KGF ಚಿತ್ರದಿಂದ ಪ್ರೇರಿತಗೊಂಡು 4 ಭದ್ರತಾ ಸಿಬ್ಬಂದಿ ಹತ್ಯೆ, ಕೊಲೆಗಾರ ಬಂಧಿಸಿದ ಪೊಲೀಸರಿಗೆ ಶಾಕ್!

By Suvarna NewsFirst Published Sep 2, 2022, 5:45 PM IST
Highlights

ಸರಣಿ ಕೊಲೆ, ಒಂದಲ್ಲ, ಎರಡಲ್ಲ, ನಾಲ್ವರು ಸೆಕ್ಯೂರಿಟಿ ಗಾರ್ಡ್ ಹತ್ಯೆ. ಸರಣಿ ಹತ್ಯೆ ಕುರಿತು ಪೊಲೀಸರಿಗೆ ಅತೀ ದೊಡ್ಡ ಆತಂಕ ಎದುರಾಗಿದ್ದು. ರಕ್ಷಣಾ ವ್ಯವಸ್ಥೆಗೆ ಸವಾಲಾಗಿರುವ ಈ ಹತ್ಯೆ ಹಿಂದೆ ಅಂತಾರಾಷ್ಟ್ರೀಯ ಸಂಚಿನ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿತ್ತು. ಆದರೆ ಸಿಸಿಟಿವಿ ಚಿತ್ರ ಆಧರಿಸಿ ಪೊಲೀಸರು ಕೆಲವೇ ಹೊತ್ತಲ್ಲಿ ಕೊಲೆ ಆರೋಪಿ ಹದಿಹರೆಯದ ಹುಡುಗ ಬಂಧಿಸಿದ್ದಾರೆ. ಈತನ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ

ಸಾಗರ್(ಸೆ.02): ಕೆಲವೇ ಹೊತ್ತಲ್ಲಿ  ನಾಲ್ವರು ಸೆಕ್ಯೂರಿಟಿ ಗಾರ್ಡ್ ಹೆಣ ಬಿದ್ದಿತ್ತು. ಪೊಲೀಸರಿಗೆ ಈ ಸರಣಿ ಹತ್ಯೆ ಹಿಂದೆ ಉಗ್ರರ ಸಂಚು, ಅಂತಾರಾಷ್ಟ್ರೀಯ ಗ್ಯಾಂಗ್‌ ಕೃತ್ಯ ಸೇರಿದಂತೆ ಹಲವು ಅನುಮಾನಗಳು ಪೊಲೀಸರನ್ನು ಕಾಡಿತ್ತು. ಈ ಸರಣಿ ಹತ್ಯೆ ಹಿಂದೆ ಅತೀ ದೊಡ್ಡ ಸಂಚಿನ ಕುರಿತು ಪೊಲೀಸರು ಅನುಮಾನಗೊಂಡಿದ್ದರು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳ ಹದಿ ಹರಿಯದ ಯುವಕನ ಕೃತ್ಯ ಬೆಳಕಿಗೆ ಬಂದಿದೆ. ಆತನ ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ ಪೊಲೀಸರು ಕೆಲವೇ ಹೊತ್ತಲ್ಲಿ 19 ವರ್ಷದ ಆರೋಪಿ ಶಿವಪ್ರಸಾದ್ ಧ್ರುವೆಯನ್ನು ಬಂಧಿಸಿದ್ದಾರೆ. ಕೆಜಿಎಫ್ ಚಿತ್ರದಿಂದ ಪ್ರೇರಿತಗೊಂಡು, ತಾನೂ ಕೂಡ ರಾಕಿ ಬಾಯ್ ರೀತಿ ಗ್ಯಾಂಗ್‌ಸ್ಟರ್ ಆಗಲು ಈ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಹೇಳಿದ್ದಾರೆ. ಇದು ಪೊಲೀಸರಿಗೆ ಮತ್ತಷ್ಟು ಅಚ್ಚರಿ ತಂದಿದೆ. ಈ ಘಟನೆ ನಡೆದಿರುವುದು ಮಧ್ಯ ಪ್ರದೇಶದ ಸಾಗರ್‌ನಲ್ಲಿ.

ಭೋಪಾಲ(Madhya Pradesh Crime) ಸಮೀಪದಲ್ಲಿರವು ಸಾಗರದಲ್ಲಿ ಸೆಕ್ಯೂರಿಟಿ ಗಾರ್ಡ್ ಹತ್ಯೆ ಮಾಡಿರುವ ಮಾಹತಿ ಪೊಲೀಸರಿಗೆ ಬಂದಿದೆ. ತಕ್ಷಣವೆ ಸ್ಥಳಕ್ಕೆ ಧಾವಿಸಿದ ಪೊಲೀಸರು(Police) ಸ್ಥಳ ಪರೀಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ. ಬಳಿಕ ಆರೋಪಿಯನ್ನು ದೃಶ್ಯಗಳ ಮೂಲಕ ಪತ್ತೆ ಹಚ್ಚಿದ್ದಾರೆ. ಬಳಿಕ ಈತನ ಮಾಹಿತಿ ಕಲೆ ಹಾಕಿದ ಪೊಲೀಸರು ಫೋನ್ ನಂಬರ್ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದ ಉಪಾಧ್ಯಕ್ಷರ ಹಣೆಗೆ ಪಿಸ್ತೂಲಿಟ್ಟ ದಾಳಿಕೋರ, ಕೊನೇ ಕ್ಷಣದಲ್ಲಿ ಜಾಮ್‌ ಆದ ಟ್ರಿಗರ್‌, ವಿಡಿಯೋ ವೈರಲ್!

