Honour Killing: ಅಂತರ್ಜಾತಿ ಯುವಕನ ಜತೆ ಪ್ರೀತಿ: ಮಗಳನ್ನೇ ಕೊಂದ ತಾಯಿ..!

By BK AshwinFirst Published Nov 24, 2022, 5:04 PM IST
Highlights

ಅರುಣಾ ಕೊಯಮತ್ತೂರಿನಲ್ಲಿ ನರ್ಸಿಂಗ್‌ ಅಧ್ಯಯನ ಮಾಡುತ್ತಿದ್ದು, ತಾನು ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಅರುಣಾ ಥೇವರ್‌ ಸಮುದಾಯದವರಾದರೆ, ಆಕೆ ಪ್ರೀತಿಸುತ್ತಿದ್ದ ವ್ಯಕ್ತಿ ನಡಾರ್‌ ಸಮುದಾಯದವರು ಎಂದು ತಿಳಿದುಬಂದಿದೆ.  

ತಮಿಳುನಾಡಿನಲ್ಲಿ (Tamil Nadu) ಮತ್ತೊಂದು ಮರ್ಯಾದಾ ಹತ್ಯೆ (Honour Killing) ಪ್ರಕರಣ ನಡೆದಿರುವ ಆರೋಪ ಕೇಳಿಬಂದಿದೆ. ಬೇರೆ ಜಾತಿಯ (Different Caste) ಯುವಕನನ್ನು ಪ್ರೀತಿಸುತ್ತಿದ್ದಕ್ಕೆ 19 ವರ್ಷದ ಮಗಳನ್ನು ತಾಯಿಯೇ (Mother) ಕೊಲೆ (Murder) ಮಾಡಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ. ಇನ್ನು, ಕೊಲೆ ಮಾಡಿದ ಬಳಿಕ ತಾಯಿ ಆತ್ಮಹತ್ಯೆ (Suicide) ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದೂ ಹೇಳಲಾಗಿದ್ದು, ಆದರೆ ಸ್ಥಳಿಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದುಬಂದಿದೆ. 
ತಮಿಳುನಾಡಿನ ಸಿವಲ್ಪೇರಿ ಗ್ರಾಮದ ಆರುಮುಗ ಕನಿ ಎನ್ನುವ ಮಹಿಳೆ ಈ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಆಕೆ ಚೆನ್ನೈನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪಿಚೈ ಎಂಬಾತನನ್ನು ಮದುವೆಯಾಗಿದ್ದರು. ಈ ದಂಪತಿಗೆ 19 ವರ್ಷದ ಮಗಳು ಅಂದ್ರೆ ಮೃತ ಸಂತ್ರಸ್ಥೆಯನ್ನು ಅರುಣಾ ಎಂದು ಗುರುತಿಸಲಾಗಿದೆ.  
 
ಅರುಣಾ ಕೊಯಮತ್ತೂರಿನಲ್ಲಿ ನರ್ಸಿಂಗ್‌ ಅಧ್ಯಯನ ಮಾಡುತ್ತಿದ್ದು, ತಾನು ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಅರುಣಾ ಥೇವರ್‌ ಸಮುದಾಯದವರಾದರೆ, ಆಕೆ ಪ್ರೀತಿಸುತ್ತಿದ್ದ ವ್ಯಕ್ತಿ ನಡಾರ್‌ ಸಮುದಾಯದವರು ಎಂದು ತಿಳಿದುಬಂದಿದೆ.  

ಇದನ್ನು ಓದಿ: 'ಕುರುಬನ ರಾಣಿ' ಆಗ್ತೀನಿ ಅಂದ ಮಗಳ ಕಥೆಯನ್ನೇ ಮುಗಿಸಿದ ಅಪ್ಪ!
 
ಈ ಸಂಬಂಧ ಮಾತನಾಡುವುದಾಗಿ ಅರುಣಾಗೆ ಹೇಳಿದ ತಾಯಿ ಆರುಮುಗ ಕನಿ ಮನೆಗೆ ಕರೆಸಿಕೊಂಡಿದ್ದಳು. ಆದರೆ, ಅರುಣಾ ಮನೆಗೆ ಹೋದ ಬಳಿಕ ತನ್ನನ್ನು ಮದುವೆಯಾಗಲು ಬೇರೆ ಹುಡುಗನನ್ನು ಗೊತ್ತುಪಡಿಸಿದ್ದಾರೆ. ನಮ್ಮ ಜಾತಿಗೆ ಸೇರಿದ ಹುಡುಗನೊಬ್ಬನ ಜತೆ ಮದುವೆ ಮಾಡಲು ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿ ಆಘಾತಕ್ಕೊಳಗಾಗಿದ್ದಾಳೆ. 
 
ಹುಡುಗಿಯ ಮನೆಗೆ ನವೆಂಬರ್‌ 23 ಅಂದರೆ ಬುಧವಾರವೇ ಹುಡುಗ ಬರುವಂತೆ ತಾಯಿ ಪ್ಲ್ಯಾನ್‌ ಮಾಡಿದ್ದರು. ಆದರೆ, ಅರುಣಾ ಆ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ್ದು, ಭೇಟಿ ಮಾಡಲು ಸಹ ನಿರಾಕರಿಸಿದ್ದಾಳೆ. ಹಾಗೂ, ಒಂದು ವೇಳೆ ಒತ್ತಾಯ ಮಾಡಿದರೆ, ನಾನು ಈಗಾಗಲೇ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸೋದಾಗಿ ತಾಯಿಗೆ ಬೆದರಿಕೆ ಹಾಕಿದ್ದಾಳೆ. 

ಇದನ್ನೂ ಓದಿ: ಛೇ ಇದೆಂಥಾ ಮೋಸ: ಮದುವೆ ಮಾಡಿಸುವ ನೆಪದಲ್ಲಿ ಕರೆತಂದು ಪ್ರೇಮಿಗಳ ಕೊಲೆ

 
ಇದರಿಂದ ಸಿಟ್ಟಿಗೆದ್ದ ತಾಯಿ, ಸ್ಕಾರ್ಫ್‌ನಿಂದ ಅರುಣಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಾನು ನನ್ನ ಮಗಳನ್ನು ಕೊಲೆ ಮಾಡಿದ್ದೇನೆ ಎಂದು ಅರಿವಾದ ನಂತರ, ಆಕೆ ಹೇರ್‌ ಡೈ ಪುಡಿಯನ್ನು ಸೇವಿಸಿ ಆತಹ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದೂ ತಿಳಿದುಬಂದಿದೆ. ಆದರೆ, ನೆರೆ ಮನೆಯವರು ತಾಯಿಯನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರುಮುಗ ಕನಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಈ ಪ್ರಕರಣ ಸಂಬಂಧ ಸಿವಲ್ಪೇರಿ ಪೊಲೀಸರು ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
 
ಸದ್ಯ, ತಾಯಿ ಈ ಪ್ರಕರಣದ ಬಗ್ಗೆ ಏನೂ ಬಾಯಿ ಬಿಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹಾಗೂ, ಇದು ಮರ್ಯಾದಾ ಹತ್ಯೆ ಪ್ರಕರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದೂ ತಿಳಿಸಿದ್ದಾರೆ. 

ಇದನ್ನೂ ಓದಿ: UP Honour Killing: ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ

click me!