15ರ ಬಾಲಕಿ ಮೇಲೆ 33 ಜನರಿಂದ ರೇಪ್‌: ಪ್ರಿಯಕರ, ಆತನ ಸ್ನೇಹಿತರ ಕೃತ್ಯ!

By Kannadaprabha NewsFirst Published Sep 24, 2021, 9:15 AM IST
Highlights

* ಮಹಾರಾಷ್ಟ್ರದ ಥಾಣೆಯಲ್ಲೊಂದು ಆಘಾತಕಾರಿ ಘಟನೆ ಬೆಳಕಿಗೆ

* 15ರ ಬಾಲಕಿ ಮೇಲೆ 33 ಜನರಿಂದ ರೇಪ್‌

* ಕಳೆದ 8 ತಿಂಗಳ ಅವಧಿಯಲ್ಲಿ ಪ್ರಿಯಕರ, ಆತನ ಸ್ನೇಹಿತರ ಕೃತ್ಯ

* ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರಿಂದ 24 ಜನರ ಸೆರೆ

ಥಾಣೆ(ಸೆ.24): 15 ವರ್ಷದ ಬಾಲಕಿಯ ಮೇಲೆ 33 ಕಾಮಾಂಧರ ಗುಂಪೊಂದು ಕಳೆದ 8 ತಿಂಗಳ ಅವಧಿಯಲ್ಲಿ ಸರಣಿ ಅತ್ಯಾಚಾರ(Rape) ನಡೆಸಿದ ಅತ್ಯಂತ ಹೇಯ ಘಟನೆಯೊಂದು ಮಹಾರಾಷ್ಟ್ರದ ಥಾಣೆ(Thane)ಯಲ್ಲಿ ನಡೆದಿದೆ. ಈ ಸಂಬಂಧ ಬಾಲಕಿ ಬುಧವಾರ ದೂರು ನೀಡಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ 33 ಜನರ ವಿರುದ್ಧ ಪೋಕ್ಸೋ(POCSO) ಸೇರಿದಂತೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು 24 ಜನರನ್ನು ಬಂಧಿಸಿದ್ದಾರೆ.

ಪ್ರಕರಣ ಹಿನ್ನೆಲೆ:

15 ವರ್ಷದ ಬಾಲಕಿ ಯುವಕನೊಬ್ಬನನ್ನು ಪ್ರೇಮಿಸುತ್ತಿದ್ದಳು. ಕಳೆದ ಜನವರಿಯಲ್ಲಿ ಬಾಲಕಿ ಮೇಲೆ ಪ್ರಿಯಕರ ಅತ್ಯಾಚಾರ ನಡೆಸಿ, ಘಟನೆಯನ್ನು ಚಿತ್ರೀಕರಿಸಿದ್ದ. ಬಳಿಕ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡಿ ಹಲವು ಬಾರಿ ಅತ್ಯಾಚಾರ(Rape) ನಡೆಸಿದ್ದ. ಈ ವಿಷಯ ಆತನ ಸ್ನೇಹಿತರಿಗೆ ತಿಳಿದು ಅವರೂ ಬಾಲಕಿಗೆ ವಿಡಿಯೋ ತೋರಿಸಿ ಬ್ಲಾಕ್‌ಮೇಲ್‌ ಮಾಡಿ ತಾವೂ ಸರಣಿ ಅತ್ಯಾಚಾರ ನಡೆಸಿದ್ದರು. ಥಾಣೆ ಸೇರಿದಂತೆ ನೆರೆಯ ದೊಂಬಿವಿಲಿ, ಬದ್ಲಾಪುರ, ಮುರ್ಬಾದ್‌ ರಬಾಲೆಯಲ್ಲೂ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಎಲ್ಲಾ ಘಟನೆಗಳು ಕಳೆದ ಜ.29ರಿಂದ ಸೆ.22ರ ಅವಧಿಯಲ್ಲಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬಾಲಕಿ ಈ ವಿಷಯವನ್ನು ತನ್ನ ಸಂಬಂಧಿಕರ ಬಳಿ ತಿಳಿಸಿದ್ದು, ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ತದನಂತರದಲ್ಲಿ ಆಕೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ದೂರು ದಾಖಲಾದ ಬೆನ್ನಲ್ಲೇ ಪೊಲೀಸರು 24 ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಎಲ್ಲರನ್ನೂ ಸೆ.29ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ.

ಈ ಘಟನೆ ಬಗ್ಗೆ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಾಗಿದೆ ಎಂದು ಆರೋಪಿಸಿರುವ ವಿಪಕ್ಷ ಬಿಜೆಪಿ, ಕಾಮಾಂಧರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

ಏನಾಗಿತ್ತು?

* ಸಂತ್ರಸ್ತೆ ಮೇಲೆ ಆಕೆಯ ಪ್ರಿಯಕರ ಕಳೆದ ಜನವರಿಯಲ್ಲಿ ರೇಪ್‌ ಮಾಡಿದ್ದ

* ರೇಪ್‌ ಚಿತ್ರೀಕರಿಸಿದ್ದ ಆತ, ಅದನ್ನು ಬಳಸಿ ಆಕೆಯ ಬ್ಲಾಕ್‌ಮೇಲ್‌ ಮಾಡುತ್ತಿದ್ದ

* ಈ ವಿಡಿಯೋ ಬಳಸಿ ಆತನ ಸ್ನೇಹಿತರೂ ಆಕೆಯ ಮೇಲೆ ರೇಪ್‌ ಮಾಡುತ್ತಿದ್ದರು

* ಇತ್ತೀಚೆಗೆ ಬಾಲಕಿ ಸಂಬಂಧಿಕರಿಗೆ ವಿಷಯ ತಿಳಿಸಿದ ಮೇಲೆ ಪ್ರಕರಣ ಬೆಳಕಿಗೆ

click me!