ಬೋಪಾಲದಲ್ಲಿನ ಸೆಕ್ಯೂರಿಟಿ ಗಾರ್ಡ್ ಕೊಲೆ ಕುರಿತು ವಿಚಾರಣೆ ನಡೆಸಿದ ಪೊಲೀಸರಿಗೆ 19 ಹರೆಯಗ ಶಿವಪ್ರಸಾದ್ ಧುವೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಯಶ್ ಅಭಿಯನದ ಬ್ಲಾಕ್ ಬ್ಲಸ್ಟರ್ ಚಿತ್ರ ಕೆಜಿಎಫ್ ಚಿತ್ರದಿಂದ(KGF Movie) ಪ್ರೇರಿತಗೊಂಡು ಈ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಪುಣೆ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿ ಒಟ್ಟು ನಾಲ್ವರು ಸೆಕ್ಯೂರಿ ಗಾರ್ಡ್‌ಗಳನ್ನು ಕೊಲೈಗೈದಿರುವುದಾಗಿ ಹೇಳಿದ್ದಾನೆ. ಹೆಚ್ಚಿನ ಕೊಲೆಗಳನ್ನು ಮಾಡಿ ಜನಪ್ರಿಯನಾಗಬೇಕು. ಬಳಿಕ ಪೊಲೀಸರ ಹತ್ಯೆ ಮಾಡಿ ಗ್ಯಾಂಗ್‌ಸ್ಟರ್ ಎಂದು ಕರೆಯಿಸಿಕೊಳ್ಳಲು ಮುಂದಾಗಿರುವುದಾಗಿ ಆರೋಪಿ ಶಿವಪ್ರಸಾದ್ ಧುವೆ ಹೇಳಿದ್ದಾನೆ.

ಬಹುಬೇಗನೆ ಜನಪ್ರಿಯನಾಗಬೇಕು, ಕೆಜಿಎಪ್ ಚಿತ್ರದ ರಾಕಿ ಬಾಯ್(KGF Rocky Bhai) ರೀತಿ ಗ್ಯಾಂಗ್‌ಸ್ಟರ್ ಆಗಬೇಕು. ಇದಕ್ಕಾಗಿ ಮಧ್ಯ ರಾತ್ರಿ ಮಲಗಿರುವ ಸೆಕ್ಯೂರಿಟಿ ಗಾರ್ಡ್‌ಗಳನ್ನು ಹತ್ಯೆ ಮಾಡಿದ್ದೇನೆ. ಈತನ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ಮೂವರು ಪುಣೆ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಮೂವರು ಸೆಕ್ಯೂರಿಟಿ ಗಾರ್ಡ್ ಹತ್ಯೆಯಾಗಿರುವುದು ವರದಿಯಾಗಿದೆ. 

2021ರಲ್ಲಿ ಭಾರತದಲ್ಲಿ ಒಟ್ಟು 29,272 ಕೊಲೆ, ಉತ್ತರ ಪ್ರದೇಶ ನಂ.1

ಮೂಸೇವಾಲಾ ಹತ್ಯೆ: ಪ್ರಮುಖ ಆರೋಪಿ ಅಜರ್‌ಬೈಜಾನಲ್ಲಿ ವಶ
ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಚಿನ್‌ ಥಾಪನ್‌ ಬಿಷ್ಣೋಯ್‌ನನ್ನು ಅಜರ್‌ಬೈಜಾನ್‌ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಇನ್ನೊಬ್ಬ ಪ್ರಮುಖ ಆರೋಪಿ ಅನ್ಮೊಲ್‌ ಬಿಷ್ಣೋಯಿಯನ್ನು ಕಿನ್ಯಾದಲ್ಲಿ ಪತ್ತೆಹಚ್ಚಲಾಗಿದೆ ಪಂಜಾಬ್‌ ಎಂದು ಡಿಜಿಪಿ ಗೌರವ್‌ ಯಾದವ್‌ ಮಂಗಳವಾರ ತಿಳಿಸಿದ್ದಾರೆ. ಸಿಧು ಹತ್ಯೆಗೂ ಮುನ್ನ 2 ಹಂತಕರು ನಕಲಿ ಪಾಸ್‌ಪೊರ್ಚ್‌ ಬಳಸಿ ದೇಶ ಬಿಟ್ಟು ಪರಾರಿಯಾಗಿದ್ದರು.

click me!