆ ಎದುರಿಸಿದ್ದಾರೆ.
Bengaluru Crime: ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಸೋಗಲ್ಲಿ ಆನ್‌ಲೈನ್ ಧೋಖಾ..!
ಆದರೆ, ಈ ಆ್ಯಪ್‌ಗಳನ್ನು ರೂಪಿಸಿದವರೆ ಸಾಲ ಪಡೆದವರಿಗೆ ತೊಂದರೆ ನೀಡುತ್ತಿದ್ದಾರಾ? ಅಥವಾ ಇಲ್ಲಿ ದಾಖಲಾಗುವ ದತ್ತಾಂಶಗಳು ಸೋರಿಕೆಯಾಗಿ ದುಷ್ಕರ್ಮಿಗಳಿಗೆ ಸಿಕ್ಕಿದ ಬಳಿಕ ಅವರು ತೊಂದರೆ ನೀಡುತ್ತಾರಾ ಎಂಬುದು ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ.
ದಿಕ್ಕುತಪ್ಪಿಸಿ ತೊಂದರೆ
ಸಾಲ ಮರುಪಾವತಿ ವೇಳೆ ಬಳಸಿದ ಯುಪಿಐ(UPI) ಐಡಿ ತಮ್ಮದಲ್ಲ ಎಂದು ಆ್ಯಪ್‌ನವರು ತಗಾದೆ ತೆಗೆಯುತ್ತಾರೆ. ನೀವು ನಮ್ಮ ಯುಪಿಐ ಐಡಿಗೆ ಸಾಲದ ಮೊತ್ತ ತುಂಬಿಲ್ಲ. ಬೇರಾರಿಗೊ ಕಳಿಸಿದ್ದೀರಿ. ನಮಗೆ ಹಣ ಪಾವತಿಸಿ ಎಂದು ಕರೆ ಮಾಡಿ ಪೀಡಿಸಲು ಆರಂಭಿಸುತ್ತಾರೆ. ಅವರು ನೀಡಿದ ಹಣ ತುಂಬಿದರೆ ಮತ್ತೊಬ್ಬರು ಕರೆ ಮಾಡಿ ತಾವು ನೀಡುವ ಯುಪಿಐ ಐಡಿಗೆ ಹಣ ತುಂಬುವಂತೆ ಕಾಡಿಸುತ್ತಾರೆ.
ಸಮಸ್ಯೆಗೆ ಸಿಲುಕದಿರುವುದು ಹೇಗೆ?
ಯಾವ್ಯಾವುದೊ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಡಿ. ಅವು ಪರ್ಸನಲ್ ಇನ್ಫಾರ್ಮೇಶನ್ ಆ್ಯಕ್ಸಸ್ ಕೇಳಿದಾಗ ಪರ್ಮಿಶನ್ ನೀಡಲೇಬೇಡಿ. ಇದರಿಂದ ನಿಮ್ಮ ಕಾಂಟಾಕ್ಟ್ ನಂಬರ್, ಗ್ಯಾಲರಿ ಅವರಿಗೆ ಸುಲಭವಾಗಿ ಸಿಗುತ್ತದೆ ಎನ್ನುತ್ತಾರೆ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ಹೂಗಾರ