ನಾಯಿ ಬೊಗಳಿದ್ದಕ್ಕೆ ಕೋಪಗೊಂಡು ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದಿರುವ ಘಟನೆ, ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಹರೀಶ್ ರವರು ಸಾಕಿದ್ದ 5 ವರ್ಷದ ನಾಯಿ ರಾಕಿ ಗುಂಡೇಟಿಗೆ ಸಾವನ್ನಪ್ಪಿದೆ
ಬೆಂಗಳೂರು (ಸೆ.18): ನಾಯಿ ಬೊಗಳಿದ್ದಕ್ಕೆ ಕೋಪಗೊಂಡು ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದಿರುವ ಘಟನೆ, ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಹರೀಶ್ ರವರು ಸಾಕಿದ್ದ 5 ವರ್ಷದ ನಾಯಿ ರಾಕಿ ಗುಂಡೇಟಿಗೆ ಸಾವನ್ನಪ್ಪಿದೆ, ಮುಂಗೋಪಿ ಕೃಷ್ಣಪ್ಪ ಬಂದೂಕಿಗೆ ಮೂಕ ಪ್ರಾಣಿಯೊಂದು ಬಲಿಯಾಗಿದೆ. ಹೌದು ಹರೀಶ್‌ಗೆ ತಮ್ಮ ಸಹೋದರಿ ಪ್ರೀತಿಯಿಂದ ನೀಡಿದ್ದ ಶ್ವಾನ. ರಾಕಿಯನ್ನ ಬಹಳ ಮುದ್ದಿನಿಂದ ಸಾಕಿದ್ರು. ಇವತ್ತಿನವರೆಗೂ ಯಾರ ತಂಟೆಗೂ ಹೋಗಿರಲಿಲ್ಲ ಮತ್ತು ಯಾರಿಗೂ ಕಚ್ಚಿರಲಿಲ್ಲ,
ಮಂಗಳೂರಿನಲ್ಲಿ ಬೃಹತ್ ಸ್ಫೋಟಕ ದಾಸ್ತಾನು : ಸುಳಿವು ನೀಡಿದ ನಾಯಿ ಹತ್ಯೆ
ನಾಯಿಯ ಮೂಕ ಪ್ರೀತಿಗೆ ಗ್ರಾಮಸ್ಥರು ಸಹ ಮನಸೋತ್ತಿದ್ದರು. ಗ್ರಾಮದಲ್ಲಿ ಹಂದಿಸಾಕಣೆಕೆ ಮಾಡುತ್ತಿದ್ದ ಕೃಷ್ಣಪ್ಪ ಸಹ ಏಳೆಂಟು ನಾಯಿ ಸಾಕಿದ್ದಾನೆ, ಆದರೆ ಇಂದು ರಾಕಿ ನಾಯಿ ತನ್ನನ್ನು ನೋಡಿ ಬೊಗಳಿತ್ತೆಂದು ಹಂದಿ ಬೇಟೆಗೆ ಬಳಸುವ ನಾಡಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ತಪ್ಪಿಸಿಕೊಂಡು ಓಡಿಹೋದ ನಾಯಿಯನ್ನ ರಾಗಿ ಹೊಲದಲ್ಲಿ ಅಟ್ಟಾಡಿಸಿಕೊಂಡು ಶೂಟ್ ಮಾಡಿದ್ದಾನೆ. ಏಳೆಂಟು ಗುಂಡೇಟು ತಿಂದ ರಾಕಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಕೃಷ್ಣಪ್ಪನ ಬಳಿ ಎರಡು ಮೂರು ಬಂದೂಕುಗಳಿವೆ, ಆದರೆ ಯಾವ ಬಂದೂಕಿಗೆ ಲೈಸೆನ್ಸ್ ಇಲ್ಲ, ನಾಯಿ ಕೊಂದಿದ್ಯಾಕೆಂದು ಕೇಳಲು ಹೋದ್ರೆ ದರ್ಪದ ಮಾತನಾಡಿದ್ದಾನೆ. ಕೊನೆಗೆ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ನ ಸಹಾಯವನ್ನ ಹರೀಶ್ ಕೇಳಿದ್ದಾರೆ. ಟ್ರಸ್ಟ್ ನ ಸಹಾಯದಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ನಾಯಿ ಕಚ್ಚಿದಾಗ ತಕ್ಷಣ ಕ್ರಮ ತಗೊಳ್ಳಿ, ಇಲ್ಲಾಂದ್ರೆ ರೇಬೀಸ್ ಬರೋದು ಗ್ಯಾರಂಟಿ !
ದೊಡ್ಡಬಳ್ಳಾಪುರ ಪಶು ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ನಾಯಿಯ ದೇಹದಲ್ಲಿ 7 ರಿಂದ 8 ಗುಂಡುಗಳಿವೆ, ಒಳ ರಕ್ತಸ್ರಾವದಿಂದ ನಾಯಿ ಮೃತಪಟ್ಟಿದೆ ಎಂಬುದು ಪಶುವೈದ್ಯರು ಹೇಳಿಕೆ ನೀಡಿದ್ದಾರೆ.